ಕೊಕ್ಕೊ: ಅಂತಿಮ ಹಂತಕ್ಕೆ ಮಹಿಳಾ ಕಾಲೇಜು

7

ಕೊಕ್ಕೊ: ಅಂತಿಮ ಹಂತಕ್ಕೆ ಮಹಿಳಾ ಕಾಲೇಜು

Published:
Updated:
ಕೊಕ್ಕೊ: ಅಂತಿಮ ಹಂತಕ್ಕೆ ಮಹಿಳಾ ಕಾಲೇಜು

ಕೋಲಾರ: ಇಲ್ಲಿನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಬೆಂಗಳೂರು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಕೊಕ್ಕೊ ಪಂದ್ಯಾವಳಿಯಲ್ಲಿ ಚಿಕ್ಕಬಳ್ಳಾಪುರದ ಕಾಲೇಜು ಮತ್ತು ಬೆಂಗಳೂರಿನ ಎನ್‌ಎಂಕೆಆರ್‌ವಿ ಕಾಲೇಜು ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡಿರುವ ಆತಿಥೇಯ ಕಾಲೇಜು ತಂಡ ಅಂತಿಮ ಹಂತ ತಲುಪಿದೆ.ಈಗಾಗಲೇ ಸೆಮಿಫೈನಲ್ ಹಂತ ತಲುಪಿರುವ ಬೆಂಗಳೂರಿನ ಮಹಾರಾಣಿ ಕಲಾ ಕಾಲೇಜು ಮತ್ತು ಕೆ.ಆರ್.ಪುರಂ ಮಹಿಳೆಯರ ಪ್ರಥಮ ದರ್ಜೆ ಕಾಲೇಜು ನಡುವೆ ಬುಧವಾರ ಬೆಳಿಗ್ಗೆ ಪಂದ್ಯ ನಡೆಯಲಿದೆ. ಗೆಲ್ಲುವ ತಂಡದ ಜೊತೆಗೆ ಅತಿಥೇಯ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ ಸ್ಪರ್ಧೆ ಗಿಳಿಯಲಿದೆ.ಒಟ್ಟು 7 ಕಾಲೇಜುಗಳ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿವೆ. ಪಂದ್ಯಾವಳಿಯನ್ನು ಬೆಳಿಗ್ಗೆ ಕಾಲೇಜು ಪ್ರಾಂಶುಪಾಲ ರಾಮೇಗೌಡ ಉದ್ಘಾಟಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry