ಕೊಲಂಬೊ: ಮಹಿಳಾ ವಿಶ್ವಕಪ್ನ 25ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟಾಸ್ ಗೆದ್ದಿರುವ ಶ್ರೀಲಂಕಾ ತಂಡವು ಮೊದಲು ಬೌಲಿಂಗ್ ಆಯ್ದುಕೊಂಡಿದೆ.

ಮಳೆಯಿಂದ ಪಂದ್ಯ ವಿಳಂಬವಾಗಿದ್ದು, 34 ಓವರ್ಗಳಿಗೆ ಇನಿಂಗ್ಸ್ ಕಡಿತಗೊಳಿಸಲಾಗಿದೆ. ವಿಶ್ವಕಪ್ನಲ್ಲಿ ಎರಡೂ ತಂಡಗಳು ಕಳಪೆ ಆಟವಾಡಿದ್ದು, ಈಗಾಗಲೇ ಟೂರ್ನಿಯಿಂದ ಹೊರಬಿದ್ದಿವೆ.

ಪಾಕಿಸ್ತಾನವು ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತಿದ್ದು, 2 ಪಂದ್ಯಗಳು ಮಳೆಯಿಂದ ರದ್ದುಗೊಂಡಿವೆ. ಶ್ರೀಲಂಕಾ ತಂಡ ಕೂಡ ಆಡಿರುವ ಆರು ಪಂದ್ಯಗಳಲ್ಲಿ ಒಂದರಲಷ್ಟೇ ಗೆಲ್ಲಲು ಶಕ್ತವಾಗಿದ್ದು, 2 ಪಂದ್ಯಗಳು ಮಳೆಗಾಹುತಿಯಾಗಿದೆ.

ಎರಡೂ ತಂಡಗಳು ಕೂಡ ಈ ಪಂದ್ಯವನ್ನು ಗೆದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿವೆ.

ಪಾಕಿಸ್ತಾನ ತಂಡ: ಮುನೀಬಾ ಅಲಿ(ವಿಕೆಟ್ ಕೀಪರ್), ಒಮೈಮಾ ಸೊಹೈಲ್, ಸಿದ್ರಾ ಅಮೀನ್, ಅಲಿಯಾ ರಿಯಾಜ್, ನತಾಲಿಯಾ ಪರ್ವೈಜ್, ಫಾತಿಮಾ ಸನಾ(ನಾಯಕಿ), ಫಾತಿಮಾ, ಸೈಯದಾ ಅರೂಬ್ ಶಾ, ರಮೀನ್ ಶಮೀಮ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್

ಶ್ರೀಲಂಕಾ ತಂಡ: ವಿಶ್ಮಿ ಗುಣರತ್ನೆ, ಚಾಮರಿ ಅಥಾಪತ್ತು(ನಾಯಕಿ), ಹಾಸಿನಿ ಪೆರೆರಾ, ಹರ್ಷಿತಾ ಸಮರವಿಕ್ರಮ, ಕವಿಶಾ ದಿಲ್ಹಾರಿ, ನೀಲಾಕ್ಷಿ ಡಿ ಸಿಲ್ವಾ, ಅನುಷ್ಕಾ ಸಂಜೀವನಿ(ವಿಕೆಟ್ ಕೀಪರ್), ವಿಹಂಗಾ, ಸುಗಂದಿಕಾ ಕುಮಾರಿ, ಮಾಲ್ಕಿ ಮಾದರ, ಇನೋಕಾ ರಣವೀರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.