ಬೆಂಗಳೂರು: ತೊರೆಕಾಡನಹಳ್ಳಿಯ ಕೆಪಿಟಿಸಿಎಲ್ನ ವಿದ್ಯುತ್ ಘಟಕದಲ್ಲಿ ಭಾನುವಾರ ಕಾಣಿಸಿಕೊಂಡ ವಿದ್ಯುತ್ ತೊಂದರೆಯಿಂದ ಸೋಮವಾರ ನಗರದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ನಗರದ ಉತ್ತರ ಹಾಗೂ ಪೂರ್ವ ಭಾಗಗಳ ವ್ಯಾಪ್ತಿಯಲ್ಲಿ ನೀರು ಪೂರೈಕೆಯಲ್ಲಿ ತೀವ್ರ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾದರೂ ಜಲಮಂಡಳಿಯೊಂದಿಗೆ ಸಹಕರಿಸುವಂತೆ ಕೋರಲಾಗಿದೆ.

ಭಾನುವಾರ ಬೆಳಿಗ್ಗೆ 11.30ರಲ್ಲಿ ಟಿ.ಕೆ. ಹಳ್ಳಿಯ ಕೆಪಿಟಿಸಿಎಲ್ನ 220 ಕೆ.ವಿ. ವಿದ್ಯುತ್ ಘಟಕದಲ್ಲಿ ಕಾಣಿಸಿಕೊಂಡ ತೊಂದರೆಯಿಂದ ಎಲ್ಲ ನಾಲ್ಕು ಫೇಸ್ನ ಪಂಪ್ಗಳು `ಟ್ರಿಪ್~ ಆಗುತ್ತಿವೆ. ಇದರಿಂದ ಕಾವೇರಿ ನೀರು ಪೂರೈಕೆಗೆ ತೊಂದರೆಯುಂಟಾಗಿದೆ ಎಂದು ಜಲಮಂಡಳಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.