ಸೋಮವಾರ, ಮೇ 10, 2021
25 °C

ಕೆಲವು ಸಂಕ್ಷಿಪ್ತ ಸಿನಿಮಾ ಸುದ್ದಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದೇಶದಲ್ಲಿ `ಮಾಗಡಿ~

ಕೆ.ಸುರೇಶ್ ಗೋಸ್ವಾಮಿ ನಿರ್ದೇಶಿಸುತ್ತಿರುವ ಬಾಮಾ ಹರೀಶ್ ನಿರ್ಮಾಣದ `ಮಾಗಡಿ~ ಚಿತ್ರದ ಹಾಡಿನ ಚಿತ್ರೀಕರಣಕ್ಕಾಗಿ ಚಿತ್ರತಂಡ ಬ್ಯಾಂಕಾಕ್ ಮತ್ತು ಪಟಾಯಂಗಳಿಗೆ ತೆರಳಿದೆ. ದೀಪಕ್, ರಕ್ಷಿತಾ ಅಭಿನಯಿಸಿರುವ ಈ ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ರಮೇಶ್ ಛಾಯಾಗ್ರಹಣ ಚಿತ್ರಕ್ಕಿದೆ. ರವಿ, ರಂಗತೇಜ, ಮಹೇಶ್, ಗೋಪಿ, ರಮೇಶ್ ಪಂಡಿತ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

`ಸೂಪರ್ ಶಾಸ್ತ್ರಿ~ ಚಿತ್ರೀಕರಣ

ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸಿರುವ `ಸೂಪರ್ ಶಾಸ್ತ್ರಿ~ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ. ಜಿ.ರಾಮಚಂದ್ರನ್ ನಿರ್ಮಾಣದ ಈ ಚಿತ್ರಕ್ಕೆ ರವಿರಾಜ್ ನಿರ್ದೇಶನವಿದೆ. ಕಾಶಿ ವಿಶ್ವನಾಥ್ ಛಾಯಾಗ್ರಹಣ, ದೇವ ಸಂಗೀತ, ಕೆ.ಕಲ್ಯಾಣ್ ಸಾಹಿತ್ಯ ಚಿತ್ರಕ್ಕಿದೆ. ಮಾಸ್ ಮಾದ ಸಾಹಸ ನಿರ್ದೇಶಿಸಿದ್ದಾರೆ. ನಾಯಕಿಯಾಗಿ ಹರಿಪ್ರಿಯ ಅಭಿನಯಿಸಿದ್ದಾರೆ. ರಂಗಾಯಣ ರಘು, ಬುಲೆಟ್ ಪ್ರಕಾಶ್, ಉಮಾಶ್ರೀ, ರೇಖಾಕುಮಾರ್, ಮಿಮಿಕ್ರಿ ರಾಜಗೋಪಾಲ್ ಮುಂತಾದವರು ನಟಿಸಿದ್ದಾರೆ.

`ಹೊಸ ಪ್ರೇಮ ಪುರಾಣ~ ಡಬ್ಬಿಂಗ್

 

ನಿತಿನ್ ಗೌಡ, ರಾಧಿಕಾ ಗಾಂಧಿ, ಶ್ರದ್ಧಾದಾಸ್, ಪೂಜಾಗಾಂಧಿ ಅಭಿನಯಿಸಿರುವ `ಹೊಸ ಪ್ರೇಮ ಪುರಾಣ~ ಚಿತ್ರದ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದೆ. ಗೌರಿ ವೆಂಕಟೇಶ್ ಛಾಯಾಗ್ರಹಣ ಮಾಡಿದ್ದಾರೆ. ರಾಜೇಶ್ ರಾಮನಾಥ್ ಸಂಗೀತವಿದೆ.

ಬಾದಾಮಿಯಲ್ಲಿ `ಬಾಡಿಗಾರ್ಡ್~

ಜಗ್ಗೇಶ್, ಡೈಸಿ ಶಾ, ಸ್ಫೂರ್ತಿ ಅಭಿನಯದ `ಬಾಡಿಗಾರ್ಡ್~ ಚಿತ್ರದ ಹಾಡುಗಳ ಚಿತ್ರೀಕರಣ ಬಾದಾಮಿ, ಐಹೊಳೆ, ಬಿಜಾಪುರ, ಹೈದರಾಬಾದ್‌ಗಳಲ್ಲಿ ಹದಿಮೂರು ದಿನಗಳ ಕಾಲ ನಡೆಯಿತು. ಚಿತ್ರೀಕರಣ ಪೂರ್ಣಗೊಂಡಿದ್ದು ಮಾತಿನ ಜೋಡಣೆ ನಡೆಯುತ್ತಿದೆ. ಟಿ.ಎ.ಆನಂದ್ ಚಿತ್ರದ ನಿರ್ದೇಶಕರು. ಅಶೋಕ್ ವಿ.ರಾಮ್ ಛಾಯಾಗ್ರಹಣ ಚಿತ್ರಕ್ಕಿದೆ. ಕವಿರಾಜ್, ವಿ.ಮನೋಹರ್, ರಾಮ್‌ನಾರಾಯಣ್ ಸಾಹಿತ್ಯ ರಚಿಸಿದ್ದಾರೆ.

`ಚಿತ್ರಾನ್ನ~ ಚಿತ್ರಕ್ಕೆ ಡಿಟಿಎಸ್

ಸಾಯಿಜಾಧವ್ ನಿರ್ದೇಶನದ `ಚಿತ್ರಾನ್ನ~ ಚಿತ್ರಕ್ಕೆ ಡಿಟಿಎಸ್ ಕಾರ್ಯ ಪೂರ್ಣಗೊಂಡಿದೆ. ಶಕ್ತಿ, ವಿಕಾಸ್, ವೆಂಕಿ, ಜಾಹ್ನವಿ, ದೀಪಿಕಾ ಅವಿನಾಶ್ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಮಹಾಂತೇಶ್ ಛಾಯಾಗ್ರಹಣವಿದೆ. ಹಿತನ್ ಸಂಗೀತ ನೀಡಿದ್ದಾರೆ. ಮಾಲೂರು ಶ್ರೀನಿವಾಸ್ ನೃತ್ಯಸಂಯೋಜನೆ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.