ಶನಿವಾರ, ಜೂನ್ 19, 2021
23 °C

ಕುಡಿಯುವ ನೀರಿಗೆ ಒತ್ತಾಯ; ಸಭೆಗೆ ಮಹಿಳೆಯರ ಲಗ್ಗೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ನೀರು ಪೂರೈಕೆಗೂ ಅಡ್ಡಿಯಾದ ಕಾಯ್ದೆ! ರೂ 1.30 ಕೋಟಿ ಅವ್ಯವಹಾರಕ್ಕೆ 12ಮಂದಿ ಸದಸ್ಯರೇ ಹೊಣೆ! ಪರಸ್ಪರ ವಾಗ್ವಾದ, ಕೋಲಾಹಲ. ಸಭಾಧ್ಯಕ್ಷರ ಪೀಠಕ್ಕೆ ತೆರಳಿ ಆಕ್ರೋಶ. ಕುಡಿಯುವ ನೀರಿಗಾಗಿ ಸಭೆಗೆ ನುಗ್ಗಿದ ಮಹಿಳೆಯರು.-ಇವು ಮಂಗಳವಾರ ಪುರಸಭೆಯ ಸಭಾಂಗಣದಲ್ಲಿ ನಡೆದ ಸಾಮಾನ್ಯಸಭೆಯ ಮುಖ್ಯಾಂಶಗಳು.

ಆರಂಭದಲ್ಲಿ ಇತ್ತೀಚೆಗೆ ಆಗಲಿದ ಸದಸ್ಯ ಹುಲುಮನಿ ಬಡೇನ್ ಸಾಹೇಬ್ ನಿಧನಕ್ಕೆ ಸಭೆ ಎರಡು ನಿಮಿಷ ಮೌನ ಶ್ರದ್ಧಾಂಜಲಿ ಸಲ್ಲಿಸಲಾಯಿತು.`ಪೈಪ್‌ಲೈನ್ ದೋಷದಿಂದ ನನ್ನ ವಾರ್ಡ್‌ನಲ್ಲಿ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಕೇಳಿದರೆ, ಪೈಪ್‌ಲೈನ್ ದುರಸ್ತಿ ಪಡಿಸಲು ್ಙ 25-30 ಸಾವಿರ ಹಣ ಖರ್ಚಾಗುತ್ತದೆ. ಕಾಯ್ದೆ ಪ್ರಕಾರ ಟೆಂಡರ್ ಮೂಲಕವೇ ದುರಸ್ತಿಪಡಿಸಬೇಕು ಎಂದು ಹೇಳುತ್ತೀರಿ. ಈಗ ನೋಡಿದರೆ, ಒಂದು ಲಕ್ಷಕ್ಕೂ ಅಧಿಕ ಮೊತ್ತದ ಹಣವನ್ನು ಯಾವ ಟೆಂಡರ್ ಇಲ್ಲದೇ ಕಾಮಗಾರಿ ನಡೆಸಿದ್ದೀರಿ ಎಂದು ಸದಸ್ಯ ಶುಕುರ್ ಸಾಹೇಬ್ ಅಸಮಾಧಾನ ವ್ಯಕ್ತಪಡಿಸಿದರು.ಸದಸ್ಯರಾದ ಎಚ್.ಕೆ. ಹಾಲೇಶ್, ಟಿ. ವೆಂಕಟೇಶ್, ಚಿಕ್ಕೇರಿ ಬಸಪ್ಪ, ಮಟ್ಟಿ ಮೃತ್ಯುಂಜಯ ಹಾಗೂ ಎಚ್.ಬಿ. ಪರಶುರಾಮಪ್ಪ ಹಾಗೂ ಇತರರು, ಅಬ್ದುಲ್ ರಹಿಮಾನ್ ಮಾತಿಗೆ ಕೆರಳಿ, ಮೇಜು ಕುಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ಸಭಾಧ್ಯಕ್ಷರ ಪೀಠಕ್ಕೆ ತೆರಳಿ, ಅವ್ಯವಹಾರಕ್ಕೆ ಕಾರಣವಾದ ಕೆಲ ದಾಖಲೆಗಳನ್ನು ಪ್ರದರ್ಶಿಸಿದರು.ಕುಡಿಯುವ ನೀರು ಪೂರೈಸದಿರುವ ಅಧಿಕಾರಿಗಳ ಕ್ರಮ ಖಂಡಿಸಿ ಮಧ್ವಮಂದಿರ ಪ್ರದೇಶದ ಮಹಿಳೆಯರು ಸಾಮಾನ್ಯಸಭೆ ನುಗ್ಗಿ ಪುರಸಭೆಯ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಸಮಸ್ಯೆ ಪರಿಹರಿಸುವುದಾಗಿ ಅಧ್ಯಕ್ಷರು ಭರವಸೆ ನೀಡಿದರು.ಅಧ್ಯಕ್ಷ ಬಿ. ಮಹಬೂಬ್ ಸಾಹೇಬ್ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷೆ ಸುಮಿತ್ರಾ ಬಾಪೂಜಿ, ಮುಖ್ಯಾಧಿಕಾರಿ ಎಚ್.ಬಿ. ಜೆಟ್ಟಪ್ಪ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.