ಭಾನುವಾರ, ಜೂನ್ 20, 2021
28 °C

ಕುರುಬ ಸಮುದಾಯ ನಿರ್ಲಕ್ಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತರೀಕೆರೆ: ಈ ಹಿಂದೆ 15 ಜನ ವಿಧಾನಸಭೆಯ ಸದಸ್ಯರನ್ನು ಹೊಂದಿದ್ದ ಕುರುಬ ಸಮುದಾಯ ಇಂದು ಕೇವಲ 5 ಸ್ಥಾನಕ್ಕೆ ಇಳಿದಿರುವುದಕ್ಕೆ ಕಾರಣವೇನು ಎಂಬುದನ್ನು ಸಮುದಾಯದ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪುರ್ ಹೇಳಿದರು.ಪಟ್ಟಣದ ರೇವಣಸಿದ್ದೇಶ್ವರ ದೇವಾಲಯದ ವೃತ್ತದಲ್ಲಿ ಬುಧವಾರ ರಾತ್ರಿ ಜೆಡಿಎಸ್ ಅಭ್ಯರ್ಥಿ ಬೋಜೇಗೌಡ ಪರ ಪ್ರಚಾರಸಭೆಯಲ್ಲಿ ಅವರು ಮಾತನಾಡಿದರು.ಈ ಬಗ್ಗೆ ವಿಶ್ಲೇಷಣೆ ನಡೆಯಬೇಕಿದ್ದು, ಕುರುಬ ಸಮುದಾಯದ ಮುಖಂಡರು ಕೊಟ್ಟು ತೆಗೆದುಕೊಳ್ಳುವ  ನೀತಿಯನ್ನು ಅನುಸರಿಸಬೇಕು ಕೇವಲ ಜಾತಿಗೆ ತಮ್ಮನ್ನು ಮೀಸಲು ಮಾಡಿಕೊಳ್ಳದೆ ವಿಶಾಲ ಮನೋಭಾವನೆಯನ್ನು ಹೊಂದದಿದ್ದಲ್ಲಿ ರಾಜಕೀಯವಾಗಿ ಮೂಲೆಗುಂಪಾಗುವ ಸಾದ್ಯತೆಯಿದೆ ಎಂದ ಎಚ್ಚರಿಸಿದರು.  ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮುಖಂಡತ್ವದ ಜೆಡಿಎಸ್ ನಲ್ಲಿ ಕುರುಬ ಸಮುದಾಯದವರಿಗೆ ಉತ್ತಮ ರಾಜಕೀಯ ಅವಕಾಶಗಳಿದ್ದು, ಸಮುದಾಯದ ಜನತೆ ಪಕ್ಷವನ್ನು ಬೆಂಬಲಿಸುವ ಮೂಲಕ ಸಮುದಾಯದ ಏಳಿಗೆಗೆ ಮುಂದಾಗುವಂತೆ ಅವರು ಕರೆ ನೀಡಿದ ಅವರು, ಕಾಂಗ್ರೆಸ್ ಈಗಾಗಲೇ ಸಂಪೂರ್ಣ ಕೆಲಕಚ್ಚಿದ್ದು, ಬಿಜೆಪಿ ಮುಂದಿನ ದಿನದಲ್ಲಿ ಮೂಲೆಗುಂಪಾಗಲಿದೆ. ಜೆಡಿಎಸ್ ಮತ್ತೆ ರಾಜ್ಯದ ಅಧಿಕಾರ ಹಿಡಿಯಲಿದೆ ಎಂದರು.ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್‌ಬಾಬು ಮಾತನಾಡಿ, ಕುರುಬ ಸಮುದಾಯದವರಿಗೆ ಕಾಂಗ್ರೆಸ್‌ನಲ್ಲಿ ಉಸಿರು ಕಟ್ಟಿಸುವ ವಾತಾವರಣವಿದ್ದು, ಜೆಡಿಎಸ್‌ನಲ್ಲಿ ಈ ವಾತಾವರಣವಿಲ್ಲ. ಆದ್ದರಿಂದ ತರೀಕೆರೆಯ ಮಾಜಿ ಶಾಸಕರಿಗೆ ಪಕ್ಷದ ಬಾಗಿಲು ಸದಾ ತೆರೆದಿದ್ದು, ಅವರು ಬಂದಲ್ಲಿ ಮುಂದಿನ ವಿದಾನಸಭೆಗೆ ಸ್ಪರ್ಧಿಸಲು ಅವಕಾಶವನ್ನು ಪಕ್ಷ ನೀಡಲಿದೆ ಎಂದರು.ತಾಲ್ಲೂಕು ಪಂಚಾಯಿತಿ ಸದಸ್ಯ ಪಿ.ಧರಣೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ನಾಗಪ್ಪ, ಮಾಜಿ ಸದಸ್ಯ ರವಿಕುಮಾರ್, ಮುಖಂಡರಾದ ಮಹೇಶ್, ಶಿವಕುಮಾರ್ ಗುಂಡಿ, ಗಿರೀಶ್, ಲಿಂಗಮೂರ್ತಿ ಮುಂತಾದವರು ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.