ಮಂಗಳವಾರ, ಮೇ 11, 2021
24 °C

ಕಾಶ್ಮೀರ: ಪಾಕ್ ಸೈನಿಕರಿಂದ ಭಾರತೀಯ ಸೇನಾಧಿಕಾರಿಯ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮ್ಮು (ಪಿಟಿಐ/ಐಎಎನ್ಎಸ್): ಜಮ್ಮು ಮತ್ತು ಕಾಶ್ಮೀರ ಗಡಿಭಾಗದಲ್ಲಿ ಪಾಕಿಸ್ತಾನ ಸೈನಿಕರು ಶುಕ್ರವಾರ ಮಧ್ಯಾಹ್ನ ನಡೆಸಿದ ಗುಂಡಿನ ದಾಳಿಗೆ ಭಾರತೀಯ ಸೇನಾಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ.ಘಟನೆಯು ಭಾರತ-ಪಾಕ್ ಗಡಿ ಪ್ರದೇಶವಾದ ಪೂಂಚ್ ವಲಯದಲ್ಲಿ ನಡೆದಿದ್ದು, ಗಡಿ ನಿಯಂತ್ರಣ ರೇಖೆಯ ಬಳಿ ಪಾಕ್ ಸೈನಿಕರು ಅಪ್ರಚೋದಿತವಾಗಿ ಭಾರಿ ಗಾತ್ರದ ಮೆಷಿನ್ ಗನ್, ರಾಕೆಟ್‌ಗಳು ಹಾಗೂ ಗ್ರೆನೇಡ್‌ಗಳ ಮೂಲಕ ತೀವ್ರತರವಾಗಿ ದಾಳಿ ನಡೆಸಿದರೆಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ.

ಹುತಾತ್ಮ ಯೋಧನನ್ನು ಲ್ಯಾನ್ಸ್ ನಾಯಕ್ ಬಚನ್ ಎಂದು ಗುರತಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಭಾರತೀಯ ಪಡೆಗಳೂ ಕೂಡ ಪಾಕಿಸ್ತಾನದತ್ತ ಗುಂಡಿನ ದಾಳಿ ನಡೆಸಿವೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.