ಶನಿವಾರ, ಮೇ 15, 2021
25 °C

ಕೃಷ್ಣಾಜಿಲ್ಲೆ ಮಡಿಲಿಗೆ ಪ್ರಥಮ ಸ್ಥಾನದ ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಇಲ್ಲಿನ ರಾಜೇಂದ್ರ ಗಂಜ್ ಆವರಣದಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಅಂಗವಾಗಿ ಭಾನುವಾರ ನಡೆದ ಎತ್ತುಗಳಿಂದ ಎರಡು ಟನ್ ಭಾರದ ಕಲ್ಲು ಎಳೆಯುವ(ಅಖಿಲ ಭಾರತ ಮುಕ್ತ) ಸ್ಪರ್ಧೆ ನಡೆಯಿತು. ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಕೆ.ಎನ್ ರಾವ್ ಎಂಬುವವರು ಎತ್ತುಗಳು 20ನಿಮಿಷಗಳಲ್ಲಿ 3004.6 ಅಡಿ ದೂರು ಎಳೆಯುವ ಮೂಲಕ ಪ್ರಥಮ ಸ್ಥಾನ 60 ಸಾವಿರ ರೂಪಾಯಿ ನಗದು  ಬಹುಮಾನ ಪಡೆದುಕೊಂಡರು.ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಗೀತಾಮೈತ ಚೌದರಿ ಎಂಬುವವರ ಎತ್ತುಗಳು 20 ನಿಮಿಷಗಳಲ್ಲಿ 3,000 ಅಡಿ ದೂರ ಎಳೆಯುವ ಮೂಲಕ ದ್ವಿತೀಯ ಸ್ಥಾನ 45 ಸಾವಿರ ರೂಪಾಯಿಗಳ ನಗದು ಬಹುಮಾನ ಪಡೆದುಕೊಂಡರು. ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಜಿಲ್ಲಾಲ ಗ್ರಾಮದ ಗೊಟಿಕ ನಾಗರೆಡ್ಡಿ ಎಂಬುವವರ ಎತ್ತುಗಳು 20 ನಿಮಿಷಗಳಲ್ಲಿ 2,100 ಅಡಿ ದೂರ ಎಳೆಯುವ ಮೂಲಕ ತೃತೀಯ ಸ್ಥಾನ 35 ಸಾವಿರ ರೂಪಾಯಿಗಳ ನಗದು ಬಹುಮಾನ ಪಡೆದುಕೊಂಡರು.ಆಂಧ್ರ ಪ್ರದೇಶದ  ಮಹೆಬೂಬ್‌ನಗರ ಜಿಲ್ಲೆಯ ವನಪರ್ತಿ ಗ್ರಾಮದ ಜಂಗಡಿರಾಜು ಎಂಬುವವರ ಎತ್ತುಗಳು 20 ನಿಮಿಷಗಳಲ್ಲಿ 2,038.11 ಅಡಿ ದೂರ ಎಳೆಯುವ ಮೂಲಕ ತೃತೀಯ ಸ್ಥಾನ 25 ಸಾವಿರ ರೂಪಾಯಿಗಳ ನಗದು ಬಹುಮಾನ ಪಡೆದುಕೊಂಡರು. ಯಾದಗಿರು ಜಿಲ್ಲೆಯ ಕಡೆಕಲ್ ಗ್ರಾಮದ ರಾಜುಗೌಡ ಎಂಬುವವರ ಎತ್ತುಗಳು 20ನಿಮಿಷಗಳಲ್ಲಿ 1892.03 ಅಡಿ ದೂರು ಎಳೆಯುವ ಮೂಲಕ ಐದನೇ ಸ್ಥಾನ 20 ಸಾವಿರ ರೂಪಾಯಿಗಳ ನಗದು ಬಹುಮಾನ ಪಡೆದುಕೊಂಡರು.ಮಲ್ದಕಲ್ ಗ್ರಾಮದ ಬಿ.ರಾಮುಲು ಎಂಬುವವರ ಎತ್ತುಗಳು 20 ನಿಮಿಷಗಳಲ್ಲಿ 1830.06 ಅಡಿ ದೂರ ಎಳೆಯುವ ಮೂಲಕ ಆರನೇ ಸ್ಥಾನ 20ಸಾವಿರ ರೂಪಾಯಿಗಳ ನಗದು ಪಡೆದುಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.