ಬುಧವಾರ, ಜೂನ್ 23, 2021
29 °C

ಕಿವುಡರ ಚೆಸ್‌: ಎಡಿಬಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ನಗರದಲ್ಲಿ ಭಾನುವಾರ ನಡೆದ ಕಿವುಡರ ರಾಜ್ಯ ಮಟ್ಟದ 10ನೇ ಚೆಸ್‌ ಟೂರ್ನಿಯಲ್ಲಿ ಅಸೋಸಿಯೇಶನ್ ಆಫ್ ಡೆಫ್ ಬೆಂಗಳೂರು (ಎಡಿಬಿ) ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.



ಎಡಿಬಿ 24.5 ಪಾಯಿಂಟ್‌ ಪಡೆದರೆ ಆತಿಥೇಯ ಬಾಗಲಕೋಟೆ ಜಿಲ್ಲಾ ಕಿವುಡರ ಸಂಘ 23.5 ಪಾಯಿಂಟ್‌ ಪಡೆದು ದ್ವಿತೀಯ ಮತ್ತು ಬೆಂಗಳೂರಿನ ಕರ್ನಾಟಕ ಸ್ಪೋರ್ಟ್ಸ್‌ ಫೆಡರೇಷನ್ ಆಫ್ ಡೆಫ್ (ಕೆಎಸ್ಎಫ್ ಡಿ) ತಂಡ 23 ಪಾಯಿಂಟ್‌ ಗಳಿಸಿ ತೃತೀಯ ಸ್ಥಾನಕ್ಕೆ   ಗಳಿಸಿತು.

ಕೆಎಸ್ಎಫ್‌ಡಿಯ ಆದೀಶ್ ಎಸ್.  ವೈಯಕ್ತಿಕ ಚಾಂಪಿಯನ್‌ ಆದರು. ಮಹಿಳೆಯರ ವಿಭಾಗದಲ್ಲಿ ಬೆಳಗಾ ವಿಯ ಪೂನಂ ಚಂಡಕ್ ಪ್ರಥಮ ಸ್ಥಾನ ಗಳಿಸಿದರು. ವಿಜೇತರಾದವರು ಕೋಲ್ಕತ್ತಾ ದಲ್ಲಿ ಆಗಸ್ಟ್‌ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಟೂರ್ನಿ ಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂದು ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಆರ್.ಸಿ.ಸತ್ಯನ್ ತಿಳಿಸಿದರು.



ಫಲಿತಾಂಶಗಳು: ಪುರುಷರ ವಿಭಾಗ: ಆದೀಶ್ ಎಸ್.(ಕೆಎಸ್ಎಫ್ ಡಿ )-1, ಪಳನಿ ಜಿ (ಬೆಂಗಳೂರು)–2, ಶಶಿಧರ ಕೆ.ಎಂ (ಕೆಎಸ್ಎಫ್‌ಡಿ)–3. ಮಹಿಳೆಯರ ವಿಭಾಗ: ಪೂನಂ ಚಂಡಕ್ (ಬೆಳಗಾವಿ)–1, ಸೌಮ್ಯ ಕಲ್ಯಾಣಿ (ಬಾಗಲಕೋಟೆ)–2, ನಜಮೀನ್ ಕೌಜಲಗಿ (ಬೆಳಗಾವಿ)–3.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.