ಬುಧವಾರ, ಜೂಲೈ 8, 2020
29 °C

ಕೆನರಾ ಬ್ಯಾಂಕ್‌ಗೆಎಫ್‌ಕೆಸಿಸಿಐ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆನರಾ ಬ್ಯಾಂಕ್‌ಗೆಎಫ್‌ಕೆಸಿಸಿಐ ಪ್ರಶಸ್ತಿ

ಬೆಂಗಳೂರು: ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘವು (ಎಫ್‌ಕೆಸಿಸಿಐ) ಬುಧವಾರ ಇಲ್ಲಿ ಏರ್ಪಡಿಸಿದ್ದ ವಾರ್ಷಿಕ ರಫ್ತು ಶ್ರೇಷ್ಠತೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ರಾಷ್ಟ್ರೀಕೃತ ಕೆನರಾ ಬ್ಯಾಂಕ್, `ಅತ್ಯುತ್ತಮ ಹಣಕಾಸು ಸಂಸ್ಥೆ~ ವಿಭಾಗದಲ್ಲಿ ಸುವರ್ಣ ಪ್ರಶಸ್ತಿ ಪಡೆದುಕೊಂಡಿದೆ.ರಾಜ್ಯದಲ್ಲಿ ರಫ್ತು ವಹಿವಾಟು ಗಮನಾರ್ಹವಾಗಿ ಬೆಳವಣಿಗೆ ಕಾಣಲು ಬ್ಯಾಂಕ್ ನೀಡಿದ ಕೊಡುಗೆಗಾಗಿ ಈ ಪ್ರಶಸ್ತಿ ನೀಡಲಾಗಿದೆ.ದೇಶದಲ್ಲಿ ವಿದೇಶ ವಿನಿಮಯ ವಹಿವಾಟು ಆರಂಭಿಸಿದ ಮೊದಲ ಬ್ಯಾಂಕ್‌ಗಳಲ್ಲಿ  ಕೆನರಾ ಬ್ಯಾಂಕ್ ಕೂಡ ಒಂದಾಗಿದೆ. ಮುಂಬೈನಲ್ಲಿ 1953ರಲ್ಲಿ  ತನ್ನ ಮೊದಲ ವಿದೇಶ ವಿಭಾಗದ ಆರಂಭಿಸಿತ್ತು.

 

ಬ್ಯಾಂಕ್ ಅಂದಿನಿಂದ ದೇಶದ ವಿದೇಶಿ ವಿನಿಮಯ ವಹಿವಾಟಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. 2010-11ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್, ರೂ 1,24,094 ಕೋಟಿಗಳಷ್ಟು ವಿದೇಶಿ ವಿನಿಮಯ ವಹಿವಾಟು ನಡೆಸಿದ್ದು,  ರಫ್ತು ವಹಿವಾಟು ರೂ  45,657 ಕೋಟಿಗಳಷ್ಟಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.