ಚೆನ್ನೈ (ಪಿಟಿಐ): ಪ್ರತಿಭಟನೆ, ವಿವಾದಗಳ ನಡುವೆ ಸ್ಥಗಿತಗೊಂಡಿದ್ದ ಕೂಡುಂಕುಳಂ ಪರಮಾಣು ಘಟಕದ ಕಾರ್ಯವನ್ನು ತಕ್ಷಣದಿಂದಲೇ ಮುಂದುವರಿಸುವಂತೆ ಜಯಲಲಿತಾ ಸರ್ಕಾರ ಸೂಚನೆ ನೀಡುವ ಜತೆಗೆ ಸ್ಥಳೀಯ ಪ್ರದೇಶಾಭಿವೃದ್ಧಿಗಾಗಿ 500 ಕೋಟಿ ರೂಪಾಯಿಯ ವಿಶೇಷ ಪ್ಯಾಕೇಜ್ ಘೋಷಿಸಿದೆ.

ಕೂಡುಂಕುಳಂ ಪರಮಾಣು ಘಟಕದ ವಿಷಯಕ್ಕೆ ಸಂಬಂಧಿಸಿದಂತೆ ಸೋಮವಾರ ನಡೆದ ಸಚಿವ ಸಂಪುಟದ ಸಭೆಯ ನಂತರ ಮೌನ ಮುರಿದ ಮುಖ್ಯಮಂತ್ರಿ ಜಯಲಲಿತಾ ಅವರು, ಪರಮಾಣು ಘಟಕ ಕಾರ್ಯಾರಂಭಕ್ಕೆ ಸಂಬಂಧಿಸಿದಂತೆ ವಿವಿಧ ರಾಜಕೀಯ ಪಕ್ಷಗಳ ಸಹಕಾರ ಕೋರಿದ್ದಾರೆ.

ತಕ್ಷಣದಿಂದಲೇ ಘಟಕದ ಕಾರ್ಯಗಳಿಗೆ ಹಾಜರಾಗುವಂತೆ ಸಂಬಂಧಪಟ್ಟವರಿಗೆ ಸೂಚಿಸಿರುವ ಜಯಲಲಿತಾ, 500 ಕೋಟಿ ರೂಪಾಯಿ ಪ್ಯಾಕೇಜ್ ಹಣದಲ್ಲಿ ಮೀನುಗಾರರಿಗೆ ಶೀತಲಗೃಹ ನಿರ್ಮಾಣ, ಸ್ಥಳೀಯವಾಗಿ ರಸ್ತೆ ಅಭಿವೃದ್ಧಿ, ಮನೆ ನಿರ್ಮಾಣ, ಯಾಂತ್ರಿಕ ದೋಣಿಗಳ ದುರಸ್ತಿ ಸೇರಿದಂತೆ, ಘಟಕದ ಸಮೀಪದಲ್ಲಿರುವ ಜನರಿಗೆ ನೆರವಾಗುವ ಅಭಿವೃದ್ಧಿಕಾರ್ಯಗಳನ್ನು ಕೈಗೊಳ್ಳುವಂತೆ ತಿಳಿಸಿದ್ದಾರೆ.

ರಷ್ಯಾ ಸಹಯೋಗದಲ್ಲಿ ನಡೆಯುತ್ತಿರುವ ಈ ಘಟಕದ ಸಾವಿರ ಮೆಗಾವಾಟ್ ಉತ್ಪಾದನಾ ಘಟಕದ ಸಿವಿಲ್ ಕಾಮಗಾರಿ ಶೇ 99.5ರಷ್ಟು ಪೂರ್ಣಗೊಂಡಿದ್ದು, ಇನ್ನೊಂದು ಘಟಕದ ಕಾಮಗಾರಿ ಶೇ 93ರಷ್ಟು ಆಗಿದೆ. ಈ ಘಟಕಗಳ ಬಾಕಿ ಇರುವ ಕಾಮಗಾರಿಗಳನ್ನು ತಕ್ಷಣದಿಂದಲೇ ಕೈಗೊಳ್ಳಲು ಜಯಲಲಿತಾ ಅಧ್ಯಕ್ಷತೆಯ ಸಂಪುಟ ಸಭೆ ಅನುಮತಿ ನೀಡಿತು.

ಅಣು ಸ್ಥಾವರದ ಸುರಕ್ಷತೆ ಕುರಿತು ವರದಿ ಸಲ್ಲಿಸಲು ಆಣು ಶಕ್ತಿ ಇಲಾಖೆ ನೇಮಕ ಮಾಡಿದ್ದ ತಜ್ಞರ ಸಮಿತಿ ಹಾಗೂ ರಾಜ್ಯ ಸರ್ಕಾರ ನೇಮಕ ಮಾಡಿದ್ದ ತಜ್ಞರ ಸಮಿತಿಗಳ ವರದಿ ಆಧಾರದ ಮೇಲೆ ಈ ನಿರ್ಧಾರ ಕೈಗೊಂಡಿರುವುದಾಗಿ ಜಯಲಲಿತಾ ಸ್ಪಷ್ಟನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.