ಬೆಂಗಳೂರು: ನಗರದ ಬಾಣಸವಾಡಿಯ ಇಂಡೊ-ಏಷ್ಯಾ ಕಾಲೇಜ್ ಸಮೀಪದಲ್ಲಿ ಕೊಕೇನ್ ಮಾರಾಟ ಮಾಡುತ್ತಿದ್ದ ಮೂವರು ನೈಜೀರಿಯಾ ಪ್ರಜೆಗಳನ್ನು ನಗರ ಪೂರ್ವ ವಿಭಾಗದ ವಿಶೇಷ ಅಪರಾಧ ಪತ್ತೆದಳದ ಪೊಲೀಸರು ಮಂಗಳವಾರ (ನ.13) ಬಂಧಿಸಿದ್ದಾರೆ.

ಸ್ಟೀವನ್ ಒಕಾಯ್ (32), ಈಜೆಕೆಲ್ ಜಾಂಡನ್ (27) ಮತ್ತು ಜೆರೊಮಿಯಾ ಚಿಸೋವ್ ಒಕ್ಪುಸಾ (33) ಬಂಧಿತರು. ಆರೋಪಿಗಳಿಂದ ಸುಮಾರು 50 ಸಾವಿರ ರೂಪಾಯಿ ಮೌಲ್ಯದ 10 ಗ್ರಾಂ ಕೊಕೇನ್, ಒಂದು ಮೊಬೈಲ್ ಮತ್ತು ಒಂದು ಪಾಸ್ಪೋರ್ಟ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಮುಂಬೈನಿಂದ ಕೊಕೇನ್ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದರು.

ಬಂಧಿತ ಆರೋಪಿ ಜೆರೊಮಿಯಾ ಚಿಸೋವ್ ಒಕ್ಪುಸಾ 2010ರಲ್ಲಿ ಹೆಣ್ಣೂರಿನಲ್ಲಿ ಕೊಕೇನ್ ಮಾರಾಟ ಮಾಡುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.