ಬೆಂಗಳೂರು: ಮಾಧ್ಯಮ ಪ್ರತಿನಿಧಿಗಳ ಮೇಲಿನ ವಕೀಲರ ಹಲ್ಲೆಯನ್ನು ಖಂಡಿಸಿ ನಗರದಲ್ಲಿ ಸೋಮವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿ, ತಪ್ಪಿತಸ್ಥ ವಕೀಲರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳದೇ ಹೋದಲ್ಲಿ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ಎಚ್ಚರಿಸಿದರು.

ನಗರದ ಪ್ರೆಸ್ಕ್ಲಬ್ನಿಂದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯ ಮಹಾತ್ಮ ಗಾಂಧಿ ಪ್ರತಿಮೆಯವರೆಗೆ ತೋಳಿಗೆ ಕಪ್ಪುಪಟ್ಟಿ ಧರಿಸಿದ್ದ ಪತ್ರಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೀಡಿದ ಕರೆಯನ್ವಯ ರಾಜ್ಯದ 23 ಜಿಲ್ಲೆಗಳಿಂದ ಎರಡು ಸಾವಿರ ಕಾರ್ಯನಿರತ ಪತ್ರಕರ್ತರು ಬೆಂಗಳೂರಿಗೆ ಧಾವಿಸಿ ಪತ್ರಕರ್ತರ ಒಗ್ಗಟ್ಟು ಪ್ರದರ್ಶಿಸಿದರು.

ವಕೀಲರ ಹಲ್ಲೆಯಿಂದ ಪತ್ರಕರ್ತರು ನಿರ್ಭೀತರಾಗಿ ಕೆಲಸ ಮಾಡುವ ವಾತಾವರಣವೇ ಇಲ್ಲದಂತಾಗಿದೆ. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಎಚ್ಚರ ವಹಿಸಬೇಕು ಎಂದು ಪತ್ರಕರ್ತರು ಒತ್ತಾಯಿಸಿದರು.

ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ಅಥವಾ ಸಿಬಿಐನಿಂದ ಪ್ರಕರಣದ ತನಿಖೆ ನಡೆಸಬೇಕು. ರಾಜ್ಯಮಟ್ಟದಲ್ಲಿಯೇ ತನಿಖೆ ನಡೆಯಬೇಕೆಂದಾದರೆ ಸಿಐಡಿ ಅಥವಾ ಲೋಕಾಯುಕ್ತಕ್ಕೆ ತನಿಖೆಯನ್ನು ವಹಿಸಬೇಕು. ರಾಜ್ಯ ಹೈಕೋರ್ಟ್ನಿಂದ ಪ್ರಕರಣದ ತನಿಖೆ ನಡೆಸುವುದಾದರೆ, ಕರ್ನಾಟಕದ ಯಾವ ನ್ಯಾಯಾಲಯಗಳಲ್ಲಿಯೂ ಸೇವೆ ಸಲ್ಲಿಸಿರದ ನಿವೃತ್ತ ನ್ಯಾಯಮೂರ್ತಿಗಳ ಸಮಿತಿಯಿಂದಲೇ ತನಿಖೆ ನಡೆಸಬೇಕು ಎಂಬ ಮನವಿಯನ್ನು ಹೈಕೋರ್ಟ್ನ ರಿಜಿಸ್ಟ್ರಾರ್ ಕೃಷ್ಣಭಟ್ ಅವರ ಮೂಲಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸಲಾಯಿತು.

ಘಟನೆಯಿಂದ ನ್ಯಾಯಾಲಯಗಳ ಆವರಣಗಳೊಳಗೆ ಪತ್ರಕರ್ತರು ನಿರ್ಭೀತವಾಗಿ ಪ್ರವೇಶ ಮಾಡುವ ಪರಿಸ್ಥಿತಿ ದೂರವಾಗಿದೆ. ವಕೀಲರು ಇನ್ನು ಮುಂದೆ ಪತ್ರಕರ್ತರಿಗೆ ಕಾನೂನು ನೆರವನ್ನೂ ನೀಡಬಾರದೆಂದು ವಕೀಲರ ಸಂಘದಲ್ಲಿ ತೆಗೆದುಕೊಂಡಿರುವ ನಿರ್ಣಯಗಳ ಬಗ್ಗೆಯೂ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳು ಗಮನ ಹರಿಸಬೇಕು ಎಂಬ ಮನವಿಯನ್ನೂ ಪತ್ರಕರ್ತರು ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸಿದ್ದಾರೆ.

ವಕೀಲರ ಈ ವರ್ತನೆಯಿಂದ ಪತ್ರಕರ್ತರು ನ್ಯಾಯಾಲಯಗಳ ಕಾರ್ಯ ಕಲಾಪಗಳ ವರದಿ ಮಾಡುವುದೇ ಕಷ್ಟವಾಗಲಿದೆ. ವಕೀಲರು ತಾವೇ ಕಾನೂನನ್ನು ಕೈಗೆತ್ತಿಕೊಳ್ಳುತ್ತಿರುವ ಕ್ರಮ ಸರಿಯಲ್ಲ. ಇದು ನ್ಯಾಯಾಂಗ ವ್ಯವಸ್ಥೆಗೇ ಒಂದು ಕಪ್ಪು ಚುಕ್ಕೆ. ಸರ್ಕಾರ ಇಂತಹ ವಕೀಲರನ್ನು ನಿಯಂತ್ರಿಸಲು ಸೋತಿದೆ. ಘಟನೆ ನಡೆದು ನಾಲ್ಕು ದಿನಗಳಾದರೂ ಇನ್ನೂ ಪೊಲೀಸರು ಬೆರಳೆಣಿಕೆಯ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಪತ್ರಕರ್ತರು ದೂರಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಮೊದಲಿಯಾರ್, ಬೆಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ ಎಂ.ಎ.ಪೊನ್ನಪ್ಪ, ಬೆಂಗಳೂರು ವರದಿಗಾರರ ಕೂಟದ ಅಧ್ಯಕ್ಷ ಕೆ.ವಿ.ಪ್ರಭಾಕರ್, ಬೆಂಗಳೂರು ವೃತ್ತ ಪತ್ರಿಕಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ರಾಮಣ್ಣ, ಕೆಯುಡಬ್ಲ್ಯುಜೆ ಪ್ರಧಾನ ಕಾರ್ಯದರ್ಶಿ ಎನ್.ರಾಜು, ಪ್ರೆಸ್ಕ್ಲಬ್ ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಣೈ ಸೇರಿದಂತೆ ನಗರದ ವಿವಿಧ ಪತ್ರಕರ್ತರ ಸಂಘಗಳ ಸದಸ್ಯರು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಪತ್ರಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನಾ ಸಭೆಯಲ್ಲಿ ಹಿರಿಯ ಪತ್ರಕರ್ತ ಎಸ್.ವಿ.ಜಯಶೀಲರಾವ್, ಜಿ.ಕೆ.ಸತ್ಯ, ವಿಶ್ವೇಶ್ವರ ಭಟ್, ಲಕ್ಷ್ಮಣಹೂಗಾರ್ ಮೊದಲಾದವರು ಮಾತನಾಡಿದರು.

8 ರಿಂದ ನ್ಯಾಯಾಂಗ ತನಿಖೆ: ಮುಖ್ಯಮಂತ್ರಿ
ಮಂಗಳೂರು: ಬೆಂಗಳೂರಿನಲ್ಲಿ ಮಾಧ್ಯಮ ಸಿಬ್ಬಂದಿ ಮೇಲೆ ವಕೀಲರು ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಇದೇ 8ರಂದು ನ್ಯಾಯಾಂಗ ತನಿಖೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆ ಪ್ರಚಾರಕ್ಕಾಗಿ ಉಡುಪಿಗೆ ತೆರಳುವ ಮಾರ್ಗದಲ್ಲಿ ಸೋಮವಾರ ಇಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಪತ್ರಕರ್ತರ ಜತೆ ಮಾತನಾಡಿ, ಯಾರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು. ತನಿಖೆಯ ವ್ಯಾಪ್ತಿ ಮತ್ತಿತರ ವಿಚಾರಗಳ ಬಗ್ಗೆ 8ರಂದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ವಕೀಲರು ಮತ್ತು ಮಾಧ್ಯಮದ ನಡುವೆ ಸೌಹಾರ್ದ ವಾತಾವರಣ ಸೃಷ್ಟಿಯಾಗಬೇಕು.ಪ್ರತಿಭಟನೆ, ಮೆರವಣಿಗೆಗಳನ್ನು ಕೈಬಿಡಿ ಎಂದು ಉಭಯ ಕಡೆಯವರಿಗೂ ಮನವಿ ಮಾಡಿದ್ದೇನೆ, ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸಿದೆ ಎಂದರು.

ಬಿಎಸ್ವೈ ಪ್ರಚಾರಕ್ಕೆ: ಉಪ ಚುನಾವಣೆ ಪ್ರಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗವಹಿಸುವುದು ನೂರಕ್ಕೆ ನೂರು ನಿಶ್ಚಿತ ಎಂದ ಡಿ.ವಿ.ಎಸ್ ತಾವು ಮೂರು ಹಂತಗಳಲ್ಲಿ ಚುನಾವಣಾ ಪ್ರಚಾರ ನಡೆಸುವೆ. ರಾಷ್ಟ್ರೀಯ ನಾಯಕರಿಗೆ ಈವರೆಗೆ ಆಹ್ವಾನ ನೀಡಿಲ್ಲ ಎಂದರು.

`ಗೌರವದ ಸ್ಥಾನಮಾನ ಇಲ್ಲದಲ್ಲಿ ಇರುವುದಿಲ್ಲ~ ಎಂಬ ಯಡಿಯೂರಪ್ಪ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡದ ಅವರು, ಈ ಬಗ್ಗೆ ಹೇಳಿಕೆ ನೀಡಿದವರನ್ನೇ ಪ್ರಶ್ನಿಸಿ ಎಂದಷ್ಟೇ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.