ಸೋಮವಾರ, ಏಪ್ರಿಲ್ 12, 2021
32 °C

ಕೂಡಲಸಂಗಮದಲ್ಲಿ ಪುಣ್ಯಸ್ನಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡಲಸಂಗಮ: ಕೂಡಲಸಂಗಮ ಅಣ್ಣ ಬಸವಣ್ಣನ ತಪೋಭೂಮಿ, ತ್ರಿವೇಣಿ ಸಂಗಮದ ನಾಡು, ಮಲಪ್ರಭಾ , ಕೃಷ್ಣಾ ನದಿಯ ಸಂಗಮ ಸ್ಥಾನ ಹೀಗಾಗಿ ಪ್ರತಿ ವರ್ಷ ಶ್ರಾವಣನ ಕೊನೆಯ ಸೋಮವಾರ ಇಲ್ಲಿಗೆ ಪ್ರವಾಸಿಗರ, ಭಕ್ತರ ದಂಡೆ ಆಗಮಿಸುತ್ತದೆ.ವಿಶೇಷವಾಗಿ ಶ್ರಾವಣದ ಕೊನೆಯ ಸೋಮವಾರದ ಪರ್ವಕಾಲದಲ್ಲಿ ಕುಟುಂಬ ಸಮೇತವಾಗಿ ಜನರು ಇಲ್ಲಿಗೆ ಆಗಮಿಸಿದ್ದರು. ತ್ರಿವೇಣಿ ಸಂಗಮದಲ್ಲಿ ಮಿಂದು ಪುಣ್ಯ ಸ್ನಾನ ಮಾಡಿ ಶ್ರಾವಣವನ್ನು  ಸಂಭ್ರಮದಿಂದ ಆಚರಿಸಿದರು.ತ್ರಿವೇಣಿ ಸಂಗಮದಲ್ಲಿ ಮಿಂದು ಪುಣ್ಯ ಸ್ನಾನ ಮಾಡಿದ ನಂತರದಲ್ಲಿ ಪ್ರವಾಸಿಗರು ಹಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ವಿಶೇಷವಾಗಿ ಬಸವಣ್ಣನವರ ಐಕ್ಯ ಸ್ಥಳಕ್ಕೆ ಬಂದು ಕೆಲ ಕಾಲ ಧ್ಯಾನಸ್ಥರಾಗಿದ್ದು ಕಂಡು ಬಂದಿತು. ನಂತರ ಸಂಗಮನಾಥನಿಗೆ ವಿಶೇಷ ಪೂಜೆ ಸಲ್ಲಿಸಿ, ಲಿಂಗಪೂಜೆ ಮಾಡಿಕೊಂಡು ಸಾಮೂಹಿಕ ಭೋಜನ ಸೇವಿಸಿದರು.ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಸೋಮವಾರ ಮುಂಜಾನೆ ಸೂರ್ಯೋದಯವಾಗುತ್ತಲೇ ನದಿಯಲ್ಲಿ ಸ್ನಾನ ಮಾಡಿದರು. ಸ್ನಾನ, ಪೂಜೆಯ ನಂತರ ಸ್ವಚ್ಛತಾ ಸೇವೆಯನ್ನೂ ಸಲ್ಲಿಸಿದರು. ಉಳ್ಳವರು ಶ್ರೀಕ್ಷೇತ್ರದ ಬಡವರಿಗೆ ದಾನ, ಪ್ರಸಾದ ಸೇವೆ ಕೈಗೊಂಡರು. ಹಿರಿಯರಿಗೆ ಭಕ್ತಿ ನಮನ ಸಲ್ಲಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.