ಶುಕ್ರವಾರ, ಮೇ 14, 2021
32 °C

ಕೂದಲೆಳೆಯ ಅಂತರದಲ್ಲಿ ಪಾರಾದ ಪತ್ರಕರ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಇಲ್ಲಿನ ಹೈಕೋರ್ಟ್‌ನಲ್ಲಿ ಬುಧವಾರ  ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಪಿಟಿಐ ಸುದ್ದಿಸಂಸ್ಥೆಯ ಪತ್ರಕರ್ತ ಕೂದಲೆಳೆಯಲ್ಲಿ ಪಾರಾದರು.



ಸ್ವಾಗತಕಾರರ ಕೌಂಟರ್‌ನಲ್ಲಿ ಪಾಸ್ ತೆಗೆದುಕೊಂಡ ಕಾನೂನು ವರದಿಗಾರ ಉಪಮನ್ಯು ತ್ರಿವೇದಿ ನ್ಯಾಯಾಲಯದ ಕಟ್ಟಡದೆಡೆಗೆ ದೌಡಾಯಿಸುತ್ತಿದ್ದರು. ಅವರು ಕೌಂಟರ್ ಬಿಟ್ಟು ಇನ್ನೂ ಒಂದು ನಿಮಿಷ ಕೂಡ ಆಗಿರಲಿಲ್ಲ. ಅಷ್ಟರೊಳಗೇ ಕಿವಿಗಳನ್ನು ಕಿವುಡಾಗಿಸುವಂತಹ ಭಾರಿ ಶಬ್ದ ಅಪ್ಪಳಿಸಿತು.



ತಿರುಗಿ ನೋಡಿದರೆ ಘೋರ ದೃಶ್ಯ. ಆದರೆ ಆ ಕಠಿಣ ಸಂದರ್ಭದಲ್ಲೂ ಅವರು ವೃತ್ತಿ ಪ್ರಜ್ಞೆ ಮೆರೆದು, ತಕ್ಷಣವೇ  ಕಚೇರಿಗೆ ಫೋನ್ ಮಾಡಿ ಎಲ್ಲರಿಗಿಂತ ಮೊದಲು ಸ್ಫೋಟ ಸುದ್ದಿ ಮುಟ್ಟಿಸಿದರು.



`ನಾನು ಜೀವಾಪಾಯದಿಂದ ಪಾರಾಗಿ ಮೊದಲು ಸುದ್ದಿ ಕೊಟ್ಟಿದ್ದಕ್ಕೆ ಸಂತಸವಾಗಿದೆ. ಆದರೆ ಸ್ಫೋಟ ಸ್ಥಳದ ರಕ್ತಸಿಕ್ತ ಭೀಕರ ದೃಶ್ಯಗಳು ಮನಸ್ಸನ್ನು ಆಳವಾಗಿ ಕಲಕಿವೆ~ ಎಂದಿದ್ದಾರೆ ತ್ರಿವೇದಿ.



ಬಾಂಬ್ ಸ್ಫೋಟ ಸಂಭವಿಸಿದ ನಂತರ ಬೆಂಕಿ, ಹೊಗೆ, ಕೂಗಾಟ, ಚೀರಾಟ ಇಡೀ ಪ್ರದೇಶವನ್ನು ಆವರಿಸಿತು. ನ್ಯಾಯಾಲಯ ಪ್ರವೇಶಿಸಲು ಧಾವಿಸುತ್ತಿದ್ದ ವಕೀಲರು ಸದ್ದು ಬಂದ ಕಡೆ ಓಡಿದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಜನರನ್ನು ಪ್ರಾಣಾಪಾಯದಿಂದ ಪಾರು ಮಾಡಲು ಹೆಣಗಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.