ಬುಧವಾರ, ಏಪ್ರಿಲ್ 21, 2021
23 °C

ಕೀಟ ನಿರ್ವಹಣೆ: ಪ್ರಾತ್ಯಕ್ಷಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಮಂಗಲ: ಸಮಗ್ರ ಕೀಟ ನಿರ್ವಹಣೆಯಿಂದ ಉತ್ತಮ ಬೆಳೆ ಮತ್ತು ಹೆಚ್ಚಿನ ಇಳುವರಿಯನ್ನು ಹೇಗೆ ಪಡೆಯಬಹುದು ಎಂಬ ಮಾಹಿತಿಯನ್ನು ಕೃಷಿ ವಿಶ್ವವಿದ್ಯಾಲಯದ ತಜ್ಞರಿಂದ ಪಡೆಯಬೇಕು ಎಂದು ಗ್ರಾಮ ಪಂ.ಅಧ್ಯಕ್ಷ ಶೋಭಾ ಆಂಜನಮೂರ್ತಿ ತಿಳಿಸಿದರು.ತಾಲ್ಲೂಕಿನ ತ್ಯಾಮಗೊಂಡ್ಲು ಪ್ರಗತಿಪರ ರೈತ ಅನಂತಕೃಷ್ಣ ಅವರ ಎಲೆಕೋಸು ತೋಟದಲ್ಲಿ ನಡೆದ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದ ಅವರು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ವಿ.ಎಂ.ನವೀನ್‌ಕುಮಾರ್ ಮತ್ತು ಎನ್.ಎಸ್.ನಾಗೇಶ್ ತಂಡದವರ ಅಧ್ಯಯನಾಸಕ್ತಿಯನ್ನು ಪ್ರಶಂಸಿಸಿದರು.ವಜ್ರಬೆನ್ನು ಪತಂಗವು ಎಲೆಗಳನ್ನು ತಿಂದು ಬೆಳೆನಾಶ ಮಾಡುವುದನ್ನು ತಪ್ಪಿಸಲು ಮೋಹಕ ಬಲೆಯನ್ನು ಬಳಸಲು ಮತ್ತು ಬಳೆಯಿಂದಾಗುವ ಪ್ರಯೋಜನಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ನವೀನ್‌ಕುಮಾರ್ ವಿವರಿಸಿದರು.ಕೀಟ ಶಾಸ್ತ್ರದ ಪ್ರಾಧ್ಯಾಪಕ ಜಯಪ್ಪ, ಶಿವಮೂರ್ತಿ ನಾಯಕ್, ರೋಗ ಶಾಸ್ತ್ರದ ಪ್ರಾಧ್ಯಾಪಕ ನಾಗರಾಜು, ವಿಸ್ತರಣಾ ಪ್ರಾಧ್ಯಾಪಕ ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ ಕೃಷಿ ವಿಜ್ಞಾನ ವಿದ್ಯಾರ್ಥಿಗಳಾದ ಪಿ.ನಾಗಾರ್ಜುನ, ಎನ್.ಪವನ್, ಎಂ.ಎಸ್.ಮಮತಾ, ಎಂ.ಎಚ್.ಖಾನ್, ಎನ್.ಮೀನಾ, ಫಾತೀಮಾ ಬಾನು, ಕೃಷಿ ಎಂಜಿನಿಯರ್ ಎಚ್.ಕೆ.ಪ್ರೇಮಾ ಅಧ್ಯಯನ ತಂಡದಲ್ಲಿ ಭಾಗಿಗಳಾಗಿದ್ದರು.ಈ ಭಾಗದ ರೈತರ ಸಮಸ್ಯೆಗಳನ್ನು ಒಂದು ವಾರ ಕಾಲ ವಿವಿಧ ತಾಖುಗಳಿಗೆ ಬೇಟಿ ನೀಡಿ ಅಧ್ಯಯನ ನಡೆಸಿದ್ದಾರೆ. ಇನ್ನೂ ಒಂದು ಒಂದು ತಿಂಗಳ ಕಾಲ ಈ ಭಾಗದಲ್ಲಿ ಅಧ್ಯಯನ ನಡೆಸಲಿದ್ದಾರೆ. ಅವರು ಪ್ರತಿದಿನ ರೈತರಿಗೆ ಮಾಹಿತಿ ಮತ್ತು ಕಡಿಮೆ ಖರ್ಚಿನಲ್ಲಿ ಕೃಷಿ ನಿರ್ವಹಣೆ ಮತ್ತು ಹೆಚ್ಚು ಲಾಭ ತರುವ ಬೆಳೆಗಳ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ಆಸಕ್ತರು ಸಂಪರ್ಕಿಸಿ 9945633825/ 9902624941.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.