ಬುಧವಾರ, ಮೇ 12, 2021
25 °C

ಕೈವಾರ; ಅಪಸ್ವರ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೈವಾರ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ನೀಡಿದ್ದ ಒಂದು ಕೋಟಿ ರೂ ಅನುದಾನವನ್ನು ಧರ್ಮಾಧಿಕಾರಿ ಎಂ. ಆರ್. ಜಯರಾಂ ನಿರಾಕರಿಸಿದ ಕ್ರಮವನ್ನು ಲೇಖಕ ಸಿ. ಎಸ್. ದ್ವಾರಕನಾಥ್ ಪ್ರಜಾವಾಣಿಗೆ ಬರೆದ ಪತ್ರದಲ್ಲಿ ಸ್ವಾಗತಿಸಿದ್ದಾರೆ.

ಆದರೆ ಕ್ಷೇತ್ರದ ಆಡಳಿತದ ಬಗ್ಗೆ ಅವರು ಸಲ್ಲದ ಟೀಕೆಗಳನ್ನು ಮಾಡಿದ್ದಾರೆ.ದ್ವಾರಕಾನಾಥ್ ಅವರ ಬಳಿ ಕೈವಾರ ಕ್ಷೇತ್ರದ ಪರಂಪರೆಯ ಬಗ್ಗೆ ದಾಖಲೆಗಳಿದ್ದರೆ ಅದನ್ನು ಪ್ರಕಟಿಸಲಿ. ಅದನ್ನು ಬಿಟ್ಟು   ಜಾತಿ ಮತ್ತು ಕುಟುಂಬ ರಾಜಕಾರಣದ ಆರೋಪಗಳನ್ನು ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಪ್ರಗತಿಗೆ ಅಡ್ಡಿ ಮಾಡುವುದು ಬೇಡ.ದಿ. ಎಂ. ಎಸ್. ರಾಮಯ್ಯ ಮತ್ತು ಅವರ ಮಗ ಎಂ. ಆರ್. ಜಯರಾಂ ಅವರು  ಸೇವಾ ಮನೋಭಾವದಿಂದ ದುಡಿದಿದ್ದಾರೆ. ಕ್ಷೇತ್ರದಲ್ಲಿ ದೈನಂದಿನ ಪೂಜಾ ಕೈಂಕರ್ಯ, ಉಚಿತ ಸಾಮೂಹಿಕ ವಿವಾಹ, ಉಚಿತ ಭೋಜನ, ಸಾಂಸ್ಕೃತಿಕ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಈ ಹಂತದಲ್ಲಿ ಕ್ಷೇತ್ರದ ಆಡಳಿತದ ಬಗ್ಗೆ ಅಪಸ್ವರ ಎತ್ತಿ ಒಳ್ಳೆಯ ಕೆಲಸಗಳಿಗೆ ಅಡ್ಡಿ ಮಾಡುವುದು ಬೇಡ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.