ತಿರುವನಂತಪುರ (ಪಿಟಿಐ): ಚುನಾವಣೆಯನ್ನೂ ಕೇರಳದ ಪ್ರವಾಸೋದ್ಯಮ ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ರಾಜಕೀಯವಾಗಿ ಅತ್ಯಂತ ಸಕ್ರಿಯವಾಗಿರುವ ನಾಡಿನ ಮತ ಸಂಘರ್ಷವನ್ನು ಕಣ್ಣಾರೆ ನೋಡಲು ಬನ್ನಿ ಎಂದು ಇಲ್ಲಿನ ಪ್ರವಾಸ ನಿರ್ವಾಹಕರು ಬೇರೆ ಊರಿನ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದಾರೆ.

ವಿದೇಶಿ ಪ್ರವಾಸಿಗರಿಗೆ ಚುನಾವಣೆಯ ನಿಕಟ ಅನುಭವ ನೀಡುವುದಕ್ಕಾಗಿ ವಿಶೇಷ ಪ್ಯಾಕೇಜ್ಗಳನ್ನೂ ಪ್ರಕಟಿಸಲಾಗಿದೆ. ಇದರಲ್ಲಿ ಚುನಾವಣೆಯ ಜೊತೆಗೆ ವಿಶ್ವದಾದ್ಯಂತ ಪ್ರಸಿದ್ಧವಾಗಿರುವ ಕೇರಳದ ಪ್ರಾಕೃತಿಕ ಸೌಂದರ್ಯದ ಸ್ಥಳಗಳನ್ನೂ ಸೇರಿಸಲಾಗಿದೆ.

ಗ್ರಾಮಗಳು ಮತ್ತು ಪಟ್ಟಣಗಳಲ್ಲಿ ಬಣ್ಣ ಬಣ್ಣದ ಭಿತ್ತಿಪತ್ರಗಳು ಮತ್ತು ಬ್ಯಾನರ್ಗಳು, ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ತಳಮಟ್ಟದ ಕಾರ್ಯಕರ್ತರು, ಸಭೆಗಳು, ಮೆರವಣಿಗೆಗಳು, ಬೀದಿ ಬದಿ ಸಭೆಗಳು ವಿದೇಶಿ ಪ್ರವಾಸಿಗರಿಗೆ ವಿನೂತನ ಅನುಭವ ನೀಡಬಲ್ಲದು ಎಂದು ಪ್ರವಾಸ ಸಂಘಟಕರು ಪ್ರಚಾರ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.