ನಮ್ಮ ನೆಚ್ಚಿನ ತ್ರಿವೇಣಿ ಇನ್ನೂ 30–40 ವರ್ಷಗಳಾದರೂ ನಮ್ಮೊಡನೆ ಇದ್ದಿದ್ದರೆ ಇನ್ನೆಷ್ಟು ಮನೋಜ್ಞವಾದ ಕಥೆ, ಕಾದಂಬರಿಗಳು ನಮ್ಮ ಮಡಿಲು ಸೇರುತ್ತಿದ್ದವೋ? ತನ್ನ ಭಾವನಾತ್ಮಕ ಅಭಿನಯ ಕೌಶಲದಿಂದ ಹೆಸರಾಗಿದ್ದ ಸ್ಮಿತಾ ಪಾಟೀಲ್, ಅಷ್ಟು ಬೇಗ ಜೀವ ತೊರೆದು ಹೋಗದಿದ್ದರೆ ನಮಗೆ ಇನ್ನೂ ಎಂತೆಂಥ ಅರ್ಥಪೂರಿತ ಚಲನಚಿತ್ರಗಳು ದೊರಕುತ್ತಿದ್ದವೋ!

ಷಹಜಹಾನ್ ಮುದ್ದು ಮಡದಿ ಮುಮ್ತಾಜ್ ಮಹಲ್ ತನ್ನ ಹದಿಮೂರನೇ ಕೂಸು ಗೌಹರಳನ್ನು ಹೆತ್ತು ತಾನು ಜೀವ ತೊರೆದಳು! ಇವರೆಲ್ಲರೂ ಹೆರಿಗೆಯ ಅಪಘಾತಗಳಿಗೆ ಬಲಿಯಾದ ಅಮೂಲ್ಯ ಜೀವಗಳು. ಆದರೆ ಈಗ? ನೀವು ಈ ಲೇಖನವನ್ನು ಓದಿ ಮುಗಿಸುವ ಹೊತ್ತಿಗೇ 15–20 ಗರ್ಭಿಣಿಯರು ಸಾವನ್ನು ಅಪ್ಪಿರುತ್ತಾರೆ! ಅದರ ಹತ್ತರಷ್ಟು ಹೆಣ್ಣುಗಳು ಆ ಅವಧಿಯಲ್ಲಾದ ತೊಂದರೆಗಳಿಂದ ಜೀವಾವಧಿ ನರಳುತ್ತಿರುತ್ತಾರೆ...

ಈ ಅಪಾರ ಜೀವನಷ್ಟ ನಮ್ಮ ಮನಸ್ಸುಗಳನ್ನು ತಲ್ಲಣಗೊಳಿಸುತ್ತದೆ. ದುರಂತವೆಂದರೆ ಈ ಎಲ್ಲ ಸಾವುಗಳನ್ನೂ ತಡೆಗಟ್ಟಬಹುದಾಗಿತ್ತು!
ಒಂದು ಪ್ರಯಾಣಕ್ಕೆ ನಾವು ಹೊರಡುವಾಗಲೇ, ಅಲ್ಲಿ ಯಾವ ತೊಂದರೆಗೂ ಈಡಾಗದಂತೆ ಎಚ್ಚರಿಕೆ ವಹಿಸುತ್ತೇವಲ್ಲವೇ? ಹಾಗೆಯೇ ಈ 270 ದಿನಗಳ ಗರ್ಭಾವಸ್ಥೆಯಲ್ಲಿ ಒದಗಬಹುದಾದ ಅಪಾಯಗಳ ಪರಿಚಯ ನಮಗಿರಬೇಕು. ಯಾವ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಿರ್ಧರಿಸಿದಾಗ, ಸುರಕ್ಷಿತ ತಾಯ್ತನಕ್ಕೆ ದಾರಿ ಸುಗಮವಾಗುತ್ತದೆ.

ಅಂದಹಾಗೆ ‘ಸುರಕ್ಷಿತ ತಾಯ್ತನ’ ಎಂದರೇನು? ಹೆಣ್ಣು, ತನ್ನ ಒಂಭತ್ತು ತಿಂಗಳ ಗರ್ಭಾವಸ್ಥೆಯನ್ನು ಸುರಕ್ಷಿತವಾಗಿ ದಾಟಿ, ಹೆರಿಗೆಯ ಅಗ್ನಿದಿವ್ಯವನ್ನು ಹಾದು ತಾಯಿ, ಮಗು ಇಬ್ಬರೂ ಆರೋಗ್ಯವಾಗಿ ಬಾಣಂತಿ ಕೋಣೆಯಿಂದಾಚೆಗೆ ಹೊರಬಂದರೆಂದರೆ ಅದನ್ನು ‘ಸುರಕ್ಷಿತ ತಾಯ್ತನ’ ಎಂದು ಕರೆಯಬಹುದು. ಅನೇಕರಿಗೆ ಈ ಅದೃಷ್ಟ ಒಲಿಯದಿರಲು ಇರುವ ಅಡೆತಡೆಗಳಾದರೂ ಯಾವುವು? ಪರಿಹಾರ ತಾನೇ ಏನು?

ಹೆಣ್ಣು, ತಾನು ಗರ್ಭಿಣಿಯೆಂದು ತಿಳಿದ ಕೂಡಲೇ ಹತ್ತಿರ ಸುಸಜ್ಜಿತ ಆಸ್ಪತ್ರೆಯಲ್ಲಿ ತನ್ನನ್ನೇ ದಾಖಲಿಸಿಕೊಳ್ಳಬೇಕು. ಅಲ್ಲಿ, ಅವಳ ಆರೋಗ್ಯದ ಪೂರ್ಣ ತಪಾಸಣೆಯಾಗಿ, ಅವಳ ಕುಟುಂಬ ವಿವರಗಳು ಅವಳ ಎತ್ತರ ತೂಕ ಇತ್ಯಾದಿಗಳನ್ನು ಬರೆದಿಟ್ಟುಕೊಳ್ಳುತ್ತಾರೆ. ರಕ್ತ ಪರೀಕ್ಷೆ ಮಾಡಿ, ಅವಳ ರಕ್ತದ ಗುಂಪನ್ನು (A, B, O, AB) ತಿಳಿದುಕೊಂಡು ಅಲ್ಲಿ HIV ಹೆಪಟೈಟಸ್ B VDRL ಮುಂತಾದ ಸೋಂಕುಗಳಿವೆಯೇ ಎಂದೂ ಪರೀಕ್ಷಿಸುತ್ತಾರೆ. ರಕ್ತದಲ್ಲಿ RH ಎನ್ನುವ ರೋಧ ಜನಕ ವಸ್ತು ಇದೆಯಾ ಎಂದು ಗಮನಿಸುತ್ತಾರೆ.

ಸಾಮಾನ್ಯವಾಗಿ 95% ರಷ್ಟು ಜನರಲ್ಲಿ ಈ ವಸ್ತು ಇದ್ದು (rh+ve) ಅಂದಾಜು 5% ಜನ ರಲ್ಲಿ ಆ ಅಂಶ ಇರುವುದಿಲ್ಲ (rh-ve) ಈ ವಿಷಯ ಇಲ್ಲಿ ಯಾಕೆ ಬರಬೇಕು? ಗರ್ಭಿಣಿಯು rh-ve ಇದ್ದು, ಅವಳ ಪತಿ rh+ve ಆಗಿದ್ದರೆ ಗರ್ಭಸ್ಥಮಗು rh ಪಾಸಿಟಿವ್ ಇರುವ ಸಂಭವ ಹೆಚ್ಚಾಗಿರುತ್ತೆ. ಅದರ ರಕ್ತಕಣಗಳಲ್ಲಿ ತಾಯಿಯ ರಕ್ತವನ್ನು ಸೇರಿದಾಗ, ಅಲ್ಲಿ ಪ್ರತಿರೋಧ ಕಾಯಗಳು (ಆ್ಯಂಟಿಬಾಡಿಗಳು) ಉತ್ಪತ್ತಿಯಾಗಿ ಅವು ಗರ್ಭಸ್ಥ ಮಗುವಿನ ರಕ್ತ ಸೇರುವ ಅಪಾಯವಿರುತ್ತದೆ. ಹೀಗಾದಾಗ, ಅದರ ರಕ್ತಕಣಗಳು ನಾಶವಾಗುತ್ತಾ ವಿಪರೀತವಾದ ರಕ್ತಹೀನತೆ ಉಂಟಾಗುತ್ತೆ. ಮೈ ಊದಿಕೊಂಡು ‘ಹೈಡ್ರಾಪ್್ಸ ಪೀಟಾಲಸ್’ ಎಂಬ ಮಾರಕ ಅವಸ್ಥೆಯನ್ನು ತಲಪುತ್ತದೆ. ಗರ್ಭಪಾತವೂ ಆಗಬಹುದು.

ಈ ತೊಂದರೆ ಸಾಮಾನ್ಯವಾಗಿ ಮರುಚಲ ಹೆರಿಗೆಯಲ್ಲಿ ಕಾಣಬರುವುದರಿಂದ ಹೆಣ್ಣು ತನ್ನ ಚೊಚ್ಚಲ ಹೆರಿಗೆಯಾದ 72 ಗಂಟೆಗಳೊಳಗೆ (ಆ್ಯಂಟಿ–ಡಿ) ಇಂಜೆಕ್ಷನ್ನನ್ನು ಸ್ವೀಕರಿಸಬೇಕು. ಅದು ಮುಂದಿನ ಗರ್ಭಾವಧಿಯಲ್ಲಿ ಗರ್ಭಸ್ಥ ಮಗುವನ್ನು ರಕ್ಷಿಸುತ್ತದೆ.
ಒಂಬತ್ತು ತಿಂಗಳ ಗರ್ಭಾವಧಿಯನ್ನು ಮೂರು ತ್ರೈಮಾಸಿಕಗಳನ್ನಾಗಿ ವಿಂಗಡಿಸುತ್ತಾರೆ. ಮೊದಲ ತ್ರೈಮಾಸಿಕವು ಮೊದಲ ಮೂರು ತಿಂಗಳನ್ನು ಒಳಗೊಂಡಿದ್ದರೆ ಎರಡನೆಯ ತ್ರೈಮಾಸಿಕವು ನಾಲ್ಕರಿಂದ ಆರು ತಿಂಗಳು ತುಂಬುವವರೆಗೂ ಇರುತ್ತದೆ. ಇನ್ನು, ಏಳರಿಂದ ಒಂಬತ್ತು ತಿಂಗಳು ತುಂಬುವವರೆಗೂ ಮೂರನೇ ತ್ರೈಮಾಸಿಕ, ಎನ್ನಿಸಿಕೊಳ್ಳುತ್ತದೆ ಇದು, ಹೆರಿಗೆಯ ಪ್ರಕ್ರಿಯೆಯಲ್ಲಿ ಕೊನೆಗೊಳ್ಳುತ್ತದೆ.

ಮೊದಲ ತ್ರೈಮಾಸಿಕದಲ್ಲಿ...

ಗರ್ಭಿಣಿ ಆಸ್ಪತ್ರೆಗೆ ಬಂದೊಡನೆಯೇ, ಅವಳಲ್ಲಿ ಗರ್ಭ ನಿಜವಾಗಿಯೂ ನಿಂತಿದೆಯೇ ಎಂದು ತಜ್ಞರು ಖಚಿತಪಡಿಸಿಕೊಳ್ಳುತ್ತಾರೆ. ಅದು ಹುಸಿಗರ್ಭವಾಗಬಾರದಲ್ಲ? ಈ ಮೊದಲ ದಿನಗಳಲ್ಲಿ ಭ್ರೂಣದ ಅವಯವಗಳು ಚಿಗುರೊಡೆಯುತ್ತಿರುವಾಗ, ಅದು ಸಮರ್ಪಕವಾಗಿ ಬೆಳೆಯಲಿ ಎಂದು ಫೋಲಿಕ್ ಆಮ್ಲದ ಮಾತ್ರೆಯೊಂದನ್ನು ಅವಳು ಸೇವಿಸಬೇಕೆಂದು ಆಸ್ಪತ್ರೆಯಲ್ಲಿ ಆದೇಶಿಸುತ್ತಾರೆ.

ಅದನ್ನು ಬಿಟ್ಟು ಗರ್ಭಿಣಿಯು ತಾನಾಗಿ ಔಷಧಿ ಅಂಗಡಿಯಿಂದ ಯಾವ ಔಷಧಿಯನ್ನು ತರಿಸಿ ಸೇವಿಸಕೂಡದು. ಹಲವಾರು ವರ್ಷಗಳ ಕೆಳಗೆ ಈ ಹಂತದಲ್ಲಿದ್ದ ಗರ್ಭಿಣಿಯರು ತಮ್ಮ ವಾಂತಿ ವಾಕರಿಕೆಗಳನ್ನು ತಗ್ಗಿಸಿಕೊಳ್ಳಲು ‘ಥಾಲಿಡೊಮೈಡ್’ ಮಾತ್ರೆಗಳನ್ನು ನುಂಗಿ ಕೈಕಾಲುಗಳಿಲ್ಲದ ಮಕ್ಕಳನ್ನು (‘ಫೋಕೊಮೇಲಿಯಾ’) ಹಡದದ್ದು ನಮ್ಮಲ್ಲಿ ಕೆಲವರಿಗಾದರೂ ನೆನಪಿರಬೇಕಲ್ಲವೆ?

ಹೌದು, ಈ ಹಂತದಲ್ಲಿ ಕೆಲವು ಗರ್ಭಿಣಿಯರಿಗೆ ವಾಂತಿ, ವಾಕರಿಕೆಗಳು ಕಾಡಬಹುದು. ಈ ‘ಉಸಿರ ಬಯಕೆ’ಯೇ ತೀವ್ರವಾಗಿ, ಗಂಭೀರವಾದ ನಿರ್ದ್ರವತೆಗೆಡೆಗೊಟ್ಟು ಆಸ್ಪತ್ರೆಯ ತುರ್ತು ಚಿಕಿತ್ಸೆಯ ಅಗತ್ಯವನ್ನು ತಂದೊಡ್ಡುತ್ತದೆ. ಅಲ್ಲಿ ಗ್ಲೂಕೋಸ್ ಹಾಗೂ ಲವಣಯುಕ್ತವಾದ ದ್ರಾವಣಗಳನ್ನು ಗರ್ಭಿಣಿಯ ರಕ್ತನಾಳಗಳಿಗೆ ತೊಟಕರಿಸಿ, ಇನ್ನೂ ಕೆಲವು ಶಾವಾಕಗಳನ್ನು ನೀಡಿ ಅವಳನ್ನು ಗುಣಪಡಿಸುತ್ತಾರೆ.

ಇಲ್ಲೊಂದು ಸ್ಕ್ಯಾನಿಂಗ್ (ಶ್ರವಣಾತೀತ ಶಬ್ದದಲೆಗಳನ್ನು ಬಳಸಿ) ಮಾಡಬೇಕಾಗುತ್ತದೆ, ಎಲ್ಲವೂ ಸಹಜವಿದ್ದಾಗ, ಭ್ರೂಣವು ಅಂಡನಾಳದಲ್ಲಿ ಮೆಲ್ಲ ಮೆಲ್ಲನೆ ಜರುಗಿ ಗರ್ಭಕೋಶವನ್ನು ಪ್ರವೇಶಿಸಿ ಅಲ್ಲಿ, ಸಿದ್ದವಾಗಿರುವ ಒಳಪದರದ ಮೇಲುಭಾಗದಲ್ಲಿ ನಾಟಿಕೊಳ್ಳುತ್ತದೆ.

ಆದರೆ ಕೆಲವೇ ಕೆಲವು ಸಂದರ್ಭಗಳಲ್ಲಿ ಹಾಗಾಗದೆ ಭ್ರೂಣವು ಅಂಡನಾಳದಲ್ಲಿಯೇ ನಾಟಿಕೊಂಡು ‘ಎಕ್ಟೋಪಿಕ್ ಗರ್ಭ’ವನ್ನು ಉಂಟುಮಾಡುತ್ತೆ. ಆದರೆ ಅಂಡನಾಳದ ಸೂಕ್ಷ್ಮ ಸ್ನಾಯುಗಳಿಗೆ, ಆ ಗರ್ಭವನ್ನು ಪೂರ್ಣಾವಧಿಯವರೆಗೂ ಸಾಕುವ ತಾಕತ್ತಿರುವುದಿಲ್ಲವಾಗಿ, ಅದು ಛಿದ್ರಗೊಳ್ಳುತ್ತದೆ ಹಾಗೂ ತೀವ್ರ ಆಂತರಿಕ ಸ್ರಾವಕ್ಕೆ ಎಡೆಮಾಡಿಕೊಡುತ್ತದೆ. ಇದು ಬಹಳ ಅಪಾಯಕರ ಪರಿಸ್ಥಿತಿ. ತುರ್ತು ಶಸ್ತ್ರಚಿಕಿತ್ಸೆಯನ್ನೇ ಮಾಡಿ ಗರ್ಭಿಣಿಯನ್ನು ಉಳಿಸಿಕೊಳ್ಳಬೇಕಾಗುತ್ತದೆ.
ಎರಡನೆಯ ತ್ರೈಮಾಸಿಕದಲ್ಲಿ...

ಈಗ ಗರ್ಭ ಆರೋಗ್ಯಕರವಾಗಿ ಬೆಳೆಯುತ್ತಿದ್ದಲ್ಲಿ ನಿರ್ವಾಹಕರ ಕೈಗೆ ಗರ್ಭಿಣಿಯ ಉದರದ ಕೆಳಭಾಗದಲ್ಲಿಯೇ ನಿಲ್ಲುತ್ತದೆ, ಹಳ್ಳಿಯ ಹೆಣ್ಣುಮಕ್ಕಳು ಅವಳನ್ನು ಹೀಗೆ ಛುಡಾಯಿಸುತ್ತಾರೆ–

‘ಮೂರು ತಿಂಗಳಿಗೆ ಮುಖ ಬೆಳ್ಳಗಾಗಿತ್ತು
ಹುಸಿಯಿಲ್ಲದ್ಹೇಳು ತಂಗವ್ವ–ನಿನ್ಮುಖ
ಹಸನಾಗಿ ಚಿನ್ನ ಎಸೆದ್ಹಾಂಗ’

ಗರ್ಭಿಣಿಗೆ ರಕ್ತಪುಷ್ಟಿ ಸಮರ್ಪಕವಾಗಿದ್ದಾಗ ಹೀಮೊಗ್ಲೋಬಿನ್ ಅಂಶ 12–14 ಗ್ರಾಮಗಳಿರಬೇಕಾಗುತ್ತೆ. ಅವಳಲ್ಲಿ ರಕ್ತಹೀನತೆ ಕಾಣದಿರಲೆಂದು, ಈಗ ಅವಳಿಗೆ ಕಬ್ಬಿಣಾಂಶವಿರುವ ಗುಳಿಗೆಯನ್ನು ಕೊಡುತ್ತಾರೆ. ಹೀಮೊಗ್ಲೋಬಿನ್ 10 ಗ್ರಾಂಗಳಿಗಿಂತ ಕಡಿಮೆ ಇದ್ದಾಗ ಈ ಮಾತ್ರೆಗಳ ಸಂಖ್ಯೆ ಹೆಚ್ಚಿಸುತ್ತಾರೆ. ಕೆಲವೊಮ್ಮೆ, ಇಂಜೆಕ್ಷನ್ ಹಾಗೂ ರಕ್ತಪೂರಣೆಯೂ ಬೇಕಾಗುತ್ತವೆ. ಗರ್ಭಿಣಿಯ ಆಹಾರವೂ ಪುಷ್ಪಿಕರವಾಗಿದ್ದು ಸಮತೋಲಿತವಾಗಿರುವುದು ಬಹಳ ಮುಖ್ಯ. ಅವಳು ಪೇಲವವಾದ ‘ಬಸಿರಿಮುಖ’ವನ್ನೂ ಹೊರಬಾರದು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.