ಮಂಗಳವಾರ, ಫೆಬ್ರವರಿ 18, 2020
27 °C

ಕೇಂಬ್ರಿಜ್ ವಿ.ವಿ ಜೊತೆ ಭಾರತ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಜೈವಿಕ ತಂತ್ರಜ್ಞಾನ ಕ್ಷೇತ್ರದ ಅಧ್ಯಯನದ ಆರಂಭದಲ್ಲಿ ಇರುವವರಿಗೆ ಫೆಲೊಶಿಪ್‌ ನೀಡುವ ಹೊಸ ಯೋಜನೆಯ ಒಪ್ಪಂದಕ್ಕೆ ಕೇಂಬ್ರಿಜ್‌ ವಿಶ್ವವಿದ್ಯಾಲಯ ಮತ್ತು ಭಾರತ ಸಹಿ ಹಾಕಿವೆ.

ಈ ಫೆಲೊಶಿಪ್‌ಗೆ ಕೇಂಬ್ರಿಡ್ಜ್ ವಿ.ವಿ ಮತ್ತು ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಜಂಟಿಯಾಗಿ ನೆರವು ನೀಡಲಿದೆ. ಈ ಸಂಬಂಧ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ವೈ.ಎಸ್. ಚೌಧರಿ ಅವರ ನೇತೃತ್ವದ ವಿಜ್ಞಾನಿಗಳ ನಿಯೋಗ ಇತ್ತೀಚೆಗೆ ವಿಶ್ವವಿದ್ಯಾಲಯದೊಂದಿಗೆ ಸಭೆ ನಡೆಸಿತ್ತು. ಈ ನೂತನ ಕಾರ್ಯಕ್ರಮವು ಭಾರತದ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಂಶೋಧನೆ, ಅನ್ವೇಷಣಾ ಯೋಜನೆಗಳಿಗೆ ನೆರವು ನೀಡಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)