ಮಂಗಳವಾರ, ಏಪ್ರಿಲ್ 20, 2021
32 °C

ಕೆ.ಎನ್. ಗುರುಸ್ವಾಮಿ ಕೊಡುಗೆ ಅನನ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಾರಾಯಣ ಗುರುಗಳ ಆದರ್ಶದಂತೆ ಬದುಕಿದ `ಪ್ರಜಾವಾಣಿ~ ಹಾಗೂ `ಡೆಕ್ಕನ್ ಹೆರಾಲ್ಡ್~ ಪತ್ರಿಕಾ ಸಮೂಹದ ಸಂಸ್ಥಾಪಕರಾದ ಕೆ.ಎನ್. ಗುರುಸ್ವಾಮಿ ಅವರು ಹಿಂದುಳಿದ ಈಡಿಗ ಸಮುದಾಯದ ಏಳಿಗೆಗೆ ಶ್ರಮಿಸಿದ್ದಾರೆ~ ಎಂದು ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ ಜೆ.ಪಿ.ನಾರಾಯಣಸ್ವಾಮಿ ಹೇಳಿದರು.ಇತ್ತೀಚೆಗೆ ಸಂಘವು ಹಮ್ಮಿಕೊಂಡಿದ್ದ ಸಂಸ್ಥಾಪಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, `ಗುರುಸ್ವಾಮಿ ಹಾಗೂ ಕೆ.ವೆಂಕಟಸ್ವಾಮಿ ಅವರ ಮುಂದಾಲೋಚನೆಯ ಪ್ರತಿಫಲವಾಗಿ ಸುಧಾ ಸಹಕಾರಿ ಬ್ಯಾಂಕ್ ಸ್ಥಾಪನೆಯಾಯಿತು. ಸೋಲೂರಿನ ಆರ್ಯ ಈಡಿಗ ಮಠಕ್ಕೆ ಉತ್ತೇಜನ ದೊರೆಯಿತು~ ಎಂದು ಹೇಳಿದರು.ಸಹಕಾರ ಸಂಘದ ಜಂಟಿ ನಿಬಂಧಕ ಬಿ.ಎ.ಮಹೇಶ್ವರಪ್ಪ, `ಗುರುಸ್ವಾಮಿ ಹಾಗೂ ವೆಂಕಟಸ್ವಾಮಿ ಅವರು ಈಡಿಗ ಸಮುದಾಯದ ಪಿತಾಮಹರಾಗಿ ಬೆಳೆದಿದ್ದಾರೆ. ಜನಾಂಗವನ್ನು ಶೈಕ್ಷಣಿಕವಾಗಿ ಪ್ರಗತಿ ಪಥದಲ್ಲಿ ಕೊಂಡೊಯ್ಯಲು ಶ್ರಮಿಸಿದ್ದಾರೆ~ ಎಂದು ತಿಳಿಸಿದರು.ಬೆಂಗಳೂರು ಈಡಿಗ ವಿದ್ಯಾರ್ಥಿ ನಿಲಯದ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಆರ್. ಕೃಷ್ಣಪ್ಪ, `ಗುರುಸ್ವಾಮಿ ಮತ್ತು ಕೆ.ವೆಂಕಟಸ್ವಾಮಿ ಅವರ ಜ್ಞಾಪಕಾರ್ಥವಾಗಿ ನಗರದ ರಸ್ತೆ ಅಥವಾ ವೃತ್ತಕ್ಕೆ ಅವರ ಹೆಸರಿಡಬೇಕು~ ಎಂದು ಮನವಿ ನೀಡಿದರು.ಪತ್ರಕರ್ತ ವಿ.ವೆಂಕಟೇಶ್ ಮಾತನಾಡಿದರು. ಸಮಾರಂಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಜೆ.ಕಾಳೇಗೌಡ, ಖಜಾಂಚಿ ಕೆ.ಜಿ.ಹನುಮಂತರಾಜು, ಗೊರವನಹಳ್ಳಿ ಲಕ್ಷ್ಮಿ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಟಿ.ವಿಜಯ ನರಸಿಂಹಯ್ಯ ಮತ್ತಿತರರು ಉಪಸ್ಥಿತರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.