‘ಸೋಮವಾರ ಸಂಜೆ ಐದೂವರೆ ಹೊತ್ತು. ನಾನು ಜಿಮ್ನಲ್ಲಿದ್ದೆ. ಒಂದು ಫೋನ್ ಕಾಲ್ ಬಂತು. ‘ಸಿದ್ದು ಅವ್ರಾ’ ಅಂತ ಕೇಳಿದ್ರು. ಅಲ್ಲ ನಾನು ವಿಜಯ್ಸೂರ್ಯ ಅಂತ ಹೇಳ್ದೆ. ‘ಅವ್ರೆಲ್ಲಿ ಸಿಗ್ತಾರೆ’ ಅಂತ ಕೇಳಿದ್ರು. ಈ ಟೀವಿಯಲ್ಲಿ ಪ್ರಸಾರವಾಗೋ ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ’ ಅಂತಂದೆ. ಅವರೂ ನಕ್ಕರು.

ಈಗ ನಿಮಗೂ ಗೊತ್ತಾಯ್ತಲ್ಲ? ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಚಿನ್ನುನ ಧ್ಯಾನದಲ್ಲೇ ಇರುವ ಸನ್ನಿಧಿ ಗಂಡ ಸಿದ್ಧಾರ್ಥನ ಪಾತ್ರಧಾರಿ ನಾನೇ. ನಿಜ ಹೆಸರು ವಿಜಯ್ ಸೂರ್ಯ. ದಕ್ಷಿಣ ಬೆಂಗಳೂರಿನ ಜೆ.ಪಿ.ನಗರ ನಿವಾಸಿ ನಾನು.

ಕೆನ್ನೆ ಗುಳಿ ರಹಸ್ಯ
ಹಾಗೆ ಫೋನ್ ಮಾಡಿದ ಮೇಡಂ ಕೇಳಿದ್ರು ‘ನಿಮ್ಮ ಕೆನ್ನೆಗುಳಿಯಲ್ಲಿ ಎಷ್ಟು ಜನ ಬಿದ್ದಿದ್ದಾರೆ?’ ಅಂತ.
ಸುಳ್ಳು ಹೇಳೋದು ಯಾಕೆ? ತುಂಬಾ ಜನ ಪ್ರಪೋಸ್ ಮಾಡ್ತಾ ಇರ್ತಾರೆ, ನಿಮ್ಮ ಕೆನ್ನೆ ಗುಳಿಯಲ್ಲಿ ಒಮ್ಮೆ ಬೀಳಬೇಕು ಎಲ್ಲಿ ಸಿಗ್ತೀರಾ ಅಂತ ಕೇಳ್ತಾರೆ. ಹುಡುಗೀರು ಜೋರಾಗಿದ್ದಾರೆ ಕಣ್ರೀ. ಆದ್ರೆ ನಾನು ಮಾತ್ರ ಯಾರನ್ನೂ ಒಪ್ಪಿಕೊಂಡಿಲ್ಲ. ಸದ್ಯಕ್ಕೆ ನನ್ನ ಗುರಿ ನಾನೊಬ್ಬ ಪ್ರಬುದ್ಧ, ಪರಿಪೂರ್ಣ ಕಲಾವಿದನಾಗಬೇಕೆಂಬುದು. ಅದಕ್ಕಾಗಿ ನನ್ನ ಸಮಯ ಮೀಸಲು. ಪ್ರೀತಿ ಪ್ರೇಮಕ್ಕೆ ನೋ ಟೈಂ’ ಅಂತಂದೆ.

ಪಾತ್ರಕ್ಕೆ ತಕ್ಕಂತೆ ದೇಹಾಕಾರ
‘ಅಲ್ಲಪ್ಪಾ, ಮೊದಲೇ ನೀವು ಕಡ್ಡಿ ಪೈಲ್ವಾನ್. ಈ ಜಿಮ್ಮು ಗಿಮ್ಮು ಬೇಕಾ’ ಅಂತ ಕೇಳೋದಾ ಆ ಮೇಡಂ!
ಜಿಮ್ಗೆ ಹೋಗ್ತೀನಿ ಅಂದ್ರೆ ಎಲ್ರೂ ಹೀಗೇ ನಗ್ತಾರೆ. ನನ್ನ ಪ್ರಕಾರ ಜಿಮ್ನಲ್ಲಿ ವರ್ಕೌಟ್ ಮಾಡೋದು ದೈಹಿಕ ಆರೋಗ್ಯಕ್ಕಷ್ಟೇ

ಅನ್ನೋದು ತಪ್ಪು ಕಲ್ಪನೆ. ದೈಹಿಕ ಕ್ಷಮತೆಯ ಜತೆಗೆ ಮನೋಬಲವನ್ನು ಗಿಟ್ಟಿಸಿಕೊಳ್ಳಲು ಪ್ರತಿನಿತ್ಯದ ವ್ಯಾಯಾಮ ಅತ್ಯಗತ್ಯ. ನನ್ನಂತೋರೂ ಜಿಮ್ಗೆ ಹೋಗ್ತಾರೆ, ಹೋಗ್ಬೇಕು. ಫಿಟ್ನೆಸ್ ಅಂದ್ರೆ ಸರ್ವಾಂಗಗಳ ಸೌಂದರ್ಯ, ಸೌಷ್ಠವ ಮತ್ತು ಆರೋಗ್ಯ. ಈಗ ನೋಡಿ ‘ಅಗ್ನಿಸಾಕ್ಷಿ’ಯಲ್ಲಿ ನನ್ನದು ಸಣ್ಣ ವಯಸ್ಸಿನ ಕಂಪೆನಿ ಮಾಲೀಕನ ಪಾತ್ರ. ಎಕ್ಸಿಕ್ಯೂಟಿವ್ ಲುಕ್ ಬೇಕು. ಈಗ ನಾನಿರುವ ಆಕಾರ ಅದಕ್ಕೆ ಸರಿಹೊಂದುತ್ತದೆ. ಮುಂದೆ ಪೈಲ್ವಾನ್ ಪಾತ್ರ ಸಿಕ್ಕಿದರೆ ದಪ್ಪ ಆಗ್ತೀನಿ ಬಿಡಿ...

ಅಭಿನಯವೆಂದರೆ...
ನಾನು ನಟಿಸುತ್ತಿರುವ ‘ಅಗ್ನಿಸಾಕ್ಷಿ’ ಧಾರಾವಾಹಿಗೂ ಮುಂಚೆ ನನ್ನನ್ನು ನೀವು ‘ಲಕ್ಷ್ಮೀ ಬಾರಮ್ಮ’ದ ಸಿದ್ದು ಪಾತ್ರದಲ್ಲಿ ನೋಡಿರಬಹುದು. ಚಿನಕುರಳಿ ವ್ಯಕ್ತಿತ್ವ. ಅದು ಆ ಧಾರಾವಾಹಿಗೆ ಸರಿಯಾಗಿತ್ತು. ನಿಜ ಹೇಳಬೇಕೆಂದರೆ ‘ಅಗ್ನಿಸಾಕ್ಷಿ’ಗೆ ಆಫರ್ ಬಂದಾಗ ಅಷ್ಟೇನೂ ಆಸಕ್ತಿ ಇರಲಿಲ್ಲ. ಬರಬರುತ್ತಾ ಸಿದ್ದು ಪಾತ್ರ ಇಷ್ಟವಾಗುತ್ತಾ ಹೋಯ್ತು. ಮತ್ತೊಂದು ವಿಷಯ ಗೊತ್ತಾ? ನಾನು ಯಾವುದೇ ಕೆಲಸವನ್ನಾದರೂ ಶ್ರದ್ಧೆ ಮತ್ತು ಪೂರ್ಣ ಪ್ರಮಾಣದ ಬದ್ಧತೆಯಿಂದ ಮಾಡುತ್ತೇನೆ. ನಟನೆಯ ಸಂದರ್ಭದಲ್ಲಿಯಂತೂ ಪಾತ್ರವನ್ನು ಅನುಭವಿಸಿ ಒಪ್ಪಿಸುವುದು ನನ್ನ ಅಭ್ಯಾಸ. ನನ್ನ ಭವಿಷ್ಯ, ಕನಸು ಎರಡೂ ನಟನೆಯೇ.

ಮಾಡೆಲಿಂಗ್ ನಂಟು
ನನ್ನನ್ನು ನೋಡಿದವರೆಲ್ಲ ಮೊದಲು ಕೇಳೋ ಪ್ರಶ್ನೆ, ನೀವು ಮಾಡೆಲ್ ಆಗಿದ್ದಿರಾ ಅಂತ. ಹೌದು. ನಾನು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದೇ ಮಾಡೆಲಿಂಗ್ ಮೂಲಕ. ಕ್ರೈಸ್ಟ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿ ಮುಂಬೈನಲ್ಲಿ ಅಭಿನಯಕ್ಕೆ ಸಂಬಂಧಿಸಿದ ಡಿಪ್ಲೊಮಾ ಮಾಡಿದೆ. ಅಲ್ಲಿಂದ ಬಂದ ಮೇಲೆ (೨೦೧1) ಫ್ಯಾಷನ್ ಗುರು ಪ್ರಸಾದ್ ಬಿದಪ್ಪ ಅವರು ಏರ್ಪಡಿಸಿದ್ದ ‘ಬೆಂಗಳೂರು ಸೂಪರ್ ಮಾಡೆಲ್ ಹಂಟ್’ನಲ್ಲಿ ಗೆದ್ದೆ. ಆಮೇಲೆ ಅವರ ಗರಡಿಯಲ್ಲಿ ಒಂದಷ್ಟು ರ್ಯಾಂಪ್ ಷೋನಲ್ಲಿಯೂ ಪಾಲ್ಗೊಂಡೆ.

ಅದಾದ ಬಳಿಕ 2012ರಲ್ಲಿ ಕವಿತಾ ಲಂಕೇಶ್ ನಿರ್ದೇಶನದ ‘ಕೈದಿ ಲೋಕ’ ಚಿತ್ರದಲ್ಲಿ ಎರಡನೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡೆ. ರವಿಚಂದ್ರನ್ ಸರ್ ಮಗನ ಪಾತ್ರ. ಹೊಡಿ ಬಡಿ ಮಸಾಲಾ ಚಿತ್ರಗಳ ಭರಾಟೆಯಲ್ಲಿ ಈ ಚಿತ್ರ ಅಷ್ಟಾಗಿ ಸುದ್ದಿ ಮಾಡಲಿಲ್ಲ. ನಂತರ ಸಿಕ್ಕಿದ್ದು ‘ಲಕ್ಷ್ಮೀ ಬಾರಮ್ಮ’ದ ಸಿದ್ದು ಪಾತ್ರ. ಅಲ್ಲಿಂದ ಅಗ್ನಿಸಾಕ್ಷಿಗೆ ಬಡ್ತಿ ಪಡೆದೆ.

ನನಗೆ ಸಿನಿಮಾದಲ್ಲಿ ನಟಿಸುವ ಆಸೆಯಿದ್ದರೂ ಗಮನ ಸೆಳೆಯುವಂತಹ ಪಾತ್ರಕ್ಕಾಗಿ ಕಾಯುತ್ತಿದ್ದೇನೆ. ಮಾಡೆಲಿಂಗ್ ಸಹ ಅಷ್ಟೇ. ದೊಡ್ಡದೊಂದು ಬ್ರೇಕ್ ಕೊಡುವಂತಹ ಉತ್ಪನ್ನ/ಕಂಪೆನಿ/ಬ್ರಾಂಡ್ನಿಂದ ಆಫರ್ ಬಂದರೆ ಹೋಗುತ್ತೇನೆ. ಹತ್ತಾರು ಕಡೆ ಹೆಸರಿಲ್ಲದ ಕೆಲಸ ಮಾಡುವುದಕ್ಕಿಂತ ಬೆರಳೆಣಿಕೆಯ ಗುಣಮಟ್ಟದ ಕೆಲಸ ಮಾಡುವುದೇ ನನಗಿಷ್ಟ. ಕ್ವಾಂಟಿಟಿಗಿಂತ ಕ್ವಾಲಿಟಿಗೆ ನನ್ನ ಆದ್ಯತೆ.

ನನ್ನ ಉಡುಗೆ ನನ್ನ ಶಕ್ತಿ
ನಾನು ಧಾರಾವಾಹಿಯಲ್ಲಿ ಧರಿಸುವ ಉಡುಪುಗಳೆಲ್ಲ ನನ್ನವೇ. ನಿಜ ಹೇಳ್ಬೇಕಂದ್ರೆ ನನ್ನಲ್ಲಿ ಎಷ್ಟು ಪ್ಯಾಂಟ್ ಶರ್ಟ್ ಇದೇಂತ ಗೊತ್ತಿಲ್ಲ. ಲೆಕ್ಕ ಹಾಕಲು ಪುರುಸೊತ್ತು ಸಿಕ್ಕಿಲ್ಲ ಅಂದ್ಕೊಳ್ಳಿ. ಆದರೆ ನಾನು ಧರಿಸುವ ಉಡುಪು ಎಲ್ಲರ ಗಮನ ಸೆಳೆಯುವಂತಿರಬೇಕು, ಮೆಚ್ಚುವಂತಿರಬೇಕು ಅಂತ ನಾನು ಬಯಸುತ್ತೇನೆ. ನನ್ನಮ್ಮ ಹೇಳೋದೂ ಇದನ್ನೇ.

ಈ ವಿಜಯ್ಸೂರ್ಯ ತನ್ನ ಪಾತ್ರಗಳ ಮೂಲಕ, ಅಭಿನಯದ ಮೂಲಕ ಮಾತ್ರವಲ್ಲ ಡ್ರೆಸ್ ಮೂಲಕವೂ ನೆನಪಿನಲ್ಲಿ ಉಳಿಯಬೇಕು!
ಮತ್ತೊಂದು ಗುಟ್ಟು ಹೇಳ್ಲಾ? ನಮ್ಮ ಉಡುಗೆಯಲ್ಲಿ ಪಾಸಿಟಿವ್ ಮತ್ತು ನೆಗೆಟಿವ್ ಎನರ್ಜಿ ಇರುತ್ತದೆ. ನನ್ನದೇ ಉಡುಪು ಧರಿಸಿ ನಟಿಸಿದಾಗ ಇರುವ ಕಂಫರ್ಟ್ ಫೀಲಿಂಗ್ ಬೇರೆ ಯಾರದೋ ಉಡುಪಿನಲ್ಲಿ ನನಗೆ ಸಿಗದೇ ಇರಬಹುದು.

ಅದು ಪಾತ್ರವನ್ನು ಆವಾಹಿಸಿಕೊಳ್ಳುವ ನನ್ನ ಸಾಮರ್ಥ್ಯವನ್ನೇ ಕೆಡಿಸಬಹುದು. ಅದಕ್ಕೆ ನನ್ನ ಉಡುಪುಗಳನ್ನೇ ಧರಿಸುವುದು ನನಗಿಷ್ಟ.

ಡಯಟ್ ಇಲ್ಲ
ಸಣ್ಣವನಿರುವಾಗ ಅಮ್ಮ ಸಖತ್ತಾಗಿ ತಿನ್ನಿಸಿ ತಿನ್ನಿಸಿ ಗುಂಡು ಗುಂಡಗೆ ಮಾಡಿಟ್ಟಿದ್ರು. ಫಿಟ್ನೆಸ್ ವ್ಯಾಮೋಹ ಶುರುವಾದ ಮೇಲೆ ಒಳ್ಳೆಯ ಫಿಗರ್ ಕಾಯ್ದುಕೊಳ್ಳಲು ಬೇಕಾಗುವಷ್ಟು ಸಾಕಾಗುವಷ್ಟು ಎಲ್ಲಾ ಬಗೆಯ ಆಹಾರವನ್ನೂ ಸೇವಿಸುತ್ತೇನೆ. ಡಯಟ್ ಮಾಡೋದಿಲ್ಲ. ತಿಂದ ಮೇಲೆ ಬೊಜ್ಜು ಬರದಂತೆ ವರ್ಕೌಟ್ ಮಾಡುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.