ಬುಧವಾರ, ಮೇ 18, 2022
28 °C

ಕಾರ್ಯಗಾರಿ ತರಬೇತಿ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರೀಕ್ಷಾ ಮಾರ್ಗದರ್ಶನ

ಪ್ರಾಣ ಚೈತನ್ಯ ಚಿಕಿತ್ಸೆ ಮತ್ತು ತರಬೇತಿ ಸಂಸ್ಥೆ ‘ಉನ್ನತಿ’ ಹೀಲಿಂಗ್ ಫೌಂಡೇಷನ್ ಟ್ರಸ್ಟ್, ಶೈಕ್ಷಣಿಕ ಪರೀಕ್ಷೆ ಎದುರಿಸುವ ಮಕ್ಕಳಿಗಾಗಿ ಶನಿವಾರ ತರಬೇತಿ ಶಿಬಿರ ಏರ್ಪಡಿಸಿದೆ.ಡಾ. ಸರಸ್ವತಿ ಹೆಗಡೆ ಅವರು ಪರೀಕ್ಷೆಯ ಭಯ, ಒತ್ತಡ, ಆತಂಕಗಳನ್ನು ಎದುರಿಸಲು ಮಕ್ಕಳು ಮತ್ತು ಪೋಷಕರಿಗೆ ಮಾರ್ಗದರ್ಶನ ನೀಡಲಿದ್ದಾರೆ.ಸ್ಥಳ: ಗಾಂಧಿಭವನ (ಶಿವಾನಂದ ವೃತ್ತ ಬಳಿ). ಸಂಜೆ 4.30. ಮಾಹಿತಿಗೆ: 98454 26049.ನೃತ್ಯ- ಫಿಟ್‌ನೆಸ್ ಕೇಂದ್ರ

ಅಂತರರಾಷ್ಟ್ರೀಯ ನೃತ್ಯ ಕಲಾವಿದರಾದ ಪೃಥ್ವಿ ಮತ್ತು ರೀ ಅವರ ‘ಜಸ್ಟ್ ಡಾನ್ಸ್’ ಎಂಬ ನೃತ್ಯ ಮತ್ತು ಫಿಟ್‌ನೆಸ್ ಕೇಂದ್ರ ಶನಿವಾರದಿಂದ ಕಾರ್ಯಾರಂಭ ಮಾಡಲಿದೆ. ನಂತರ ವೈವಿಧ್ಯಮಯ ನೃತ್ಯಗಳ ಪ್ರದರ್ಶನ ಇರುತ್ತದೆ.ಇಲ್ಲಿ ಫಿಟ್‌ನೆಸ್ ಮಾತ್ರವಲ್ಲದೆ ಪಾಶ್ಚಾತ್ಯ ಮತ್ತು ಭಾರತೀಯ ನೃತ್ಯಗಳನ್ನು ಕೂಡ ಕಲಿಸಲಾಗುತ್ತದೆ. ಸ್ಥಳ: 55, ಜಸ್ಟ್ ಡಾನ್ಸ್, 3ನೇ ಮಹಡಿ, ಕೋಲ್ಸ್ ರಸ್ತೆ, ಫ್ರೇಜರ್‌ಟೌನ್. ಸಂಜೆ 5.30.ಶಾಸ್ತ್ರೀಯ ಕಲೆ: ಅರ್ಜಿ ಆಹ್ವಾನ

ಭಾರತೀಯ ವಿದ್ಯಾಭವನವು ಶಾಸ್ತ್ರೀಯ ಕಲೆಗಳ ಅಧ್ಯಯನಕ್ಕೆ ಅವಕಾಶ ಮಾಡಿಕೊಡುತ್ತಿದ್ದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಕೀ ಬೋರ್ಡ್,  ಭಾವಗೀತೆ, ವಚನ ಸಂಗೀತ ವಿಷಯಗಳಲ್ಲಿ ಮೂರು ವರ್ಷಗಳ ಡಿಪ್ಲೊಮಾ ಸರ್ಟಿಫಿಕೇಟ್ ಕೋರ್ಸ್ ನಡೆಸುತ್ತಿದೆ. 2011-12ನೇ ಶೈಕ್ಷಣಿಕ ಸಾಲಿನ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ. ವಿಳಾಸ: ಕಲಾಭಾರತಿ, 88, ಮೈಸೂರು ರಸ್ತೆ, ಚಾಮರಾಜಪೇಟೆ. ದೂ: 99649 40440.ಲೇಖನ ಆಹ್ವಾನ

ಸುಗಟೂರು ಮಂಜುನಾಥ್ ಸಂಪಾದಕತ್ವದಲ್ಲಿ ಹೊರಬರುತ್ತಿರುವ ಗಾಣಿಗ ವಿಕ್ರಮ ಮಾಸ ಪತ್ರಿಕೆಯು ವಾರ್ಷಿಕೋತ್ಸವ ಸಂಭ್ರಮದಲ್ಲಿದೆ. ‘ಪ್ರಸಕ್ತ ಸಮಾಜದಲ್ಲಿ ಪತ್ರಿಕೆಗಳ ಪಾತ್ರ’ ಅಥವಾ ‘ಸಮಾಜದ ಜಾಗೃತಿಗೆ ಪತ್ರಿಕೆಗಳು ಪೂರಕ- ಪ್ರೇರಕವೆ?’ ಎಂಬ ವಿಷಯಗಳ ಮೇಲೆ ಲೇಖನಗಳನ್ನು ಆಹ್ವಾನಿಸಿದೆ. ಲೇಖನಗಳು ಸ್ವರಚಿತವಾಗಿದ್ದು ಎಲ್ಲೂ ಪ್ರಕಟವಾಗಿರಬಾರದು.ಆಯ್ಕೆಯಾದ ಬರಹಗಳನ್ನು ‘ಗಾಣಿಗ ವಿಕ್ರಮ’ ಹಾಗೂ ‘ನಗರ ಸ್ಪಂದನ’ದಲ್ಲಿ ಪ್ರಕಟಿಸಲಾಗುತ್ತದೆ. ಅತ್ಯುತ್ತಮ ಬರಹಗಾರರನ್ನು ಪತ್ರಿಕೆಯ ವಾರ್ಷಿಕೋತ್ಸವದಂದು ಗೌರವಿಸಲಾಗುತ್ತದೆ. ಆಸಕ್ತರು ಮಾ.25 ರೊಳಗೆ ಭಾವಚಿತ್ರ ಮತ್ತು ಸ್ವವಿಳಾಸದೊಂದಿಗೆ ಲೇಖನ ಕಳಿಸಬೇಕು.ವಿಳಾಸ: ಗಾಣಿಗ ವಿಕ್ರಮ ಮಾಸಪತ್ರಿಕೆ, ನಂ.30, 2ನೇ ‘ಜಿ’ ಮುಖ್ಯರಸ್ತೆ, 8ನೇ ಬ್ಲಾಕ್, ಕೋರಮಂಗಲ. ದೂ: 99003 33793.ಸಾಮೂಹಿಕ ಉಪನಯನ

ಬಿಇ (ಭಾರತ್ ಎಲೆಕ್ಟ್ರಾನಿಕ್ಸ್) ಸ್ವಕುಲವು ಮೇ 29ರಂದು ಸ್ವಕುಲಸಾಳಿ ಸಮಾಜದ ವಟುಗಳಿಗಾಗಿ ಸಾಮೂಹಿಕ ಉಪನಯನ ಏರ್ಪಡಿಸಿದೆ. ಮೊದಲು ಬಂದವರಿಗೆ ಆದ್ಯತೆ. ಆಸಕ್ತರು ವಟುವಿನ ಹೆಸರು, ವಿಳಾಸ ಮತ್ತು ಇತರ ವಿವರಗಳೊಂದಿಗೆ ಏ.30 ರೊಳಗೆ ನೋಂದಾಯಿಸಿಕೊಳ್ಳಬೇಕು. ಮಾಹಿತಿಗೆ: 90087 23209/ 98808 56464.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.