ದಿನ ಭವಿಷ್ಯ: ಇತರರ ಭಾವನೆಗಳಿಗೆ ಆದ್ಯತೆಯನ್ನು ನೀಡುವುದು ಅನಿವಾರ್ಯ
Published 14 ಡಿಸೆಂಬರ್ 2025, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಇತರರ ಭಾವನೆಗಳಿಗೆ ಆದ್ಯತೆಯನ್ನು ನೀಡುವುದು ಅನಿವಾರ್ಯ. ವಿದೇಶಿ ಬಂಡವಾಳಗಳಿಂದ ಲಾಭ ಗಳಿಸುವ ಅವಕಾಶ ಬರಲಿದೆ. ಸರ್ಕಾರಿ ಅಧಿಕಾರಿಗಳಿಗೆ ಕೆಲಸದ ಒತ್ತಡ ಕಡಿಮೆಯಾಗಲಿದೆ.
ವೃಷಭ
ವ್ಯಾವಹಾರಿಕ ವಿಚಾರಗಳು ನಿಧಾನವಾಗಿ ಬೆಳವಣಿಗೆ ಕಾಣುತ್ತವೆ. ವೈವಾಹಿಕ ಸಂಬಂಧಗಳಲ್ಲಿ ಹಾಗೂ ಕೌಟುಂಬಿಕ ಸಂಬಂಧಗಳಲ್ಲಿ ಶಾಂತವಾಗಿ ವರ್ತಿಸಿ. ಹೊಸದಾದ ವಿಚಾರಗಳನ್ನು ಕಲಿಯುವಿರಿ.
ಮಿಥುನ
ಮಾತನಾಡುವ ಕಲೆಯೇ ವರದಾನವಾಗಿ ಪರಿಣಮಿಸುವುದು. ಸಭೆ ಸಮಾರಂಭಗಳು ಅಥವಾ ಒಪ್ಪಂದಗಳು ಲಾಭದಾಯಕ. ರಾತ್ರಿಯ ಸಮಯ ಹೆಚ್ಚು ಯೋಚನೆಗಳನ್ನು ಬಿಟ್ಟುಬಿಡಿ.
ಕರ್ಕಾಟಕ
ಸುತ್ತ ಮುತ್ತ ನಡೆಯುವ ಘಟನೆಗಳು ಭಾವುಕರನ್ನಾಗಿ ಮಾಡುತ್ತವೆ. ಸ್ವಂತ ಆರೋಗ್ಯ ಹಾಗೂ ಸಂತೋಷದ ಬಗ್ಗೆ ಗಮನ ಹರಿಸಿ. ಎಲ್ಲದಕ್ಕೂ ಕೌಟುಂಬಿಕ ಸಹಕಾರ ಸಿಗಲಿದೆ.
ಸಿಂಹ
ಶ್ರಮ ಹಾಗೂ ಕರ್ತವ್ಯ ನಿಷ್ಠೆ ಇಂದು ಪ್ರಕಾಶವಾಗುವುದು. ವೃತ್ತಿಯಲ್ಲಿ ಅಭಿವೃದ್ಧಿ ಕಾಣುವಿರಿ. ಸ್ವಾಭಿಮಾನಕ್ಕೆ ಧಕ್ಕೆ ಬರುವಂಥ ಸನ್ನಿವೇಶಗಳಿಂದ ದೂರ ಉಳಿಯಿರಿ.
ಕನ್ಯಾ
ಎಲ್ಲವನ್ನೂ ಮೊದಲೇ ಅಚ್ಚುಕಟ್ಟಾಗಿ ವೇಳಾಪಟ್ಟಿಯನ್ನು ಹಾಕಿಕೊಂಡಲ್ಲಿ ಲಾಭದಾಯಕ ದಿನ . ಹಣಕಾಸಿನ ವಹಿವಾಟು ಉತ್ತಮವಾಗಿದ್ದು ಮಾರಾಟ ಕ್ಷೇತ್ರವನ್ನು ಹೆಚ್ಚಿಸಿಕೊಳ್ಳಿ.
ತುಲಾ
ಕೆಲಸದಲ್ಲಿ ತೊಡಕನ್ನುಂಟುಮಾಡುವ ಶತ್ರುಗಳ ಪ್ರಯತ್ನ ವಿಫಲವಾಗುವುದು. ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ಜಯಶೀಲರಾಗುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.
ವೃಶ್ಚಿಕ
ವೈಯಕ್ತಿಕ ಜೀವನದಲ್ಲಿ ಕೆಲವೊಂದು ಬದಲಾವಣೆಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಲಿದೆ. ಕೆಲಸ ಮಾಡುವ ಮುನ್ನ ವಾಸ್ತವಾಂಶ ಗಳನ್ನು ಅರಿತುಕೊಳ್ಳುವ ಪ್ರಯತ್ನ ಒಳ್ಳೆಯದು.
ಧನು
ಹೊಸ ವಿನ್ಯಾಸದ ಉಡುಪುಗಳು ಕೆಲವು ಸ್ಥಳಗಳಿಗೆ ಸರಿಯಾಗದಿರಬಹುದು. ಒತ್ತಡ ತರುವ ಕೆಲಸಗಳಿಂದ ದೂರ ಉಳಿಯಿರಿ. ಸಣ್ಣ ಮಕ್ಕಳಿಂದಾಗಿ ಮರ್ಯಾದೆಯು ಹೋಗಬಹುದು.
ಮಕರ
ನಿಪುಣತೆಯಿಂದ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ತೆರಳುವ ಯೋಗ. ತಂದೆ-ತಾಯಿ ಅಥವಾ ಮನೆಯವರ ಮಾತಿನತ್ತ ಗಮನ ಹರಿಸಿ. ಕಲ್ಪನಾಶಕ್ತಿ ಚುರುಕಾಗಿ ಕೆಲಸ ಮಾಡಲಿದೆ.
ಕುಂಭ
ಕೆಲಸ ಕಾರ್ಯಗಳಲ್ಲಿ ಬಾಧೆಯಾಗಿ ನಿಲ್ಲುತ್ತಿದ್ದ ವ್ಯಕ್ತಿಯು ಆ ದಾರಿಯಿಂದ ದೂರ ಸರಿಯಲಿದ್ದಾರೆ. ಸ್ನೇಹಿತರಲ್ಲಿ ಅನಗತ್ಯ ಮಾತನಾಡುವುದಕ್ಕಿಂತ ಮೌನವಾಗಿ ಇರುವುದು ಲೇಸು.
ಮೀನ
ವಿವಾಹ ಪ್ರಸ್ತಾಪಗಳು ಬಲಗೊಂಡು ಕಂಕಣ ಭಾಗ್ಯ ಕೂಡಿಬರಲಿದೆ. ಮೊಂಡುತನವನ್ನು ಬಿಟ್ಟು ಪೋಷಕರ ಮಾತುಗಳನ್ನು ಕೇಳಲೇಬೇಕಾಗುತ್ತದೆ. ಆಧ್ಯಾತ್ಮಿಕ ವಿಷಯಗಳತ್ತ ಮನಸ್ಸು ವಾಲಲಿದೆ.