ಸಾವಿರಾರು ಸಂಖ್ಯೆಯಲ್ಲಿರುವ ರಾಜ್ಯದ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿರುವ ಶಿಕ್ಷಕರು, ಉಪನ್ಯಾಸಕರ ವರ್ಗಾವಣೆ, ಸೇವಾ ಜೇಷ್ಠತಾ ಪಟ್ಟಿ ಮತ್ತು ವಿವಿಧ ಕಾಲೇಜು ಮತ್ತು ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರಗಳನ್ನು ವೆಬ್ಸೈಟಿನಲ್ಲಿ ಪ್ರಕಟವಾಗುತ್ತಿವೆ. ಸಾರ್ವಜನಿಕ ಶಿಕ್ಷಣ ಆಯುಕ್ತರ ಕಛೇರಿಯಲ್ಲಿ ಸ್ವೀಕರಿಸಲಾಗುವ ಸಾವಿರಾರು ಪತ್ರಗಳ ವಿವರಗಳನ್ನೂ ಇಲಾಖೆಯ ವೆಬ್ಸೈಟಿನಲ್ಲಿ ನೋಡುವ ಅನುಕೂಲ ಕಲ್ಪಿಸಲಾಗಿದೆ.

ಆದರೆ ಕೇವಲ 500 ರಷ್ಟಿರುವ ಪ್ರಥಮ ದರ್ಜೆ ಕಾಲೇಜುಗಳ ಪ್ರಾಧ್ಯಾಪಕರ ಸೇವಾ ವಿವರಗಳನ್ನು ನಿರ್ವಹಿಸುವ ಕಾಲೇಜು ಶಿಕ್ಷಣ ಇಲಾಖೆ ಕಾಲೇಜುಗಳ ವಿವರ, ವರ್ಗಾವಣೆ, ವಿವಿಧ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರ, ಜೇಷ್ಠತಾ ಪಟ್ಟಿಗಳನ್ನು ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸಲು ಕ್ರಮ ಕೈಗೊಂಡಿರುವುದಿಲ್ಲ. ಇದರಿಂದ ವರ್ಗಾವಣೆ ಬಯಸುವ ಅಧ್ಯಾಪಕರು ತಮ್ಮ ಸೇವಾ ಹಿರಿತನ, ಖಾಲಿ ಹುದ್ದೆ ವಿವರ ಪಡೆಯಲು ಮುಖ್ಯ ಕಚೇರಿಗೆ ಹೋಗಬೇಕಿದೆ. ಪ್ರಾಂಶುಪಾಲರು ಆಡಳಿತಾತ್ಮಕ ವಿವರಗಳಿಗೆ ಮುಖ್ಯ ಕಚೇರಿಯನ್ನು ಅವಲಂಬಿಸಬೇಕಿದೆ.ಈ ವಿವರಗಳನ್ನು ಇಲಾಖೆ ವೆಬ್ಸೈಟ್ನಲ್ಲಿ ಪ್ರಕಟಿಸಲು ಕ್ರಮ ತೆಗೆದುಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.