ಮಂಗಳವಾರ, ಜನವರಿ 21, 2020
27 °C

ಕಾಳೆಬೆಳಗುಂದಿ: ಬನದೇಶ್ವರ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಳೆಬೆಳಗುಂದಿ: ಬನದೇಶ್ವರ ರಥೋತ್ಸವ

ಯಾದಗಿರಿ:  ತಾಲ್ಲೂಕಿನ ಗಡಿಭಾಗದ ಧಾರ್ಮಿಕ ಕ್ಷೇತ್ರವಾಗಿರುವ ಕಾಳೆ­ಬೆಳ­ಗುಂದಿ ಬನದೇಶ್ವರ ಜಾತ್ರೆ ಅಂಗವಾಗಿ ಭಾನುವಾರ ಸಾವಿರಾರು ಭಕ್ತರ ಮಧ್ಯೆ ರಥೋತ್ಸವವು ಅದ್ದೂರಿಯಾಗಿ ಜರುಗಿತು.ದೇವಸ್ಥಾನ ಅರ್ಚಕರು  ದೇವರ ಮೂರ್ತಿ­ಯನ್ನು ರಥೋತ್ಸವದಲ್ಲಿ ಕೂಡಿ­ಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ರಥದ ಮೇಲೆ ಉತ್ತುತ್ತಿ, ಬಾಳೆ ಹಣ್ಣು ಭಕ್ತಿಯಿಂದ ಪ್ರಾರ್ಥಿಸಿ ಬನದೇಶ್ವರ ಮಹಾರಾಜ್ ಕಿ ಜೈ ಎಂದು ಜೈಕಾರ ಹಾಕಿ ತಮ್ಮ ಹರಕೆ ಸಮರ್ಪಿಸಿದರು.ರಥೋತ್ಸವ ಮುಂಭಾಗದಲ್ಲಿ  ಹಲ­ವರು ತಮ್ಮ ಕೈಯಲ್ಲಿ ಬೆಳಕಿನ ದಿವಟಿಗೆ­ಗಳನ್ನು  ಹಿಡಿದುಕೊಂಡು ಹೋಗುತ್ತಿ­ರುವುದು ಹಾಗೂ ವಿವಿಧ ಸಂಗೀತ ವಾದ್ಯಗಳು, ಪುರವಂತರ ಪುರವಂತಿಕೆ ಮಧ್ಯೆ ರಥೋತ್ಸವ ನೋಡುಗರ ಕಣ್ಮನ ಸೆಳೆಯಿತು. ದೇವಸ್ಥಾನಕ್ಕೆ ವಿದ್ಯುತ್ ಬೆಳಕಿನ ಅಲಂಕಾರ ಮಾಡಲಾಗಿತ್ತು. ರಥೋ­ತ್ಸವ ಮುನ್ನ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು.  ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ­-ದಿಂದ ಭಕ್ತರು ಆಗಮಿಸಿದ್ದರು.ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲರೆಡ್ಡಿಗೌಡ ಕಣೆಕಲ್, ಜಿಲ್ಲಾ ನಾಯಾಧೀಶರಾದ ವಿದ್ಯಾವತಿ ಅಕ್ಕಿ, ಚಿದಾನಂದಪ್ಪ ಕಾಳಬೆಳಗುಂದಿ, ಪ್ರೇಮರಾಜ್ ದೋಕಾ, ಡಾ.ಅಮ­ರೇಶ ಗೌಡರ್ ಸೈದಾಪುರ, ಸಿದ್ದಣ­ಗೌಡ ಕಡೇಚೂರು, ಬನದಪ್ಪ ಮಾದ್ವಾರ, ವಿಶ್ವನಾಥರೆಡ್ಡಿ ಗೊಂದ­ಡಗಿ, ವೆಂಕಟರೆಡ್ಡಿ ಹತ್ತಿಕುಣಿ, ಬನಶಂಕರ ಕಿಲ್ಲನಕೇರಾ, ಮಲ್ಲಿಕಾರ್ಜು­ನ­ರೆಡ್ಡಿ ಮುಷ್ಟೂರು, ವೆಂಕೋಬಾ ಪೂಜಾರಿ ಇದ್ದರು.

ಪ್ರತಿಕ್ರಿಯಿಸಿ (+)