ಶನಿವಾರ, ಮೇ 8, 2021
19 °C

ಕೊಟ್ಟಿಗೆ ಗೊಬ್ಬರಕ್ಕೆ ಹೆಚ್ಚಿದ ಬೇಡಿಕೆ

ಪ್ರಜಾವಾಣಿ ವಾರ್ತೆ/ಚಂದ್ರಕಾಂತ ಬಾರಕೇರ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: `ದಕ್ಷಿಣ ಕಾಶಿ~ ಪ್ರಸಿ ದ್ಧಿಯ ಶ್ರೀಕಾಲಕಾಲೇಶ್ವರ ಕ್ಷೇತ್ರದಲ್ಲಿ ಕಳೆದ ಚಂದ್ರಮಾನ ಯುಗಾದಿಯಂದು ನಡೆದ `ಮಳೆ-ಬೆಳೆ~ ಭವಿಷ್ಯದಲ್ಲಿ ಪ್ರಸಕ್ತ ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಮಳೆಗಳು ಉತ್ತಮ ರೀತಿಯಲ್ಲಿ ಸುರಿಯುತ್ತವೆ.

 

ನಿರೀಕ್ಷೆಗೂ ಮೀರಿ ರೈತ ಉತ್ತಮ ಇಳುವರಿ ಪಡೆ ಯುತ್ತಾನೆ~ ಎಂಬ ಭವಿಷ್ಯವಾಣಿ ಬೆನ್ನಲೇ ಪ್ರಸಕ್ತ ವರ್ಷದ ಕೃಷಿ ಚಟುವಟಿಕೆಗಳನ್ನು ತಾಲ್ಲೂಕಿನ ರೈತ ಸಮೂಹ ಬಿರುಸು ಗೊಳಿಸಿದ್ದಾನೆ.ಮುಂಗಾರು ಹಂಗಾಮಿನ ಮೋಡ ಗಳು ಮಳೆ ಸುರಿಸುವ ಲಕ್ಷಣಗಳು ದಟ್ಟವಾಗುತ್ತಿದ್ದಂತೆ, ಇತ್ತ ಮಣ್ಣಿನ ಮಗ ಮೂಲ ಕೃಷಿ ಪದ್ದತಿಗೆ ಮರಳುವ ಲಕ್ಷಣಗಳು ಗೋಚರಿಸುತ್ತಿವೆ.ಬೇಡಿಕೆಗೆ ಕಾರಣ: ತಾಲ್ಲೂಕಿನ ಒಟ್ಟು 45,265 ಹೆಕ್ಟರ್ ಸಾಗುವಳಿ ಪ್ರದೇಶ ದಲ್ಲಿ 29,830 ಎರಿ (ಕಪ್ಪು ಮಣ್ಣಿನ ಪ್ರದೇಶ), 9,945 ಹೆಕ್ಟರ್ ಮಸಾರಿ, 5,120 ಹೆಕ್ಟರ್ ಬಂಜರು, 370 ಹೆಕ್ಟರ್ ಕೃಷಿಗೆ ಯೋಗ್ಯವಲ್ಲದ ಬಂಜರು (ಕರ್ಲ) ಭೂ ಪ್ರದೇಶವಿದೆ.ಈ ಹಿಂದೆ ಪ್ರತಿಯೊಬ್ಬ ರೈತರ ಮನೆ ಯಲ್ಲಿಯೂ ಜಾನುವಾರು ಗಳಿದ್ದವು. ಆದರೆ, ಕೃಷಿಕರ ಮನೆ ಗಳಲ್ಲೆಗ ಜಾನು ವಾರುಗಳಿದ್ದ ಮನೆಯವರು ತಮ್ಮ ಹೊಲಕ್ಕೆ ಕೊಟ್ಟಿಗೆ ಗೊಬ್ಬರ ಹಾಕಿದರೆ ಬೇರೆಯವರಿಗೆ ಸಿಗುವುದಿಲ್ಲ. ಹೊಲ ಗಳಿಲ್ಲದವರು ಜಾನುವಾರುಗಳನ್ನು ಹೊಂದಿದ್ದರೆ ಅಂಥವರಿಗೆ ದುಂಬಾಲು ಬಿದ್ದು ತಮ್ಮ ಹೊಲಕ್ಕೆ ಕೊಟ್ಟಿಗೆ ಗೊಬ್ಬರ ಹಾಕಲು ತಯಾರಿ ನಡೆಸುತ್ತಿರುವವರ ಸಂಖ್ಯೆ ಹೆಚ್ಚಿದೆ.ಕೊಟ್ಟಿಗೆ ಗೊಬ್ಬರ ಮಾರಾಟ: ತಾಲ್ಲೂಕಿನ ಕುಗ್ರಾಮಗಳಾದ ಸಾಗರಸ ಕೊಪ್ಪ, ಬೇವಿನಕಟ್ಟಿ, ಲಕ್ಕಲಕಟ್ಟಿ, ದ್ಯಾಮುಣಸಿ, ದಿಂಡೂರ, ಕೊಡಗಾ ನೂರ, ಕಾಲಕಾಲೇಶ್ವರ, ನಾಗರಸ ಕೊಪ್ಪ ತಾಂಡಾ, ಪುರ್ತಗೇರಿ, ರಾಜೂರ, ಗೋಗೇರಿ, ರಾಮಾಪೂರ, ಜಿಗೇರಿ, ಮ್ಯಾಕಲ್‌ಝರಿ, ಭೈರಾಪೂರ, ಭೈರಾ ಪೂರ ತಾಂಡಾ ಮುಂತಾದ ಕುಗ್ರಾಮಗಳ ಜಮೀನು ರಹಿತ ರೈತರು ಕೊಟ್ಟಿಗೆ ಗೊಬ್ಬರ ಮಾರಾಟ ಮಾಡು ತ್ತಿದ್ದಾರೆ.ಒಂದು ಟ್ರ್ಯಾಕ್ಟರ್ ಕೊಟ್ಟಿಗೆ ಗೊಬ್ಬರಕ್ಕೆ (ಫಲವತ್ತತೆಗೆ ಅನುಗುಣ ವಾಗಿ) 1,200 ರಿಂದ 1,500 ರೂ. ವರೆಗೆ ಬೆಲೆ ಇದೆ. ಟ್ರ್ಯಾಕ್ಟರ್ ಮೂಲಕ ಹೊಲಕ್ಕೆ ಕೊಟ್ಟಿಗೆ ಗೊಬ್ಬರ ಕೊಂಡೊ ಯ್ಯಲು ಒಂದು ಟ್ರ್ಯಾಕ್ಟರ್ ಗೆ 1,200 ರಿಂದ 1,500 (ವ್ಯಾಪ್ತಿಗೆ ಅನುಗುಣ ವಾಗಿ) ನೀಡಬೇಕು. ಹೀಗೆ ಒಟ್ಟು 2,500 ರಿಂದ 3,000 ರೂ. ಟ್ರ್ಯಾಕ್ಟರ್ ಕೊಟ್ಟಿಗೆ ಗೊಬ್ಬರ ಖರೀದಿಗೆ ತಗಲುತ್ತದೆ. ಒಂದು ಎಕರೆ ಹೊಲ ತುಂಬಿಸಲು 8 ರಿಂದ 10 ಟ್ರ್ಯಾಕ್ಟರ್ ಕೊಟ್ಟಿಗೆ ಗೊಬ್ಬರ ಬೇಕು.ಎಷ್ಟೇ ದುಬಾರಿಯಾದ್ರೂ ಕೊಟ್ಟಗೆ ಗೊಬ್ಬರದಿಂದ ಹೊಲ ತುಂಬಿಸಿದರೆ ಉತ್ತಮ ಇಳುವರಿ ಪಡೆಯಬಹುದು ಎನ್ನುತ್ತಾರೆ ಹಿರಿಯ ಪ್ರಗತಿ ಪರ ರೈತ ಕೂಡ್ಲೆಪ್ಪ ಗುಡಿಮನಿ.ಕೊಟ್ಟಿಗೆ ಗೊಬ್ಬರ ಹರಡುವ ವಿಧಾನ: ಹೊಲದ ತುಂಬೆಲ್ಲ      20:25 ಅಡಿ ಅಂತರಕ್ಕೆ ಒಂದರಂತೆ ಸಣ್ಣ ಗಾತ್ರದ ಕೊಟ್ಟಿಗೆ ಗ್ಬೊಬರದ ಗುಂಪುಗಳನ್ನು ಹಾಕಲಾಗುತ್ತದೆ. ಬಳಿಕ ಕೂಲಿ ಕಾರ್ಮಿಕರಿಂದ ಚಿಕ್ಕ ಗುಂಪುಗಳ ಗೊಬ್ಬರವನ್ನು ಹೊಲದ ತುಂಬೆಲ್ಲಾ ಎರಚಲಾಗುತ್ತದೆ. ಒಂದು ಹೊಲಕ್ಕೆ ಒಂದು ವರ್ಷ ಕೊಟ್ಟಿಗೆ ಗೊಬ್ಬರ ತುಂಬಿಸಿದರೆ ಕನಿಷ್ಠ ಮೂರ‌್ನಾಲ್ಕು ವರ್ಷಗಳ ವರೆಗೆ ಉತ್ತಮ ಇಳುವರಿ ಪಡೆಯಬಹು ದಾಗಿದೆ. ನಾಲ್ಕನೇ ವರ್ಷಕ್ಕೆ          ಮತ್ತೆ ಕೊಟ್ಟಿಗೆ ಗೊಬ್ಬರ ಹಾಕಬೇಕು ಎನ್ನುತ್ತಾರೆ ರೈತ ಶಶಿಧರ       ಹೂಗಾರ.ಇಲಾಖೆ ಗೊಬ್ಬರ ಬಳಸಿ: ಕೃಷಿ ಇಲಾಖೆ ರಿಯಾಯ್ತಿ ದರದಲ್ಲಿ ನೀಡುವ ಎರೆ ಹುಳು, ಕೋಳಿ, ಸಕ್ಕರೆ ಕಾರ್ಖಾನೆ ಗೊಬ್ಬರಗಳನ್ನು ಹೊಲಗಳಿಗೆ ಹಾಕುವು ದರಿಂದ ಕೊಟ್ಟಿಗೆ ಗೊಬ್ಬರದಷ್ಟೇ ಇಳುವರಿ ಪಡೆಯಬಹುದು.

ಈ ಹಿನ್ನೆಲೆಯಲ್ಲಿ ಕೊಟ್ಟಿಗೆ ಗೊಬ್ಬ ರದ ಜೊತೆಗೆ ಇಲಾಖೆಯ ಗೊಬ್ಬರ ಗಳನ್ನು ಬಳಸಿ ಎನ್ನುತ್ತಾರೆ ರೋಣ ತಾಲ್ಲೂಕು ಕೃಷಿ ಅಧಿಕಾರಿ    ಎಸ್.ಎ. ಸೂಡಿಶೆಟ್ಟರ್ `ಪ್ರಜಾವಾಣಿ~ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.