ಇದು ಆರು ವರ್ಷಗಳ ಹಿಂದಿನ ಕತೆ. ನೆಲಮಂಗಲದಲ್ಲಿ ನೆಂಟರ ಮನೆಗೆ ಹೋಗಿ ಹಿಂತಿರುಗುತ್ತಿದ್ದಾಗ ಬಿಎಂಟಿಸಿ ಬಸ್ನಲ್ಲಿ ನಡೆದ ಘಟನೆ.
ಆ ಮಾರ್ಗದ ಎಲ್ಲಾ ಬಸ್ಗಳಂತೆ ನಾನು ಪ್ರಯಾಣಿಸುತ್ತಿದ್ದ ಬಸ್ ಕೂಡಾ ಪ್ರಯಾಣಿಕರಿಂದ ತುಂಬಿತುಳುಕುತ್ತಿತ್ತು. ಬಾಗಿಲಿನಿಂದ ಹೊರಗೆ ಚಾಚಿಕೊಂಡು ನಿಂತವರ ಸಂಖ್ಯೆಯೇ ಹತ್ತರಷ್ಟಿತ್ತು. ನಾನು ಮಧ್ಯದ ಬಾಗಿಲಿನ ಬಳಿಯ, ಸ್ತ್ರೀಯರಿಗೆ ಮೀಸಲಾದ ಆಸನದಲ್ಲಿ ಕುಳಿತಿದ್ದೆ. ಮಡಿಲಲ್ಲಿ ನನ್ನ ಬ್ಯಾಗ್ ಅಲ್ಲದೆ ಇಬ್ಬರು ವಿದ್ಯಾರ್ಥಿಗಳ ಮಣಭಾರದ ಬ್ಯಾಗ್ ಸಹ ಹೊತ್ತುಕೊಂಡಿದ್ದೆ.

ಎಂಟನೇ ಮೈಲಿ ಬಳಿ ಇಳಿದ ಹಿರಿಯ ನಾಗರಿಕರೊಬ್ಬರು ಮುಂದೋಡಲು ಅಣಿಯಾದ ಬಸ್ಸನ್ನು ಹಿಂಬಾಲಿಸಿ `ಅಯ್ಯೋ ನನ್ನ ಪರ್ಸ್, ನಿಲ್ಸಿ ನಿಲ್ಸಿ' ಎಂದು ಓಡೋಡಿ ಬಂದು ಮತ್ತೆ ಹತ್ತಿಕೊಂಡರು. `ಯಾರೋ ನನ್ನ ಪರ್ಸ್ ಎಗರಿಸಿದ್ದಾರೆ. ಚೆಕ್ ಮಾಡಿ. ಸ್ಟೇಶನ್ಗೆ ಹೋಗಲಿ ಬಸ್' ಎಂದು ಜೋರು ದನಿಯಲ್ಲಿ ಕೂಗಾಡತೊಡಗಿದರು. ನಿರ್ವಾಹಕರೂ ಸೇರಿದಂತೆ ಎಲ್ಲರಿಗೂ ಅಕ್ಕಪಕ್ಕದವರ ಮೇಲೆಯೇ ಅಪನಂಬಿಕೆ ಮೂಡತೊಡಗಿತು.

ಬಸ್ನ ಬಾಗಿಲು ಮುಚ್ಚಿದ ಚಾಲಕ ಸೀಟಿನಿಂದೆದ್ದು ಬಸ್ನ ಮಧ್ಯಕ್ಕೆ ಬಂದು ಕಳ್ಳನನ್ನೇ ಉದ್ದೇಶಿಸಿ ಹೇಳುವಂತೆ ದಬಾಯಿಸತೊಡಗಿದರು. ಆಗ ಯುವಕನೊಬ್ಬ ಇದ್ದಕ್ಕಿದ್ದಂತೆ ಬೆವರಿ ನಡುಗಲಾರಂಭಿಸಿದ್ದನ್ನು ಕಂಡು ಎಲ್ಲರಿಗೂ ಅನುಮಾನ ಮೂಡಿ ಅವನನ್ನು ನೇರವಾಗಿ ಪ್ರಶ್ನಿಸಿದರು.
ಅವರ ಊಹೆ ನಿಜವಾಗಿತ್ತು! ಪರ್ಸ್ ಎಗರಿಸಿದ ಕಳ್ಳ ಅವನೇ ಆಗಿದ್ದ. ಒಂದಿಬ್ಬರು ಕೆನ್ನೆಗೆ, ತಲೆಗೆ ನಾಲ್ಕೇಟು ಹಾಕಿಯೂ ಬಿಟ್ಟರು.

ಅಷ್ಟೇ! ಅವನು ತನ್ನ ಅಂಗಿಯೊಳಗಿನಿಂದ ಒಂದೊಂದಾಗಿ ಪರ್ಸ್ಗಳನ್ನು ತೆಗೆದು ಚಾಲಕನ ಕೈಗಿಟ್ಟ. ಐದು ಪರ್ಸ್! ಜೇಬಿನಿಂದ ಒಂದಷ್ಟು ನೋಟುಗಳನ್ನೂ ಕೊಟ್ಟವನೇ ತಲೆಯ ಮೇಲೆ ಕೈಹೊತ್ತು ನಿಂತುಬಿಟ್ಟ. ಸುಮ್ಮನಿದ್ದರೆ ಜನರೆಲ್ಲ ಸೇರಿ ಹೊಡೆದುಹಾಕುತ್ತಾರೆಂಬ ಭಯದಲ್ಲಿ ನಡುಗುತ್ತಿದ್ದ ಅವನು `ಸತ್ಯ'ವೊಂದನ್ನೂ ಬಾಯಿಬಿಟ್ಟ.

`ತಪ್ಪಾಯ್ತು ಸಾರ್, ಇದೇ ಫಸ್ಟ್ ಟೈಂ ನಾನು ಈ ಕೆಲಸ ಮಾಡಿರೋದು. ಇನ್ಮುಂದೆ ಯಾವತ್ತೂ ಹೀಗೆ ಮಾಡೋದಿಲ್ಲ. ಬಿಟ್ಟುಬಿಡಿ ಸಾರ್ ಎಲ್ಲಾದರೂ ಬದುಕ್ಕೋತೀನಿ' ಅಂದ! ಮತ್ತೆ ನಾಲ್ಕು ಏಟು ಹಾಕಿದ ಜನರಿಗೂ ಕನಿಕರ ಮೂಡಿತೇನೋ. `ಹಾಳಾಗಿ ಹೋಗು ಇನ್ನೆಲ್ಲಾದ್ರೂ ಹೀಗೆ ಮಾಡಿದ್ರೆ ಹುಷಾರ್' ಎಂದು ಎಚ್ಚರಿಸಿ ಬಸ್ನಿಂದ ಇಳಿಸಿದರು.

ಅನನುಭವಿ ಕಳ್ಳನ ಮೇಲೆ ಜನರಿಗೆ ಅನುಕಂಪ ಮೂಡಿದ್ದರಿಂದ ಅವನು ಬಚಾವಾದ. ಆದರೆ ಅವನು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ತಂತ್ರ ಮಾಡಿದ್ದರೆ? ಇರಲಾರದು ಅಲ್ವೇ?

ಸೂಚನೆ
ಬಸ್ನಲ್ಲಿ ನಿಮಗೂ ಮಾನವೀಯ ಘಟನೆಗಳು ಅನುಭವಕ್ಕೆ ಬಂದಿರಬಹುದು. ಅಂಥ ಕತೆಗಳನ್ನು `ಮೆಟ್ರೊ' ಮೂಲಕ ಹಂಚಿಕೊಳ್ಳಿ. ಬರಹ ಸಂಕ್ಷಿಪ್ತವಾಗಿರಲಿ. ಸಂಪೂರ್ಣ ವಿಳಾಸ ಬರೆಯಿರಿ. ಬರಹ/ನುಡಿ ತಂತ್ರಾಂಶದಲ್ಲಿ ಬರೆಯುವವರು metropv@prajavani.co.inಇ-ಮೇಲ್ಗೆ ಕಳುಹಿಸಿ. ವಿಳಾಸ: `ಬಸ್ ಕತೆ', ಮೆಟ್ರೊ, ಪ್ರಜಾವಾಣಿ, ನಂ. 75, ಎಂ.ಜಿ. ರಸ್ತೆ, ಬೆಂಗಳೂರು- 560 001.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.