ಸೋಮವಾರ, ಮಾರ್ಚ್ 27, 2023
24 °C
ನೀರು ನೀಡಿ ಇಲ್ಲವೆ ರಾಜೀನಾಮೆ ನೀಡಿ ; ಮಹಾಲಿಂಗಪುರದಲ್ಲಿ ಪ್ರತಿಭಟನೆ, ಪಾದಯಾತ್ರೆ

ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

ಬನಹಟ್ಟಿ: ದೇಶದ ಪ್ರಧಾನಿ ಮತ್ತು ರಾಜ್ಯದ ಮುಖ್ಯಮಂತ್ರಿಗಳನ್ನು ಎಚ್ಚರಿಸಲು ಸಾಧ್ಯವಾಗದ ಸಂಸದರು ಹಾಗೂ ಶಾಸಕರು ಗೋವಾದಿಂದ ರಾಜ್ಯಕ್ಕೆ ನೀರು ಬೀಡಿಸಲು ಒಮ್ಮತದ ನಿಲುವು ತೋರಬೇಕು ಇಲ್ಲವಾದಲ್ಲಿ ಸಾಮೂಹಿಕ ರಾಜೀನಾಮೆ ನೀಡಲೇಬೇಕು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತ ಕಾಂಬಳೆ ಆಗ್ರಹಿಸಿದರು.ಭಾನುವಾರ ರಬಕವಿ-ಬನಹಟ್ಟಿ ನಗರ ವ್ಯಾಪ್ತಿಯಲ್ಲಿ ಮಹಾದಾಯಿ ಯೋಜನೆಗೆ ಸಂಬಂಧ ರೈತ ಸಂಘದಿಂದ ನಡೆದ ಬಂದ್ ಕರೆ ಸಭೆಯಲ್ಲಿ ಮಾತನಾಡಿದರು.   ಪೊಲೀಸರನ್ನು ಬಳಕೆ ಮಾಡಿಕೊಂಡು ರಾಜಕೀಯ ಮಾಡುತ್ತಿರುವ ರಾಜಕಾರಣಿಗಳಿಗೆ ತಕ್ಕ ಪಾಠವಾಗಬೇಕು ಎಂದು ಹಸಿರು ಸೇನೆ ರಾಜ್ಯ ಸಂಚಾಲಕ ಗಂಗಾಧರ ಮೇಟಿ ಆಕ್ರೋಶ ವ್ಯಕ್ತ ಪಡಿಸಿದರು. ಸ್ಥಳೀಯ ನೂಲಿನ ಗಿರಣಿಯಿಂದ ಆರಂಭವಾದ ಪ್ರತಿಭಟನೆ ಬನಹಟ್ಟಿ, ರಾಮಪುರ, ರಬಕವಿ ಪ್ರಮುಖ ಬೀದಿಗಳಲ್ಲಿ ನಡೆಯಿತು.ಯಮನೂರ ಚಲೊ: ಇದೇ 1ರಂದು ತೇರದಾಳ ಕ್ಷೇತ್ರದ ಭಾಗದ ರೈತರು ಪೊಲೀಸರಿಂದ ಹಲ್ಲೆಗೊಳಗಾದ ಗ್ರಾಮವಾಗಿರುವ ಯಮನೂರಿಗೆ ತೆರಳಿ ಅಲ್ಲಿನ ರೈತ ಕುಟುಂಬಗಳನ್ನು ಭೆಟ್ಟಿಯಾಗಿ ಸಾಂತ್ವನ ಹೇಳಲು ತೆರಳುತ್ತಿದ್ದಾರೆ.ಯುಎಇ ಬಸವ ಸಮೀತಿ ಕೇಂದ್ರ  ಅಧ್ಯಕ್ಷ ಬನಹಟ್ಟಿಯ ಚಂದ್ರೇಶೇಖರ ಲಿಂಗದಳ್ಳಿ ದೂರವಾಣಿಯಲ್ಲಿ  ಮಾತನಾಡಿದರು. ಸಭೆಯಲ್ಲಿ ರೈತ ಸಂಘದ ತೇರದಾಳ ಕ್ಷೇತ್ರದ ಅಧ್ಯಕ್ಷ  ಶ್ರೀಕಾಂತ ಘೂಳನ್ನವರ, ನಗರ ಘಟಕದ ಅಧ್ಯಕ್ಷ ಹೊನ್ನಪ್ಪ ಬಿರಡಿ, ಜನಜಾಗೃತ ವೇದಿಕೆಯ ಕಾರ್ಯದರ್ಶಿ ನಂದು ಗಾಯಕವಾಡ, ಬಸವರಾಜ ತೆಗ್ಗಿ, ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಬಾಬು ಹಸರಡ್ಡಿ ಮಾತನಾಡಿದರು.  ಬಂದೇನವಾಜ ಪಕಾಲಿ, ಸದಾಶಿವ ನಾಯಕ, ಶಂಕರ ಹೆಗ್ಗಳಗಿ, ಅನ್ನಪ್ಪ ಕಮಲದಿನ್ನಿ, ಶಂಕರ ಪಾಟೀಲ, ರಾಯಪ್ಪ ಹೆಗ್ಗನವರ, ಶಂಕರ ಕಿತ್ತೂರ, ಚನಮಲ್ಲ ಅಂಬಿ, ವಿಶ್ವನಾಥ ಕಾಡದೇವರ, ಬಾಳು ಗಣೇಶನವರ ಇದ್ದರು.ಮಹಾಲಿಂಗಪುರದಲ್ಲಿ ಪ್ರತಿಭಟನೆ

ಮಹಾಲಿಂಗಪುರ:  ನಾನಾ ಸಂಘಟನೆಗಳ ಕಾರ್ಯಕರ್ತರು ಸಂಘಟಿತರಾಗಿ ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. 

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಜಿಲ್ಲಾ ಕಟ್ಟಡ ಕಾರ್ಮಿಕ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ನವ ನಿರ್ಮಾಣ ಸೇನೆ, ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ, ರಾಷ್ಟ್ರೀಯ ವಿನಕರ ಸೇವಾ ಸಂಘ, ಜೆಡಿಎಸ್ ನಗರ ಘಟಕ ಸೇರಿದಂತೆ ನಾನಾ ಸಂಘಟನೆಗಳ ನೂರಾರು ಕಾರ್ಯಕರ್ತರು ಪ್ರತಿಭಟನ ನಡೆಸಿದರು.  ಚೆನ್ನಮ್ಮ ವೃತ್ತದಿಂದ ಗಾಂಧಿ ವೃತ್ತದ ವರೆಗೆ ಪಾದಯಾತ್ರೆ ಮಾಡಿದರು.  ಹಸಿರು ಸೇನೆ ರಾಜ್ಯ ಸಂಚಾಲಕ ಗಂಗಾಧರ ಮೇಟಿ, ಸಿದ್ದು ಉಳ್ಳಾಗಡ್ಡಿ, ಬಂದೇನವಾಜ ಪಕಾಲಿ, ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಅರ್ಜುನ ಬಂಡಿವಡ್ಡರ, ಅಸ್ಲಂ ಕೌಜಲಗಿ, ಮೋಹಸಿನ್ ಅತ್ತಾರ, ಕೃಷ್ಣಪ್ಪ ನರಗಟ್ಟಿ, ಶಿವಲಿಂಗ ಟಿರಕಿ, ನಿಂಗಪ್ಪ ಬಾಳಿಕಾಯಿ, ಶಿವಾನಂದ ಸೋರಗಾವಿ, ರಮೇಶ ಭಾವಿಕಟ್ಟಿ, ನಿಂಗನಗೌಡ ಪಾಟೀಲ, ಅಲಿ ಅನ್ಸಾರಿ, ಚನ್ನಪ್ಪ ಬಾಡನವರ, ಶಾನೂರ ಬೀಳಗಿ, ಸಿದ್ದಪ್ಪ ಮುಂಡಾಸ, ಆನಂದ ಹುಣಶ್ಯಾಳ, ಗೊಡಚಪ್ಪ ಕಂದಗಲ್ಲ, ಕಿರಣ ವಗ್ಗರ, ಸುನೀಲ ಸುಭೇದಾರ ಸೇರಿದಂತೆ ಮತ್ತಿತರರು ಇದ್ದರು.ನಮ್ಮ ನೀರು ನಮಗೆ ಬೇಕು

ಕಮತಗಿ(ಅಮೀನಗಡ): ನಮ್ಮ ಪಾಲಿನ ನೀರನ್ನು ಕೇಳಲು ನಮಗೆ ಹಕ್ಕು ಇದೆ ಎಂದು ಹೊಳೆ ಹುಚ್ಚೇಶ್ವರಮಠದ ಹುಚ್ಚೇಶ್ವರ ಸ್ವಾಮೀಜಿ ತಿಳಿಸಿದರು.

ಕಮತಗಿ ಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಹಿರೇಮಠದ ಪೀಠಾಧ್ಯಕ್ಷ ಶಿವಕುಮಾರ ಸ್ವಾಮೀಜಿ ಮಾತನಾಡಿ ಕುಡಿಯುವ ನೀರನ್ನು ಕೇಳಿದರೆ ಪೊಲೀಸರು ಮುಗ್ಧ ಜನರ ಮೇಲೆ ದಬ್ಬಾಳಿಕೆ  ಖಂಡಿಸಿದರು.         ಮುಖಂಡರಾದ ಬಸಣ್ಣಕ್ಕತಾಯಿ ಬಸರಕೋಡ, ಶರತಕುಮಾರ ದೇಸಾಯಿ, ಶಾರುಕಖಾನ ಗಂಜಾಳ, ಹುಚ್ಚಪ್ಪ ಸುಣಗಾರ, ಹುಚ್ಚೇಶ ಸುಕುಮಾರ ವಸ್ತ್ರದ,  ಹರ್ಷವರ್ದನ ದೇಸಾಯಿ, ಉಸ್ಮಾನ ಕುಮಚಗಿ, ಹಣಮಂತಪ್ಪ ಇಂಜನೇರಿ, ಮಲ್ಲೇಶಿ ವಿಜಯಪೂರ, ಮಾರುತಿ ಚಿತ್ರಗಾರ, ರಾಜು ಕಲಾಲ ಪ್ರತಿಭಟನೆಯಲ್ಲಿದ್ದರು.  ಸುತ್ತಲಿನ ಗ್ರಾಮಗಳಾದ ರಾಮಥಾಳ, ಇಂಗಳಗಿ, ಕಡಿವಾಲ, ಚಿಕ್ಕಮಾಗಿ, ಮೂಗನೂರ, ಹೂವಿನಹಳ್ಳಿ. ಇಂಜನೇರಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.