ಬುಧವಾರ, ಜನವರಿ 29, 2020
23 °C

ಕಾಸಿಗಾಗಿ ಸುದ್ದಿ ಚುನಾವಣಾ ಅಕ್ರಮ: ಸಿಇಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ (ಪಿಟಿಐ): ‘ಕಾಸಿಗಾಗಿ ಪ್ರಕಟಿಸುವ ಎಲ್ಲ ಸುದ್ದಿ­ಗಳನ್ನು ಚುನಾ­ವಣಾ ಅಕ್ರಮ’ ಎಂದು ಪರಿ­ಗ­­­ಣಿ­­ಸುವಂತೆ ಚುನಾವಣಾ ಆಯೋ­ಗವು ಕಾನೂನು ಸಚಿವಾಲಯಕ್ಕೆ ಶಿಫಾರಸು ಮಾಡಿದೆ.‘ಕಾಸಿಗಾಗಿ ಸುದ್ದಿ’  ಚುನಾ­ವಣಾ ಪ್ರಕ್ರಿಯೆ ಮೇಲೆ ಗಂಭೀರ ಹಾನಿ ಉಂಟು ಮಾಡುವ ಕಾರಣ­ದಿಂದ ಇದನ್ನು ಅಪರಾಧ ಎಂದೇ ಪರಿಗಣಿಸಬೇಕು’ ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್‌.ಸಂಪತ್‌  ಶನಿವಾರ ಹೇಳಿದ್ದಾರೆ.‘ಚುನಾವಣಾ ಸುಧಾರಣೆ’ ಕುರಿತು ನಡೆದ ವಿಚಾರಣಾ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು.

ಪ್ರತಿಕ್ರಿಯಿಸಿ (+)