ಮಂಗಳವಾರ, ಜೂನ್ 15, 2021
27 °C

ಕೀರ್ತನೆಗಳಲ್ಲಿ ಮಾನವ ಪ್ರೀತಿ ಸಾರಿದ ಕನಕರು: ಜಮೀರುಲ್ಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೈಂದೂರು: 16ನೇ ಶತಮಾನದ ಕವಿ ಕನಕದಾಸರು ತಮ್ಮ ಬದುಕಿನಲ್ಲಿ ಜಾತಿ ವ್ಯವಸ್ಥೆ ನೀಡಿದ ನೋವನ್ನು ಅನುಭವಿಸಿ­ದವರು. ಅವರ  ಕಾವ್ಯ ಮತ್ತು ಕೀರ್ತನೆಗಳಲ್ಲಿ ಆ ನೋವಿನ ಆಳದ ದರ್ಶನವಾಗುತ್ತದೆ. ಆದ್ದರಿಂದಲೇ ಅವರು ಮಾನವ ಪ್ರೀತಿ, ಅಧ್ಯಾತ್ಮದ ಮಹತ್ವವನ್ನು ಪ್ರತಿಪಾದಿಸುತ್ತ ಜಾತಿ ವ್ಯವಸ್ಥೆಯ ವಿರುದ್ಧ ನಿಲುವು ತಳೆದರು ಎಂದು ಖ್ಯಾತ ವಿಮರ್ಶಕ ಡಾ.ಜಮೀರುಲ್ಲಾ ಷರೀಫ್‌ ಹೇಳಿದರು.ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಬೈಂದೂರಿನ ಸುರಭಿ ಸಾಂಸ್ಕೃತಿಕ ಸೇವಾ ಪ್ರತಿಷ್ಠಾನದ ಸಹಕಾರದೊಂದಿಗೆ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಕನಕದಾಸ ಉಪನ್ಯಾಸ–ವಾಚನ–ಗಾಯನದಿಂದ ಕೂಡಿದ ’ಮುತ್ತು ಬಂದಿದೆ ಕೇರಿಗೆ’ ರಸಗ್ರಹಣ ಶಿಬಿರದಲ್ಲಿ ಉಪನ್ಯಾಸ ಮಾಡಿದರು.ಕನಕದಾಸರು ದಂಡನಾಯಕರಾಗಿ ಯುದ್ಧದ ಹಿಂಸೆ, ದುರಂತವನ್ನು ಕಂಡು, ಶಾಂತಿಯ ಅಗತ್ಯ ಅರಿತು ಸಂತರಾಗಿ, ದಾಸರಾಗಿ ಪರಿವರ್ತಿತರಾದರು. ಅವರ ಕಾವ್ಯ ಅವೆಲ್ಲದರ ಪ್ರತಿಬಿಂಬ ಎಂದು ಅವರು ಹೇಳಿದರು.ಕಾಲೇಜಿನ ಪ್ರಾಚಾರ್ಯ ಪ್ರೊ.­ಅನಿಲ್‌­ಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿ­ದ್ದರು. ಸಂಗೀತ ವಿದ್ವಾನ್‌ ಮಧೂರು ಪಿ.ಬಾಲಸುಬ್ರಹ್ಮಣ್ಯಂ ಶಿಬಿರವನ್ನು ಉದ್ಘಾ­ಟಿಸಿದರು. ಸಮೂಹ ಶಿಕ್ಷಣ ಸಂಪ­ನ್ಮೂಲ ವ್ಯಕ್ತಿ ರಾಮಕೃಷ್ಣ ದೇವಾ­ಡಿಗ ಸ್ವಾಗತಿಸಿದರು. ಸುರಭಿಯ ನಿರ್ದೇ­ಶಕ ಸುಧಾಕರ ಪಿ. ಬೈಂದೂರು ಪ್ರಾಸ್ತಾ­ವಿಕ ಮಾತನಾಡಿದರು. ಬಾಲಸುಬ್ರಹ್ಮ­ಣ್ಯಂ ತಂಡದಿಂದ ಕನಕ ಕೀರ್ತನೆಗಳ ಗಾಯನ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.