ಸೋಮವಾರ, ಜೂನ್ 21, 2021
27 °C

ಕೆಜಿಎಫ್: ಮರಗಳು ಬೆಂಕಿಗೆ ಆಹುತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್: ಮರಗಳು ಬೆಂಕಿಗೆ ಆಹುತಿ

ಕೆಜಿಎಫ್: ಕಳೆದ ಒಂದು ವಾರದಿಂದ ಬೆಮಲ್‌ನಗರ ಸುತ್ತಮುತ್ತ ಆಗಾಗ್ಗೆ ಉಂಟಾಗುತ್ತಿರುವ ಬೆಂಕಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮರಗಿಡ ಸುಟ್ಟುಹೋಗಿವೆ.ಬೆಮಲ್‌ನಗರದ ಆಫೀಸರ್ಸ್‌ ಕ್ವಾರ್ಟಸ್, ಬೆಮಲ್ ನರ್ಸರಿ, ಒಂದನೇ ಟೈಪ್ ವಸತಿ ಗೃಹ, ಮುರುಗನ್ ಬೆಟ್ಟದ ಬಳಿ ಹಾಗೂ ಎಚ್ ಅಂಡ್ ಪಿ ಹಿಂಭಾಗದಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಭಾರಿ ನಷ್ಟ ಉಂಟಾಗಿದೆ. ಬೇವು, ಬುಗುರಿ ಮರಗಳು ಬೆಂಕಿಗೆ ಆಹುತಿಯಾಗಿವೆ.ಎಚ್ ಅಂಡ್ ಪಿ ಹಿಂಭಾಗದಲ್ಲಿ ಕೊಂಚ ಹಸಿರಿದ್ದ ಪ್ರದೇಶಗಳು ಕೂಡ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿ, ಒಣಗಿವೆ. ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶದಿಂದ ಮೇವು ಹಾಗೂ ನೀರಿಗಾಗಿ ಬರುತ್ತಿದ್ದ ಜಾನುವಾರು ಮತ್ತು ಜಿಂಕೆಗಳಿಗೆ ಮೇವಿನ ಕೊರತೆ ಉಂಟಾಗಿದೆ.ಬೆಮಲ್ ಆಫೀಸರ್ಸ್‌ ಕ್ವಾರ್ಟಸ್‌ನಲ್ಲಿ ನೆಡಲಾಗಿದ್ದ ತೇಗದ ಸಸಿಗಳು ಬೆಂಕಿಗೆ ಸಿಲುಕಿ ಕರಕಲಾಗಿದೆ. ನರ್ಸರಿ ಹಿಂಭಾಗದ ಬೆಟ್ಟದಲ್ಲಿ ವ್ಯಾಪಕವಾಗಿ ಹರಡಿದ್ದ ಕಾಡ್ಗಿಚ್ಚು ಕ್ರಮೇಣ ನರ್ಸರಿಗೂ ಆವರಿಸಿದ್ದರೆ ದೊಡ್ಡ ಪ್ರಮಾಣದ ವಿವಿಧ ಜಾತಿಯ ಗಿಡಗಳು, ಮರಗಳು, ಅಲಂಕಾರಿಕ ಸಸ್ಯಗಳು ಬೆಂಕಿಗೆ ಅಹುತಿಯಾಗುತ್ತಿದ್ದವು.ಈ ಹಿನ್ನಲೆಯಲ್ಲಿ ಶನಿವಾರ ಅಗ್ನಿಶಾಮಕ ದಳದ ಸಿಬ್ಬಂದಿ ಸಮ್ಮುಖದಲ್ಲಿಯೇ ತರಗಲೆಗಳಿಗೆ ಬೆಂಕಿ ಇಟ್ಟು ಮುಂದೆ ಅವು ವ್ಯಾಪಕವಾಗಿ ಹರಡಿ ನಷ್ಟ ಉಂಟು ಮಾಡದಂತೆ ಎಚ್ಚರಿಕೆ ವಹಿಸಲಾಗಿತ್ತು.ಬೆಮಲ್ ಸುತ್ತಮುತ್ತಲಿನ ಪ್ರದೇಶ ಚಳಿಗಾಲ ಮತ್ತು ಮಳೆಗಾಲಗಳಲ್ಲಿ ವ್ಯಾಪಕವಾಗಿ ಅಚ್ಚಹಸಿರಿನಿಂದ ಕೂಡಿರು ತ್ತದೆ. ಬೇಸಿಗೆ ಸಮೀಪಿಸುತ್ತಿ ್ದದಂತೆಯೇ  ಹುಲ್ಲುಗಳು ಒಣಗಲು ಶುರುವಾಗು ತ್ತದೆ.

 

ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಒಣ ಹುಲ್ಲು ಧಗಧಗನೆ ಉರಿಯಲು ಶುರುವಾಗುತ್ತದೆ. ಬೆಂಕಿಯನ್ನು ಕಂಡ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಧಾವಿಸುವಷ್ಟರಲ್ಲಿ ಸಾಕಷ್ಟು ನಷ್ಟ ಉಂಟಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.