ಭಾನುವಾರ, ಮಾರ್ಚ್ 7, 2021
29 °C
ಮೋದಿ ಪ್ರಮಾಣವಚನದ ವೇಳೆ ಜನನ

ಕೂಸುಗಳಿಗೆ ‘ಮೋದಿ’ ಹೆಸರು ನಾಮಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಸುಗಳಿಗೆ ‘ಮೋದಿ’ ಹೆಸರು ನಾಮಕರಣ

ಮೈಸೂರು: ದೇಶದ 15ನೇ ಪ್ರಧಾನಿಯಾಗಿ ನರೇಂದ್ರ ದಾಮೋದರ ದಾಸ್‌ ಮೋದಿ ಅವರು ಸೋಮವಾರ ದೆಹಲಿಯಲ್ಲಿ ಪ್ರಮಾಣವಚನ ಸ್ವೀಕಾರದ ವೇಳೆಗೆ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಜನಿಸಿದ ಎರಡು ಕೂಸುಗಳಿಗೆ ‘ಮೋದಿ’ ಎಂದು ಮಂಗಳವಾರ ನಾಮಕರಣ ಮಾಡಲಾಗಿದೆ.ಇಲ್ಲಿನ ಚೆಲುವಾಂಬ ಆಸ್ಪತ್ರೆಯಲ್ಲಿ ಮೇ 26ರಂದು ಸಂಜೆ 6 ಮತ್ತು 6.44ರ ವೇಳೆಗೆ  ಇಬ್ಬರು ತಾಯಂದಿರು ಸಹಜ ಪ್ರಸವದಲ್ಲಿ ಎರಡು ಗಂಡು ಶಿಶುಗಳಿಗೆ ಜನ್ಮ ನೀಡಿದ್ದಾರೆ. ಈ ಮಕ್ಕಳು ಕ್ರಮವಾಗಿ ಮಂಡ್ಯ ಜಿಲ್ಲೆಯ ಬೆಳಗೊಳ ಬಳಿಯ ಹೊಸಳ್ಳಿಯ ಉಮಾ ಮತ್ತು ಮಧುಕುಮಾರ್‌ ಹಾಗೂ  ಮೈಸೂರು ಜಿಲ್ಲೆಯ ತಿ. ನರಸೀಪುರ ತಾಲ್ಲೂಕಿನ ಮಾವಿನಹಳ್ಳಿ ಶಾಲಿನಿ ಮತ್ತು ಕೃಷ್ಣ ದಂಪತಿಗಳಿಗೆ ಸೇರಿದವು. ಉಮಾ ಅವರ ಮಗುವಿಗೆ ‘ತನ್ಮಯ್್ ಮೋದಿ’ ಎಂದು  ಹಾಗೂ ಶಾಲಿನಿ ಅವರ ಮಗುವಿಗೆ ‘ನರೇಂದ್ರಕೃಷ್ಣ ಮೋದಿ’,  ಎಂತಲೂ ಹೆಸರು ಇಡಲಾಗಿದೆ.ಮಾಜಿ ಸಚಿವ ಎಸ್‌.ಎ. ರಾಮದಾಸ್‌ ಸಮ್ಮುಖದಲ್ಲಿ ಈ ಮಕ್ಕಳಿಗೆ ಹೆಸರು ಇಡಲಾಗಿದೆ.   ಮಕ್ಕಳ ಪೋಷಕರಿಗೆ ಬಿಜೆಪಿ ನಗರ ಘಟಕದ ವತಿಯಿಂದ ಅಭಿನಂದನಾ ಪತ್ರವನ್ನು ನೀಡಿ ಸಿಹಿ ವಿತರಿಸಲಾಯಿತು.ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಗಾರೆ ಕೆಲಸ ಮಾಡುತ್ತಿರುವ ಶಾಲಿನಿ ಪತಿ ಕೃಷ್ಣ ಅವರಿಗೆ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ದೊರಕಿಸುವುದಾಗಿ ರಾಮದಾಸ್‌ ಭರವಸೆ ನೀಡಿದ್ದಾರೆ.ಚೆಲುವಾಂಬ ಆಸ್ಪತ್ರೆ ಮುಖ್ಯಸ್ಥ ಡಾ.ಕೃಷ್ಣಮೂರ್ತಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಇ. ಮಾರುತಿರಾವ್್ ಪವಾರ್್, ನಗರ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪಗೌಡ, ಕೆ.ಆರ್್. ಕ್ಷೇತ್ರ ಬಿಜೆಪಿ ಅಧ್ಯಕ್ಷ ಆರ್್. ರಾಮಪ್ರಸಾದ್್, ಉಪಾಧ್ಯಕ್ಷ ಆರ್್. ನಾಗರಾಜ್್, ಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.