ಬುಧವಾರ, ಏಪ್ರಿಲ್ 21, 2021
33 °C

ಕಾಲು ಕಳೆದುಕೊಂಡ ಫುಟ್‌ಬಾಲ್ ಆಟಗಾರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ (ಐಎಎನ್‌ಎಸ್): ರಾಷ್ಟ್ರ ಮಟ್ಟದ ಫುಟ್‌ಬಾಲ್ ಹಾಗೂ ವಾಲಿಬಾಲ್ ಆಟಗಾರ್ತಿ ಸೋನು ಸಿನ್ಹಾ ಅವರು ರೈಲ್ವೆ ಅಪಘಾತದಲ್ಲಿ ತಮ್ಮ ಎಡಗಾಲು ಕಳೆದುಕೊಂಡಿದ್ದಾರೆ.

ಸೋಮವಾರ ಪರೀಕ್ಷೆಗೆಂದು ನವದೆಹಲಿಗೆ ತೆರಳುತ್ತಿದ್ದಾಗ ಚೆನಾಟಿ-ಬರೇಲಿ ರೈಲು ನಿಲ್ದಾಣದ ನಡುವೆ ದುಷ್ಕರ್ಮಿಗಳು ಸೋನು ಅವರನ್ನು ಪದ್ಮಾವತಿ ಎಕ್ಸ್‌ಪ್ರೆಸ್ ರೈಲಿನಿಂದ ತಳ್ಳಿದಾಗ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಟ್ರ್ಯಾಕ್‌ನಲ್ಲಿ ಬಿದ್ದಾಗ ಇನ್ನೊಂದು ರೈಲು ಅವರ ಕಾಲಿನ ಮೇಲೆ ಹಾದು ಹೋಗಿದೆ.

 

ದುಷ್ಕರ್ಮಿಗಳು ರೈಲಿನಲ್ಲಿ ದರೋಡೆ ನಡೆಸಲು ಯತ್ನಿಸಿದಾಗ ಅದನ್ನು ಸೋನು ತಡೆಯಲು ಮುಂದಾದರು ಎನ್ನಲಾಗಿದೆ. 25 ವರ್ಷ ವಯಸ್ಸಿನ ಸೋನು ಲಖನೌದಲ್ಲಿ ರೈಲು ಹತ್ತಿದ್ದರು. ಅವರಿಗೆ ಕೇಂದ್ರ ಕ್ರೀಡಾ ಸಚಿವ 25 ಸಾವಿರ ರೂ. ಹಣ ಘೋಷಿಸಿದ್ದಾರೆ. ಅಷ್ಟು ಮಾತ್ರವಲ್ಲದೇ, ಈ ಸಂಬಂಧ ತನಿಖೆ ನಡೆಸುವಂತೆ ರೈಲ್ವೆ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

ಗೌತಮಬುದ್ಧ ನಗರದ ಸೋನು ಕಾನೂನು ಪದವೀಧರೆ. ಅವರು ಸಿಐಎಸ್‌ಎಫ್ ಪರೀಕ್ಷೆ ಬರೆಯಲು ನವದೆಹಲಿಗೆ ತೆರಳುತ್ತಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.