ಭಾನುವಾರ, ಜೂನ್ 13, 2021
26 °C

ಕೇಂದ್ರ ಬಜೆಟ್ ಜೊಳ್ಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಂಗ ಪಕ್ಷಗಳನ್ನು ಓಲೈಸುವ ಪ್ರಯತ್ನದಿಂದಾಗಿ ಆರ್ಥಿಕ ಸುಧಾರಣೆಯಲ್ಲಿ ಮಹತ್ತರ ಬದಲಾವಣೆ ನಿರೀಕ್ಷಿಸಿದ್ದ ಕೇಂದ್ರದ 2012ರ ಬಜೆಟ್ ಹುಸಿಯಾಗಿದೆ ಎಂದು ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಎಸ್. ಗಣೇಶ್ ಪ್ರತಿಕ್ರಿಯಿಸಿದ್ದಾರೆ.ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಬೆಂಗಳೂರು ಘಟಕವು ನಗರದ ಸೆಂಟ್ರಲ್ ಕಾಲೇಜು ಕ್ಯಾಂಪಸ್‌ನ ಜ್ಞಾನಜ್ಯೋತಿ ಕನ್ವೆನ್ಷನ್ ಹಾಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೇಂದ್ರ ಬಜೆಟ್ ಕುರಿತ ವಿಶ್ಲೇಷಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಿದ ಅವರು, `ಆರ್ಥಿಕ ಅಭಿವೃದ್ಧಿಗೆ ಇರುವಂತಹ ಸುವರ್ಣಾವಕಾಶವನ್ನು ದೇಶ ಕಳೆದುಕೊಂಡಂತಾಗಿದೆ~ ಎಂದರು.`ಆರ್ಥಿಕ ಸುಧಾರಣೆಗೆ ಇದೊಂದು ಉತ್ತಮ ಅವಕಾಶವಾಗಿತ್ತು. ಆದರೆ, ಕೇಂದ್ರವು ಸರ್ಕಾರವು ತನ್ನ ಉಳಿವಿಗಾಗಿ ಮಿತ್ರ ಪಕ್ಷಗಳನ್ನು ತೃಪ್ತಿ ಪಡಿಸುವ ರೀತಿಯಲ್ಲಿ ಬಜೆಟ್ ಮಂಡಿಸಿರುವುದು ದುರದೃಷ್ಟಕರ~ ಎಂದರು.ಕೇಂದ್ರ ಸರ್ಕಾರದ ಮಿತ್ರ ಪಕ್ಷಗಳು ತಮ್ಮ ತಮ್ಮ ರಾಜ್ಯಗಳ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಶೇಷ ಪ್ಯಾಕೇಜ್‌ಗೆ ಒತ್ತಾಯಿಸಿದ್ದರಿಂದ ಸರ್ಕಾರಕ್ಕೆ ರೂ 1.25 ಲಕ್ಷ ಕೋಟಿ ಹೊರೆಯಾಗಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.