ಮಂಗಳವಾರ, ಜೂನ್ 22, 2021
24 °C

ಕಾಶ್ಮೀರಿಗಳನ್ನು ಮಹಾಕಳ್ಳರೆಂದ ಫಾರೂಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮ್ಮು (ಐಎಎನ್‌ಎಸ್‌): ಈಚೆಗೆ ನಡೆದ ಸಭೆಯೊಂದರಲ್ಲಿ ಕಾಶ್ಮೀರ ಜನರ ಕುರಿತು ಕೇಂದ್ರ ಸಚಿವ ಫಾರೂಕ್‌ ಅಬ್ದುಲ್ಲ ಮಾಡಿ­ರುವ ಟೀಕೆಗೆ ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ತೀವ್ರ ಕೋಲಾಹಲ ಉಂಟಾಯಿತ್ತು.



ವಿರೋಧ ಪಕ್ಷ ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ (ಪಿಡಿಪಿ)­ ಅಧ್ಯಕ್ಷೆ ಮೆಹಬೂಬಾ ಮುಫ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.



ಕಣಿವೆಯಲ್ಲಿ ಈಚೆಗೆ ನಡೆದ ಕಾರ್ಯಕ್ರಮ­ದಲ್ಲಿ ಪಾಲ್ಗೊಂಡಿದ್ದ ಫಾರೂಕ್‌, ಮೀಟರ್‌ ತಪ್ಪಿಸಿ ವಿದ್ಯುತ್‌ ಕಳವು ಮಾಡುತ್ತಿರುವ ಪ್ರಕರಣಗಳನ್ನು ಪ್ರಸ್ತಾಪಿಸಿ ‘ಕಾಶ್ಮೀರಿ­ಗಳು ಬರಿ ಕಳ್ಳರಲ್ಲ, ಮಹಾ ಕಳ್ಳರು’ ಎಂದು ಟೀಕಿಸಿದ್ದರು.



ಆಡಳಿತಾರೂಢ ನ್ಯಾಷ­ನಲ್‌ ಕಾನ್‌್ಫರೆನ್‌್ಸ ಭ್ರಷ್ಟಾ­ಚಾರದಲ್ಲಿ ಮುಳುಗಿದೆ. ಕಾಶ್ಮೀರಿ­ಗಳನ್ನು ಕಳ್ಳರು ಎಂದು ಕರೆಯುವುದಕ್ಕೆ ಅವರಿಗೆ ನಾಚಿ­ಕೆ­ಯಾಗುವುದಿಲ್ಲವೆ?’ ಎಂದು ಮುಫ್ತಿ ಆಕ್ರೋಶ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.