ಬರಹ ಎಂಬುದರ ರೆಕ್ಕೆ ಎಲ್ಲೆಡೆ ಹರಡಿದೆ. ಅದನ್ನು ವರ್ಗೀಕರಿಸುವುದಾದರೂ ಹೇಗೆ? ಸರಳವಾಗಿ ಕಥೆ ಎಂದು ಕರೆಸಿಕೊಳ್ಳುವ ಅವು ಏಕಕಾಲಕ್ಕೆ ಕಿರುಚಿತ್ರ, ಐತಿಹ್ಯ, ಪ್ರಬಂಧ, ನೀತಿ ಕತೆ, ನಾಣ್ಣುಡಿ, ತಮಾಷೆ, ಕಟ್ಟುಕಥೆ, ತಥ್ಯ, ಪ್ರಾರ್ಥನೆ ಅಥವಾ ಸರಳ ಗ್ರಹಿಕೆಗಳೂ ಆಗಿರಬಹುದು...
-ಲಿದಿಯಾ ಡೇವಿಸ್

ನನ್ನ ಗಂಡ ಈಗ ಇನ್ನೊಬ್ಬಳನ್ನು ಮದುವೆಯಾಗಿದ್ದು ಆ ಇನ್ನೊಬ್ಬಳು ನನಗಿಂತ ಕುಳ್ಳಗೆ, ಐದಡಿ ಎತ್ತರವನ್ನೂ ಮೀರದೆ, ದಷ್ಟಪುಷ್ಟವಾಗಿರುವಾಗ ಸಹಜವಾಗಿಯೇ ಅವನು ಮೊದಲಿಗಿಂತ ಎತ್ತರವಾಗಿ, ತೆಳ್ಳಗಾಗಿ ಕಾಣಿಸುತ್ತಾನೆ; ಅವನ ತಲೆಯೂ ಸಣ್ಣಗೆ ಕಾಣಿಸುತ್ತದೆ. ಅವಳ ಪಕ್ಕ ನಿಂತರೆ ಮೂಳೆಮೂಳೆಯಾಗಿ, ಎಡವಟ್ಟಾಗಿ ಕಾಣುವ ನಾನು ಆಯಕಟ್ಟಿನ ಜಾಗದಲ್ಲಿ ನಿಲ್ಲಲು ಅಥವಾ ಕುಳಿತುಕೊಳ್ಳಲು ಪ್ರಯತ್ನಿಸಿದರೂ ಕೂಡ ನನಗಿಂತ ಕುಳ್ಳಗಿರುವ ಅವಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಲಾಗದು. ಹಿಂದೊಮ್ಮೆ ನನಗೆ ಅವನು ಮತ್ತೆ ಮದುವೆಯಾಗುವುದೇ ಆದರೆ ಎಂಥವಳನ್ನು ಮದುವೆಯಾಗಬೇಕೆಂಬ ಬಗ್ಗೆ ಸ್ಪಷ್ಟ ಕಲ್ಪನೆಯಿತ್ತು. ಆದರೆ ಅವನ ಯಾವ ಗೆಳತಿಯೂ ನನ್ನ ಮನಸ್ಸಿನಲ್ಲಿದ್ದವಳಂತೆ ತೋರಲಿಲ್ಲ; ಇವಳಂತೂ ಹಾಗಿರಲೇ ಇಲ್ಲವೆನ್ನಿ.

ಕಳೆದ ಬೇಸಿಗೆಯಲ್ಲಿ ಅವರು ನನ್ನ ಮಗನನ್ನು, ಅಂದರೆ ನನ್ನ ಅವನ ಮಗನನ್ನು, ನೋಡುವುದಕ್ಕೆಂದು ಒಂದೆರಡು ವಾರ ಇಲ್ಲಿಗೆ ಬಂದಿದ್ದರು. ಆಗ ಇರುಸುಮುರುಸುಂಟು ಮಾಡಿದ ಕೆಲವು ಕ್ಷಣಗಳು ಹೇಗೋ ಹಾಗೆ ಕೆಲವು ಒಳ್ಳೆಯ ಕ್ಷಣಗಳೂ ಇದ್ದು ಆ ಒಳ್ಳೆಯ ಕ್ಷಣಗಳು ಕೂಡ ತುಸು ಅಸಹನೀಯವಾಗಿದ್ದುವೆನ್ನಬೇಕು. ಬಹುಶಃ ಅವಳಿಗೆ ಹುಷಾರಿಲ್ಲವೆಂದೋ ಏನೋ - ನೋವಿನಿಂದ ಮುಸುಗುಡುತ್ತಿದ್ದವಳ ಕಣ್ಣುಗಳ ಸುತ್ತ ಕಪ್ಪು ಉಂಗುರಗಳು - ಅವರಿಬ್ಬರೂ ನನ್ನಿಂದ ಸಾಕಷ್ಟು ಸೌಲಭ್ಯಗಳನ್ನು ನಿರೀಕ್ಷಿಸುತ್ತಿದ್ದಂತಿತ್ತು.

ನನ್ನ ಮನೆಯಲ್ಲಿ ಅವರು ನನ್ನ ಫೋನನ್ನು, ಇತರ ವಸ್ತುಗಳನ್ನು ಉಪಯೋಗಿಸುತ್ತಿದ್ದರು; ಬೀಚಿನಿಂದ ನಿಧಾನವಾಗಿ ನಡೆಯುತ್ತ ನನ್ನ ಮನೆಗೆ ಬಂದು ಸ್ನಾನ ಮಾಡಿ, ನಂತರ ಶುಭ್ರರಾಗಿ ತಮ್ಮಿಬ್ಬರ ನಡುವೆ ನನ್ನ ಮಗನನ್ನು ನಡೆಸುತ್ತಾ, ಕೈಕೈ ಹಿಡಿದುಕೊಂಡು ಹೋಗುತ್ತಿದ್ದರು. ಅವರಿಗಾಗಿ ನಾನೊಂದು ಪಾರ್ಟಿ ಕೊಟ್ಟೆ. ಪಾರ್ಟಿಯಲ್ಲಿ ಅವರು ಪರಸ್ಪರ ನರ್ತಿಸಿದರು, ನನ್ನ ಸ್ನೇಹಿತರನ್ನು ಮುದಗೊಳಿಸಿದರು, ಕೊನೆಯವರೆಗೂ ಇದ್ದರು. ನಾನಂತೂ ಏನೇ ಆಗಲಿ, ನನ್ನ ಮಗನಿಗಾಗಿ, ಬಹುಮಟ್ಟಿಗೆ ಅವನಿಗಾಗಿಯೇ, ನಾವೆಲ್ಲರೂ ಒಟ್ಟಿಗಿರಬೇಕೆಂದು ತೀರ್ಮಾನಿಸಿಕೊಂಡಿದ್ದವಳು ಅವರೆಲ್ಲ ಹೊರಟುಹೋಗುವ ಹೊತ್ತಿಗೆ ಪೂರಾ ದಣಿದುಹೋಗಿದ್ದೆ.

ಅವರು ಹೊರಡುವುದಕ್ಕೆ ಮುಂಚಿನ ರಾತ್ರಿ ನಾವು ನನ್ನ ಗಂಡನ ತಾಯಿಯ ಜೊತೆ ಒಂದು ವಿಯೆಟ್ನಾಮೀ ರೆಸ್ಟೊರಾಂಟಿನಲ್ಲಿ ಊಟ ಮಾಡಬೇಕೆಂದಿದ್ದೆವು. ಅವನ ತಾಯಿ ಇನ್ನೊಂದು ನಗರದಿಂದ ವಿಮಾನದಲ್ಲಿ ಬರಲಿದ್ದು, ಮರುದಿನ ಅವರು ಮೂವರೂ ಮಿಡ್ವೆಸ್ಟಿಗೆ ಹೋಗುವವರಿದ್ದರು. ಅವನ ಹೆಂಡತಿಯ ತಂದೆ ತಾಯಿ ಅವರಿಗೆಂದೇ ಮದುವೆಯ ದೊಡ್ಡದೊಂದು ಪಾರ್ಟಿ ಕೊಡಲಿದ್ದು ಅದರಲ್ಲಿ ಅವನ ಹೆಂಡತಿ ತಾನು ಮೊದಲಿಂದ ಯಾರ ನಡುವೆ ಬೆಳೆದುಬಂದಿದ್ದಳೋ ಆ ದಢೂತಿ ರೈತರನ್ನು, ಅವರ ಕುಟುಂಬದವರನ್ನು ಭೇಟಿಯಾಗಬಹುದಾಗಿತ್ತು.

ಆ ರಾತ್ರಿ ನಾನು ನಗರದಲ್ಲಿ ಅವರು ಉಳಿದುಕೊಂಡಿದ್ದೆಡೆಗೆ ಹೋದಾಗ ಅವರು ನನ್ನ ಮನೆಯಲ್ಲಿ ಬಿಟ್ಟುಹೋಗಿದ್ದ, ಅದುವರೆಗೆ ನನ್ನ ಕೈಗೆ ಸಿಕ್ಕಿದ್ದ ವಸ್ತುಗಳನ್ನೂ ತೆಗೆದುಕೊಂಡು ಹೋದೆ: ಅಲಮಾರಿನ ಪಕ್ಕ ಬಿದ್ದಿದ್ದ ಒಂದು ಪುಸ್ತಕ ಮತ್ತು ಇನ್ನೆಲ್ಲೋ ಸಿಕ್ಕಿದ ಅವನದೊಂದು ಕಾಲುಚೀಲ. ಆ ಕಟ್ಟಡದವರೆಗೂ ಡ್ರೈವ್ ಮಾಡಿಕೊಂಡು ಹೋದಾಗ ಫುಟ್ಪಾತಿನಲ್ಲಿ ಓಡಾಡುತ್ತಿದ್ದ ನನ್ನ ಗಂಡ ನನ್ನನ್ನು ನೋಡಿದ್ದೇ ಓಡಿಬಂದ. ನಾನು ಒಳಗೆ ಕಾಲಿಡುವುದಕ್ಕೆ ಮೊದಲೇ ಅವನು ನನ್ನ ಜೊತೆ ಮಾತಾಡಬೇಕೆಂದಿದ್ದ. ತನ್ನ ತಾಯಿಯ ಮನಸ್ಥಿತಿ ಸರಿಯಾಗಿಲ್ಲವೆಂದೂ ಆಕೆ ಅವರ ಜೊತೆ ಇರಲಾರಳೆಂದೂ ನಾನು ದಯವಿಟ್ಟು ನನ್ನ ಜೊತೆ ಅವಳನ್ನೂ ಕರೆದುಕೊಂಡು ಹೋಗಬೇಕೆಂದೂ ಹೇಳಿದ. ನಾನು ಒಂದಿಷ್ಟೂ ಯೋಚಿಸದೆ ಆಗಲಿ, ಕರೆದುಕೊಂಡು ಹೋಗುತ್ತೇನೆ ಎಂದುಬಿಟ್ಟೆ - ಹಿಂದೆಲ್ಲ ಆಕೆ ನನ್ನ ಮನೆಯೊಳಗನ್ನು ಹೇಗೆ ಹೇಗೋ ನೋಡುತ್ತಿರುವಾಗ ನಾನು ಹೇಗೆಲ್ಲ ಸ್ವಚ್ಛಗೊಳಿಸುತ್ತಿದ್ದೆನೆಂದು ಸಂಪೂರ್ಣವಾಗಿ ಮರೆತುಬಿಟ್ಟು.

ಲಾಬಿಯಲ್ಲಿ ಪಕ್ಕಪಕ್ಕ ಎರಡು ಆರಾಮ ಕುರ್ಚಿಗಳಲ್ಲಿ ಸಪೂರ ಹೆಂಗಸರಿಬ್ಬರು, ಬೇರೆ ಬೇರೆ ರೀತಿಯಲ್ಲಿ ಸುಂದರಿಯರೇ ಎನ್ನಬಹುದಾದ ಇಬ್ಬರು, ಬೇರೆ ಬೇರೆ ಛಾಯೆಗಳ ಲಿಪ್ಸ್ಟಿಕ್ ಹಚ್ಚಿಕೊಂಡಿದ್ದ ಇಬ್ಬರು, ನಾನು ನಂತರ ಬಗೆದಂತೆ, ಬೇರೆ ಬೇರೆ ರೀತಿಯಲ್ಲಿ ಕೃಶವಾಗಿದ್ದ ಇಬ್ಬರು ಕುಳಿತಿದ್ದರು. ಅವರಿಬ್ಬರು ಅಲ್ಲಿ ಕುಳಿತಿದ್ದಕ್ಕೆ ಕಾರಣ ಅವನ ಅಮ್ಮನಿಗೆ ಮಹಡಿ ಹತ್ತಿಹೋಗುವ ಭಯ. ಅವಳಿಗೆ ವಿಮಾನಯಾನದ ಭಯವಿರಲಿಲ್ಲ, ಆದರೆ ಒಂದು ಅಪಾರ್ಟ್ಮೆಂಟಿನಲ್ಲಿ ಒಂದಕ್ಕಿಂತ ಹೆಚ್ಚು ಮಹಡಿ ಹತ್ತಿಹೋಗುವುದೆಂದರೆ ಭಯ. ಆ ಭಯ ಮೊದಲಿಗಿಂತ ಈಗ ಮತ್ತಷ್ಟು ಬಿಗಡಾಯಿಸಿತ್ತು. ಹಿಂದೆಲ್ಲ ಅವಳು, ತನಗೆ ಬೇಕಿದ್ದರೆ, ಎಂಟನೇ ಮಹಡಿಯಲ್ಲಿ ಕೂಡ ಆರಾಮವಾಗಿ ಇರುತ್ತಿದ್ದಳು ಕಿಟಕಿಗಳನ್ನೆಲ್ಲ ಮುಚ್ಚಿಬಿಟ್ಟಿದ್ದರೆ.

ನಾವೆಲ್ಲರೂ ಡಿನ್ನರಿಗೆ ಹೋಗುವ ಮುಂಚೆ ನನ್ನ ಗಂಡ ಪುಸ್ತಕವನ್ನು ಅಪಾರ್ಟ್ಮೆಂಟಿಗೆ ಕೊಂಡೊಯ್ದ. ಆದರೆ ನಾನು ರಸ್ತೆಯಲ್ಲೇ ಕೊಟ್ಟಿದ್ದ ಕಾಲುಚೀಲವನ್ನು ಅವನು ತನ್ನ ಹಿಂಭಾಗದ ಜೇಬಿನಲ್ಲೇ ಇಟ್ಟುಕೊಂಡಿದ್ದು, ಅದು ರೆಸ್ಟೋರೆಂಟಿನಲ್ಲಿ ಡಿನ್ನರಿಗೆ ಕುಳಿತಾಗ ಕೂಡ ಅಲ್ಲಿಯೇ ಇತ್ತು - ಅವನ ಅಮ್ಮ ಕಪ್ಪು ಉಡುಪು ಧರಿಸಿ ಖಾಲಿ ಕುರ್ಚಿಯ ಎದುರಿನಲ್ಲಿ ಕೂತು ಒಮ್ಮಮ್ಮೆ ನನ್ನ ಮಗನ ಜೊತೆ, ಅವನ ಕಾರುಗಳ ಜೊತೆ ಆಟವಾಡುತ್ತಿರುವಾಗ, ಒಮ್ಮಮ್ಮೆ ನನ್ನ ಗಂಡನನ್ನು, ನನ್ನನ್ನು, ಆಮೇಲೆ ಅವನ ಹೆಂಡತಿಯನ್ನು ತನ್ನ ಊಟದಲ್ಲಿರಬಹುದಾದ ಮೆಣಸು ಮತ್ತು ಇತರ ಸಂಬಾರ ಪದಾರ್ಥಗಳ ಬಗ್ಗೆ ಪ್ರಶ್ನಿಸುತ್ತಿರುವಾಗ ಕೂಡ. ಆಮೇಲೆ ನಾವೆಲ್ಲರೂ ರೆಸ್ಟೋರೆಂಟನ್ನು ಬಿಟ್ಟು ಹೊರಗಡೆ ಪಾರ್ಕಿಂಗ್ ಲಾಟಿನಲ್ಲಿ ನಿಂತಿರುವಾಗ ಅವನು ತನ್ನ ಜೇಬಿನಿಂದ ಹೊರತೆಗೆದ ಆ ಕಾಲುಚೀಲವನ್ನು, ಅದು ಹೇಗೆ ಅಲ್ಲಿಗೆ ಬಂತೆನ್ನುವಂತೆ, ನೋಡಿದ.

ಅದೊಂದು ತೀರ ಸಣ್ಣ ಸಂಗತಿ ಬಿಡಿ. ಆದರೆ ನಾನು ಆ ಕಾಲುಚೀಲವನ್ನು ಮರೆಯಲಾಗಲಿಲ್ಲವೇಕೆಂದರೆ ಅದೊಂದು ಕಾಲುಚೀಲ ನಗರದ ಪೂರ್ವ ಭಾಗದಲ್ಲಿ, ಮಸಾಜ್ ಪಾರ್ಲರುಗಳ ಬಳಿಯ ಒಂದು ವಿಯೆಟ್ನಾಮೀ ಘೆಟ್ಟೋದಲ್ಲಿ, ಅಪರಿಚಿತ ಸ್ಥಳವೊಂದರಲ್ಲಿ ಅವನ ಹಿಂಭಾಗದ ಜೇಬಿನಲ್ಲಿದ್ದದ್ದು; ಮತ್ತೆ ನಮ್ಮಲ್ಲಿ ಯಾರಿಗೂ ನಗರದ ಈ ಭಾಗ ಗೊತ್ತಿರಲಿಲ್ಲದಿದ್ದರೂ ನಾವೆಲ್ಲ ಅಲ್ಲಿ ಒಟ್ಟಿಗಿದ್ದದ್ದು; ವಿಚಿತ್ರ ಸಂಗತಿಯೆಂದರೆ, ನನಗೆ ಅನ್ನಿಸಿದ್ದ ಹಾಗೆ, ಅವನೂ ನಾನೂ ಇನ್ನೂ ದಂಪತಿಯಾಗಿರುವಂತೆ, ಬಹು ಕಾಲದಿಂದಲೂ ನಾವು ದಂಪತಿಯಾಗಿಯೇ ಇರುವಂತೆ ಇದ್ದುಬಿಟ್ಟದ್ದು.

ನಾವು ಊರೂರುಗಳಲ್ಲಿ ಒಟ್ಟಿಗೆ ಸಾಗಿಸಿದ ನಮ್ಮ ಬದುಕಿನಲ್ಲಿ ನಾನು ಹುಡುಕಿ ಕೈಗೆತ್ತಿಕೊಂಡ, ಬೆವರಿನಿಂದ ರಟ್ಟಿನಂತಾದ, ಹಿಮ್ಮಡಿಯಲ್ಲಿ ಹರಿದುಹೋದ ಅವನ ಇತರ ಎಲ್ಲ ಕಾಲುಚೀಲಗಳ ಬಗ್ಗೆ, ಆಮೇಲೆ ಆ ಕಾಲುಚೀಲಗಳೊಳಗಿನ ಅವನ ಪಾದಗಳ ಬಗ್ಗೆ, ಆ ಪಾದಗಳ ಹಿಂಬದಿಯಲ್ಲಿ ಹೊಳೆಯುತ್ತಿದ್ದ ಚರ್ಮದ ಬಗ್ಗೆ, ಅಂಗಾಲಿನಲ್ಲಿ ಸವೆದುಹೋಗಿದ್ದ ನೇಯ್ಗೆಯ ಬಗ್ಗೆ, ರೂಮಿನ ಬೇರೆ ಬೇರೆ ಮೂಲೆಗಳತ್ತ ಕಾಲಿನ ಹೆಬ್ಬೆರಳು ತೋರಿಸುವಂತೆ ಅವನು ತನ್ನ ಮೊಳಕಾಲುಗಳನ್ನು ಒಂದರ ಮೇಲೊಂದು ಇಟ್ಟುಕೊಂಡು ಹಾಸಿಗೆಯಲ್ಲಿ ಅಂಗಾತವಾಗಿ ಓದುತ್ತ ಮಲಗಿರುತ್ತಿದ್ದ ಬಗ್ಗೆ, ತನ್ನ ಪಾದಗಳನ್ನು ಒಂದು ಹಣ್ಣಿನ ಎರಡು ಭಾಗಗಳಂತೆ ಒಟ್ಟಿಗೆ ತಂದುಕೊಂಡು ಮಗ್ಗುಲಾಗುತ್ತಿದ್ದ ಬಗ್ಗೆ, ಓದುತ್ತಲೇ ಪಾದಗಳವರೆಗೆ ಕೈಚಾಚಿ ತನ್ನ ಕಾಲುಚೀಲಗಳನ್ನು ಕಳಚಿ ಮುದ್ದೆಮಾಡಿ ನೆಲಕ್ಕೆಸೆದು ಮತ್ತೆ ಕೈಚಾಚಿ, ಓದುತ್ತಿರುವಂತೆಯೇ ತನ್ನ ಕಾಲ ಹೆಬ್ಬೆರಳು ಸವರುತ್ತಿದ್ದುದರ ಬಗ್ಗೆ, ಒಮ್ಮಮ್ಮೆ ಓದಿದ್ದನ್ನೂ ಯೋಚಿಸಿದ್ದನ್ನೂ ನನ್ನೊಡನೆ ಹಂಚಿಕೊಳ್ಳುತ್ತಿದ್ದುದರ ಬಗ್ಗೆ, ಒಮ್ಮಮ್ಮೆ ನಾನು ರೂಮಿನಲ್ಲೋ ಅಥವಾ ಇನ್ನೆಲ್ಲೋ ಇರುವುದನ್ನು ಕೂಡ ತಿಳಿಯದವನಂತೆ ವರ್ತಿಸುತ್ತಿದ್ದುದರ ಬಗ್ಗೆ ಯೋಚಿಸುವುದನ್ನು ಬಿಟ್ಟು ನನಗೀಗ ಬೇರೆ ದಾರಿಯೇ ಇಲ್ಲ.

ಅವರೆಲ್ಲ ಹೊರಟುಹೋದ ಮೇಲೂ ಅವರು ಹಿಂದೆ ಬಿಟ್ಟುಹೋಗಿದ್ದ ಅಥವಾ ಅವನ ಹೆಂಡತಿ ನನ್ನ ಜಾಕೆಟ್ಟಿನ ಜೇಬಿನಲ್ಲಿ ಬಿಟ್ಟುಹೋಗಿದ್ದ ಒಂದು ಕೆಂಪು ಬಾಚಣಿಗೆ, ಒಂದು ಕೆಂಪು ಲಿಪ್ಸ್ಟಿಕ್ ಮತ್ತು ಮಾತ್ರೆಗಳ ಒಂದು ಬಾಟಲು, ಹೀಗೆ ಕೆಲವು ಇತರ ವಸ್ತುಗಳನ್ನು ಆಮೇಲೆ ಕೂಡ ನಾನು ಮರೆಯಲಾಗಲಿಲ್ಲ. ಕೆಲವು ದಿನಗಳವರೆಗೆ ಆ ವಸ್ತುಗಳು ಮೂರು ಮೂರರ ಒಂದೊಂದು ಗುಂಪಾಗಿ ಅಡುಗೆಮನೆಯ ಒಂದು ಕೌಂಟರಿನ ಮೇಲೋ ಅಥವಾ ಇನ್ನೊಂದರ ಮೇಲೋ ಕೂತಿರುತ್ತಿದ್ದು, ಮಾತ್ರೆಗಳ ಆ ಬಾಟಲು ಮುಖ್ಯವಾಗಿರಬಹುದಾದ ಕಾರಣ ಅದನ್ನು ಅವಳಿಗೆ ಕಳುಹಿಸಬೇಕೆನಿಸಿದರೂ ಕಡೆಗೆ ಅವಳು ಮತ್ತೆ ಬಂದಾಗ ಕೊಟ್ಟರಾದೀತೆಂದು ತೀರ್ಮಾನಿಸಿ ಒಂದು ಡ್ರಾವರಿನೊಳಗೆ ಇಟ್ಟ ಮೇಲೆ ಆ ಬಾಟಲು ಅವಳಿಗೆ ಬೇಕೋ ಬೇಡವೋ ಎಂದು ಕೇಳುವುದನ್ನು ಕೂಡ ಮರೆಯತೊಡಗಿದ ನನಗೆ ಅವರು ಮತ್ತೆ ಬರುವ ಕಾಲ ತುಂಬ ದೂರವಿಲ್ಲವೆನಿಸಿದಾಗ, ಆ ಬಗ್ಗೆ ಮೊದಲಿನಿಂದ ಮತ್ತೊಮ್ಮೆ ಯೋಚಿಸಬೇಕೆಂಬ ವಿಚಾರದಿಂದಲೇ ಸುಸ್ತಾಗತೊಡಗಿತು.

2013ನೇ ಸಾಲಿನ ಪ್ರತಿಷ್ಠಿತ ಮ್ಯಾನ್ಬುಕರ್ ಅಂತರರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾದ ಲಿದಿಯಾ ಅಮೆರಿಕ ಮೂಲದ ಲೇಖಕಿ. ಕಾದಂಬರಿ, ಪ್ರಬಂಧ ಮುಂತಾದ ಪ್ರಕಾರಗಳಲ್ಲಿ ಕೈ ಆಡಿಸಿದ್ದರೂ ಕಥೆ ಅವರ ನೆಚ್ಚಿನ ಮಾಧ್ಯಮ. ಅರವತ್ತಾರರ ಹರೆಯದ ಲಿದಿಯಾರಿಗೆ ಬಾಲ್ಯದಿಂದಲೇ ಸಾಹಿತ್ಯದ ನಂಟು. `ದಿ ಥರ್ಟೀನ್ತ್ ವುಮನ್ ಅಂಡ್ ಅದರ್ ಸ್ಟೋರೀಸ್', `ಬ್ರೇಕ್ ಇಟ್ ಡೌನ್' ಸೇರಿದಂತೆ ಈವರೆಗೆ ಹತ್ತೊಂಬತ್ತು ಕೃತಿಗಳನ್ನು ಅವರು ಹೊರತಂದಿದ್ದಾರೆ. ಸಂಕ್ಷಿಪ್ತ ಹಾಗೂ ಕರಾರುವಕ್ಕಾದ ಕಾವ್ಯಾತ್ಮಕ ಗುಣದಿಂದ ಅವರ ಕೃತಿಗಳು ಸೆಳೆಯುತ್ತವೆ ಎಂಬುದು ಬುಕರ್ ತೀರ್ಪುಗಾರರ ಮೆಚ್ಚುಗೆಯ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.