ಮಂಗಳವಾರ, ಮೇ 11, 2021
25 °C

ಕುಸ್ತಿ: ಗೀತಾ ಐತಿಹಾಸಿಕ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತದ ಮಹಿಳಾ ಕುಸ್ತಿಪಟು ಗೀತಾ ಅವರು ಲಂಡನ್ ಒಲಿಂಪಿಕ್‌ಗೆ ಅರ್ಹತೆ ಪಡೆಯುವ ಮೂಲಕ ನೂತನ ಇತಿಹಾಸ ನಿರ್ಮಿಸಿದರು. ಒಲಿಂಪಿಕ್‌ಗೆ ಅರ್ಹತೆ ಪಡೆದ ಭಾರತದ ಮೊಟ್ಟಮೊದಲ ಮಹಿಳಾ ಪೈಲ್ವಾನ್ ಎಂಬ ಹೆಗ್ಗಳಿಕೆ ಗೀತಾ ಅವರದಾಯಿತು.

ಕಜಕಸ್ತಾನದ ಅಸ್ತಾನದಲ್ಲಿ ನಡೆಯುತ್ತಿರುವ ಏಷ್ಯನ್ ಅರ್ಹತಾ ಟೂರ್ನಿಯ 55 ಕೆ.ಜಿ. ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಗೀತಾ ಲಂಡನ್‌ಗೆ `ರಹದಾರಿ~ ಗಿಟ್ಟಿಸಿದರು. ಏಷ್ಯನ್ ಅರ್ಹತಾ ಟೂರ್ನಿಯಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಜಯಿಸುವ ಸ್ಪರ್ಧಿಗಳು ಒಲಿಂಪಿಕ್‌ಗೆ ಅರ್ಹತೆ ಪಡೆಯುವರು.

2004 ರಲ್ಲಿ ಮೊದಲ ಬಾರಿಗೆ ಒಲಿಂಪಿಕ್ ಕ್ರೀಡೆಗಳಲ್ಲಿ ಮಹಿಳಾ ಕುಸ್ತಿಯನ್ನು ಸೇರ್ಪಡೆಗೊಳಿಸಲಾಯಿತು. 2004 ಮತ್ತು 2008ರ ಒಲಿಂಪಿಕ್‌ಗೆ ಭಾರತದ ಯಾರೂ ಅರ್ಹತೆ ಪಡೆದಿರಲಿಲ್ಲ.

ಭಾನುವಾರ ನಡೆದ ಫೈನಲ್‌ನಲ್ಲಿ ಗೀತಾ 5-0 ರಲ್ಲಿ ಕೊರಿಯಾದ ಜಿ ಯುನ್ ಯುಮ್ ವಿರುದ್ಧ ಗೆಲುವು ಪಡೆದರು. ಗೀತಾ ಮೊದಲ ಎರಡು ಸುತ್ತುಗಳಲ್ಲಿ ಕ್ರಮವಾಗಿ ಕಿರ್ಗಿಸ್ತಾನದ ಗುಲಿನಾ ಕುಬತ್ಬೆಕ್ ಮತ್ತು ಥಾಯ್ಲೆಂಡ್‌ನ ವಿಲೈವಾನ್ ತಾಂಗ್‌ಕಾಮ್ ಅವರನ್ನು ಮಣಿಸಿದ್ದರು. ಸೆಮಿಫೈನಲ್‌ನಲ್ಲಿ ಅವರು ಕಜಕಸ್ತಾನದ ಅಯಿಮ್ ಅಬ್ದಿಲ್‌ದಿನಾ ವಿರುದ್ಧ ಗೆದ್ದಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.