ಬುಧವಾರ, ಮೇ 12, 2021
19 °C

ಕೀರ್ತಿಲಾಲ್ಸ್‌ನಿಂದ ವಜ್ರದ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಳಿಗೆ ಒಳಗೆ ಹೋಗುತ್ತಿದ್ದಂತೆ ಕಂಡ ವಜ್ರದ ಒಡವೆಗಳು ಕಣ್ಣಿಗೆ ಹಬ್ಬವೆನಿಸಿದ್ದವು. ಒಂದೊಂದು ಆಭರಣದ್ದೂ ಒಂದೊಂದು ಬಗೆಯ ವಿನ್ಯಾಸ. ಉಂಗುರ, ಸರ, ಲಾಂಗ್ ಚೈನ್, ಬ್ರೇಸ್ಲೆಟ್, ಕಿವಿಯೋಲೆ, ಪೆಂಡೆಂಟ್ ಹೀಗೆ ಎಲ್ಲ ವಿಧದ ಆಭರಣಗಳಲ್ಲೂ ವಜ್ರದ ಚೆಲುವು ಎದ್ದು ಕಾಣುತ್ತಿತ್ತು.

`ಒಡವೆಯೆಂದರೆ ಕೇವಲ ಚಿನ್ನವಲ್ಲ, ಮಹಿಳೆಯರು ಚಿನ್ನಕ್ಕೇ ಸೀಮಿತಗೊಳ್ಳಬಾರದು, ವಜ್ರದಲ್ಲೂ ಹೊಸ ನಮೂನೆಯ ಆಭರಣಗಳು ಇಲ್ಲಿವೆ, ಆಯ್ಕೆ ನಿಮ್ಮದಷ್ಟೆ' ಎನ್ನುತ್ತಲೇ ಹೊಳೆಯುವ ಈ ವಜ್ರದ ಸಂಗ್ರಹವನ್ನು ಹೊರತಂದಿರುವುದು ಕೀರ್ತಿಲಾಲ್ಸ್ ಆಭರಣ ಮಳಿಗೆ.ನಗರದ ಮಹಿಳೆಯರ ಆಭರಣ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡೇ `ಗ್ಲೋ ಅಂಡ್‌ಗೋ' ಎಂಬ ವಜ್ರದ ಸರಣಿಯನ್ನು ಪರಿಚಯಿಸಿರುವುದಾಗಿ ಕಂಪೆನಿ ಹೇಳಿಕೊಂಡಿದೆ.`ಟ್ರೆಂಡಿ ಯುವತಿಯರ ಅವಶ್ಯಕತೆಗೆ ತಕ್ಕಂತೆ ರೂಪುಗೊಂಡಿರುವ ಈ ವಜ್ರದ ಒಡವೆಗಳನ್ನು ಯಾವ ವಯೋಮಾನದವರು ತೊಟ್ಟುಕೊಂಡರೂ ಸುಂದರವಾಗಿ ಕಾಣುತ್ತಾರೆ. ಈ ಸಂಗ್ರಹ ಮಹಿಳೆಯರ ಮನ ಮೆಚ್ಚಿಸುವುದರಲ್ಲಿ ಸಂದೇಹವೇ ಇಲ್ಲ' ಎಂದು `ಗ್ಲೋ ಅಂಡ್ ಗೋ' ಸಂಗ್ರಹದ ಬಗ್ಗೆ ಹೇಳಿಕೊಂಡರು ಕೀರ್ತಿಲಾಲ್ಸ್‌ನ ಕ್ರಿಯೇಟಿವ್ ಹೆಡ್ ಸೀಮಾ ಮೆಹ್ತಾ.

  ಈ ವಜ್ರದ ಸಂಗ್ರಹದಲ್ಲಿ ಒಟ್ಟು 300 ಬಗೆಯ ವಿನ್ಯಾಸಿತ ಆಭರಣಗಳಿದ್ದು, ಸಾಮಾನ್ಯವರ್ಗದವರಿಗೂ ಕೈಗೆಟುವಂತೆ ಈ ಸಂಗ್ರಹವನ್ನು ನೀಡಲಾಗಿದೆಯಂತೆ. ಕ್ಯಾಶುಯಲ್, ಪಾರ್ಟಿ, ಉದ್ಯೋಗ ಎಲ್ಲ ಅವಶ್ಯಕತೆಗಳನ್ನೂ ಈ ವಜ್ರದ ಒಡವೆಗಳು ನೀಗುತ್ತವೆ ಎಂಬುದು ಮೆಹ್ತಾ ಅಭಿಪ್ರಾಯ. ಅಷ್ಟೇ ಅಲ್ಲ, ಈ ಸಂಗ್ರಹವನ್ನು ಪರಿಚಯಿಸಲು ಮಹಿಳೆಯರೇ ಸ್ಫೂರ್ತಿ ಎಂದರು ಮೆಹ್ತಾ.   ಈ ಹಿಂದೆ ಮದುವಣಗಿತ್ತಿಯರಿಗೆಂದೇ ಪ್ರತ್ಯೇಕವಾಗಿ `ಬ್ರೈಡಲ್ ಕಲೆಕ್ಷನ್' ಸಂಗ್ರಹ ಹೊರತಂದಿದ್ದ ಕೀರ್ತಿಲಾಲ್ಸ್ ಈ ಬಾರಿ ವಿಭಿನ್ನ ಲುಕ್ ಬಯಸುವವರಿಗೆ ಹೇಳಿ ಮಾಡಿಸಿದಂತಿರುವ ಈ ವಜ್ರದ ಆಭರಣಗಳನ್ನು ತಂದಿದೆಯಂತೆ.

ಕೊಯಮತ್ತೂರಿನಲ್ಲಿ ತಮ್ಮದೇ ವಜ್ರ ಘಟಕ ಹೊಂದಿರುವುದರಿಂದ ವಜ್ರ ಪರಿಷ್ಕರಣೆಯ ಪ್ರತಿ ಹಂತದಲ್ಲೂ ಗುಣಮಟ್ಟವನ್ನು ಕಾಯ್ದಿರಿಸಲಾಗಿದೆ, ಆಭರಣಗಳ ಸುಂದರ ವಿನ್ಯಾಸಕ್ಕೆಂದೇ ಕಂಪೆನಿ ಸುಮಾರು 250 ವಿನ್ಯಾಸಕಾರರನ್ನು ಹೊಂದಿದೆಯಂತೆ.ಆಟೊಕ್ಯಾಡ್ ಮತ್ತು ತ್ರಿ ಡಿ ಅನಿಮೇಷನ್ ಅನ್ನೂ ವಿನ್ಯಾಸಕ್ಕೆ ಒಗ್ಗಿಸಿಕೊಳ್ಳಲಾಗಿದೆಯಂತೆ. ಪ್ರಸ್ತುತ ಶೈಲಿಗೆ ತಕ್ಕಂತೆ ರೂಪಿಸಲಾಗಿರುವ ಈ ವಜ್ರದ ಸಂಗ್ರಹದ ಆರಂಭಿಕ ಬೆಲೆ 25,000 ರೂ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.