ಭಾನುವಾರ, ಜನವರಿ 26, 2020
18 °C

ಕೇರಳ ರಾಜ್ಯಪಾಲ ಫಾರೂಖ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ/ತಿರುವನಂತಪುರ (ಐಎಎನ್‌ಎಸ್):  ಕೇರಳ ರಾಜ್ಯಪಾಲ ಎಂ.ಒ.ಎಚ್.ಫಾರೂಖ್ (75) ಗುರುವಾರ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ವೈದ್ಯಕೀಯ ಚಿಕಿತ್ಸೆ ಪಡೆಯುವ ಸಲುವಾಗಿ ಫಾರೂಖ್ ಈ ತಿಂಗಳ ಆರಂಭದಲ್ಲಿ ರಜೆ ಮೇಲೆ ತೆರಳಿದ್ದರು. ಕೇರಳದಲ್ಲಿ ಏಳು ದಿನಗಳ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಮೂರು ಸಲ ಪುದುಚೆರಿ ಮುಖ್ಯಮಂತ್ರಿಯಾಗಿದ್ದ ಫಾರೂಖ್, ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಸಂಪುಟದಲ್ಲಿ ನಾಗರಿಕ ವಿಮಾನಯಾನ ಮತ್ತು ಪ್ರವಾಸೋದ್ಯಮ ಸಚಿವರಾಗಿಯೂ ದುಡಿದಿದ್ದರು. ಕಳೆದ ವರ್ಷದ ಸೆ. 8ರಂದು ಕೇರಳದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದರು. ಪುದುಚೆರಿ ಲೋಕಸಭಾ ಕ್ಷೇತ್ರದಿಂದ 1991, 1996 ಮತ್ತು 1999ರಲ್ಲಿ ಆಯ್ಕೆಯಾಗಿದ್ದರು. ಅವರು ಸೌದಿ ಅರೇಬಿಯಾದಲ್ಲಿ ಭಾರತದ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದರು.

ಪ್ರತಿಕ್ರಿಯಿಸಿ (+)