ಬುಧವಾರ, ಮೇ 18, 2022
25 °C

ಕೈಗಾ ಸ್ಥಾವರ ಸುರಕ್ಷಿತ: ಆತಂಕ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ:  ಭೂಕಂಪ ಅಥವಾ ಯಾವುದೇ ರೀತಿಯ ನೈಸರ್ಗಿಕ ವಿಕೋಪ ಎದುರಿಸುವಷ್ಟು ಸುರಕ್ಷಿತವಾಗಿ ಕೈಗಾ ಅಣುವಿದ್ಯುತ್ ಸ್ಥಾವರಗಳನ್ನು ವಿನ್ಯಾಸ ಮಾಡಲಾಗಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೈಗಾ       ಅಣುವಿದ್ಯುತ್ ಸ್ಥಾವರದ ನಿರ್ದೇಶಕ ಜೆ.ಪಿ. ಗುಪ್ತಾ ಹೇಳಿದರು.ಸೋಮವಾರ  ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭೂಕಂಪ ಹಾಗೂ ಸುನಾಮಿಯಿಂದ ಜಪಾನ್‌ನ ಅಣುಸ್ಥಾವರಗಳಿಗೆ ಹಾನಿ ಆಗಿರುವುದು ದುರದೃಷ್ಟಕರ ಘಟನೆ ಎಂದರು.ಕೈಗಾ ಅಣು ಸ್ಥಾವರಗಳು ಭೂಕಂಪ ತೀವ್ರತಾ ವಲಯ 3ರಲ್ಲಿ ಬರುತ್ತವೆ. ಜಪಾನ್‌ನಲ್ಲಿ ನಡೆದಿರುವಷ್ಟು ಹೆಚ್ಚಿನ ತೀವ್ರತೆಯ ಭೂಕಂಪನ ಇಲ್ಲಿ ಸಂಭವಿಸುವ ಸಾಧ್ಯತೆ ಕಡಿಮೆ. ಇದೂ ಅಲ್ಲದೆ ಕೈಗಾ ಅಣು ಸ್ಥಾವರಗಳು ಅರಬ್ಬಿ ಸಮುದ್ರದಿಂದ 50 ಕಿಲೋ ಮೀಟರ್ ದೂರದಲ್ಲಿವೆ. ಒಂದು ವೇಳೆ ಭೂಕಂಪ ನಡೆದರೂ ಸ್ಥಾವರಗಳಿಂದ ವಿಕಿರಣ ಸೋರಿಕೆ ಆಗುವ ಅಪಾಯವಿಲ್ಲ. ಉನ್ನತ ಗುಣಮಟ್ಟದಲ್ಲಿ ಸ್ಥಾವರಗಳನ್ನು ವಿನ್ಯಾಸ ಮಾಡಲಾಗಿದೆ ಎಂದು ಗುಪ್ತಾ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.