ಭಾನುವಾರ, ಏಪ್ರಿಲ್ 11, 2021
25 °C

ಕುಡಿಯುವ ನೀರು ಪೂರೈಕೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕಹಳ್ಳಿ ಗ್ರಾಮದಲ್ಲಿ ತುರ್ತಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಈ ಹಿಂದೆ ಇದ್ದ ಕೊಳವೆ ಬಾವಿಗಳು ಬತ್ತಿವೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಕೋರಿದ್ದರೂ ಪಂಚಾಯ್ತಿ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಇದರಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದೆ ಎಂದು ದೂರಿದರು.ಶ್ರೀರಂಗಪಟ್ಟಣ ಜೇವರ್ಗಿ ರಸ್ತೆಯಿಂದ ಚಿಕ್ಕಹಳ್ಳಿ ಗ್ರಾಮಕ್ಕೆ ಬರುವ ರಸ್ತೆ ಅಭಿವೃದ್ಧಿ ಪಡಿಸಬೇಕು. ಈ ಮಾರ್ಗಕ್ಕೆ ತೆರಳುವ ಒಂದು ಕಿ.ಮೀ. ದೂರ ಬಹಳ ಹದಗೆಟ್ಟಿದೆ. ಈ ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ ಎಂದು ದೂರಿದರು.ಬಸ್ ನಿಲ್ಲಿಸಬೇಡಿ:
ಇದೇ ಸಂದರ್ಭದಲ್ಲಿ ಚಿಕ್ಕಹಳ್ಳಿ, ಬ್ಯಾಡರೆಡ್ಡಿಹಳ್ಳಿ, ತಿಮ್ಮನಹಳ್ಳಿ, ವಲ್ಸೆ, ಬಂಜಿಗೆರೆ, ಹೊನ್ನೂರು, ಘಟಪರ್ತಿ, ಉಳ್ಳಾರ್ತಿ, ದುಗ್ಗಾವರ, ಗ್ರಾಮಸ್ಥರು, ಗ್ರಾಮಕ್ಕೆ ಬರುವ ಬಸ್ ಸಂಚಾರ ಸ್ಥಗಿತಗೊಳಿಸಬಾರದು ಎಂದು ಆಗ್ರಹಿಸಿದರು.ಎಸ್.ಆರ್. ಎಕ್ರ್‌ಪ್ರೆಸ್ ಬಸ್ ದಿನಕ್ಕೆ 8 ಬಾರಿ ಸಂಚರಿಸುತ್ತಿದ್ದು, ಈ ಗ್ರಾಮದ ಜನತೆಗೆ ಅನುಕೂಲಕರವಾಗಿದೆ. ಆದರೆ, ಕೆಲವು ಬಂಜಿಗೆರೆ ಗ್ರಾಮದ ಗ್ರಾಮಸ್ಥರು ಈ ಬಸ್ ಸಂಚಾರ ನಿಲ್ಲಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಒಂದು ವೇಳೆ ಈ ಬಸ್ ಸಂಚಾರ ನಿಲ್ಲಿಸಿದದರೆ ತಮಗೆ ಅನಾನುಕೂಲವಾಗಲಿದೆ ಎಂದು ತಿಳಿಸಿದರು.ಮಲ್ಲಿಕಾರ್ಜುನ್, ರಫಿ, ತಿಪ್ಪೇಸ್ವಾಮಿ, ನಾಗೇಂದ್ರಪ್ಪ, ರಾಜು, ರಮೇಶ್‌ಕುಮಾರ್, ನಾಗೇಶ್, ಬಸವರೆಡ್ಡಿ, ಬಂಜಪ್ಪ, ಬಸವರೆಡ್ಡಿ, ಕುಮಾರ್, ಗುರುಸ್ವಾಮಿ  ಹಾಜರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.