ಸಿರುಗುಪ್ಪ: ಬತ್ತದ ಫಸಲು ತೆನೆ ಕಟ್ಟದೇ ಇರುವ ರೈತರ ಜಮೀನಿಗೆ ಮಂಗಳವಾರ ಕೃಷಿ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ತಾಲ್ಲೂಕಿನ ದರೂರು ಗ್ರಾಮದಲ್ಲಿ ಬೇಸಿಗೆ ಹಂಗಾಮಿನಲ್ಲಿ ರೈತರು ನೀರಾವರಿ ಜಮೀನಿನಲ್ಲಿ ನಾಟಿ ಮಾಡಿದ ನಾಗಾರ್ಜುನ ಕಂಪನಿಯ ಕಾವೇರಿ ಸೋನ ಬತ್ತದ ತಳಿ ಅವಧಿ ಮೀರಿದರೂ ತೆನೆ ಕಟ್ಟಿದೇ ಇರುವ ವರದಿಯನ್ನು `ಪ್ರಜಾವಾಣಿ~ ಪತ್ರಿಕೆಯಲ್ಲಿ ವರದಿ ಮಾಡಲಾಗಿತ್ತು.

ಆ ಪ್ರದೇಶಕ್ಕೆ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಬೇಸಾಯ, ಕೀಟ, ಬೀಜ ತಳಿ, ರೋಗ ತಜ್ಞರ ವಿಜ್ಞಾನಿಗಳ ತಂಡ ಖುದ್ದು ಭೇಟಿ ನೀಡಿ ಫಸಲು ವೀಕ್ಷಿಸಿ ರೈತರೊಂದಿಗೆ ಚರ್ಚಿಸಿದರು.

ಇಲ್ಲಿಯ ಸಹಾಯಕ ಕೃಷಿ ನಿರ್ದೇಶಕ ಸಿ.ಆರ್.ಚಂದ್ರಶೇಖರ್, ವಿಜ್ಞಾನಿಗಳ ತಂಡದ ಮಹಮ್ಮದ್ ಇಬ್ರಾಹಿಂ ಮಾತನಾಡಿ, ಬತ್ತದ ಮಾಹಿತಿಯನ್ನು ರೈತರಿಂದ ಪಡೆದಿದ್ದೇವೆ ಇದರ ಸಾಧಕ-ಬಾಧಕಗಳ ಬಗ್ಗೆ ಅಧ್ಯನ ನಡೆಸಿ ತೆನೆ ಕಟ್ಟದಿರುವ ಬತ್ತದ ಫಸಲಿನ ವರದಿಯನ್ನು ಕೇಂದ್ರ ವಿಶ್ವವಿದ್ಯಾಲಯಕ್ಕೆ ಒಂದೆರೆಡು ದಿನಗಳಲ್ಲಿ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.

ಕೃಷಿ ವಿಜ್ಞಾನಿಗಳಾದ ಡಾ.ಮಸ್ತಾನ್ರೆಡ್ಡಿ, ಡಾ.ಗುರುಪ್ರಸಾದ್, ಡಾ.ಎಸ್.ಬಿ.ಗೌಡರ್, ಕರೂರು ಕೃಷಿ ಇಲಾಖೆ ಸಹಾಯಕ ಸುಬಾನ್ಸಾಬ್, ಮಾರುತಿ ಪ್ರಸಾದ್ ತಂಡದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.