ಸೆಂಟೆನಿಯಲ್/ಲಾಸ್ ಏಂಜಲೀಸ್ (ಐಎಎನ್ಎಸ್/ಎಪಿ/ಎಎಫ್ಪಿ): ಅಮೆರಿಕದ ನ್ಯೂಟೌನ್ ಶಾಲೆಯಲ್ಲಿ ಜರುಗಿದ್ದ ಮುಗ್ಧ ಮಕ್ಕಳ ನರಹತ್ಯೆಗೆ ಶನಿವಾರ ಒಂದು ವರ್ಷ ತುಂಬಿದ ಸಂದರ್ಭದಲ್ಲೇ ಕೊಲರಾಡೊ ಹೈಸ್ಕೂಲ್ನಲ್ಲಿ ಇಂತಹದ್ದೇ ಮತ್ತೊಂದು ಘಟನೆ ಜರುಗಿದೆ.

ಕೊಲರಾಡೊದ ಅರಪಾವೊ ಹೈಸ್ಕೂಲ್ನಲ್ಲಿ ಶಿಕ್ಷಕರೊಬ್ಬರ ಹತ್ಯೆಗೆ ಸಂಚು ರೂಪಿಸಿದ್ದ ವಿದ್ಯಾರ್ಥಿಯೊಬ್ಬ ನಡೆಸಿದ ದಾಳಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಬಳಿಕ ಆ ವಿದ್ಯಾರ್ಥಿ ತನಗೆ ತಾನೇ ಗುಂಡು ಹೊಡೆದುಕೊಂಡು ಪ್ರಾಣ ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಗುಂಡು ಹಾರಿಸಿದ ವಿದ್ಯಾರ್ಥಿಯನ್ನು ಕಾರ್ಲ್ ಹ್ಯಾಲ್ವರ್ಸನ್ ಪಿಯರ್ಸನ್ ಎಂದು ಗುರುತಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಚಿಕ್ಕ ಪಿಸ್ತೂಲ್ ಇಟ್ಟುಕೊಂಡು ಶಾಲೆಗೆ ಬಂದಿದ್ದ ಪಿಯರ್ಸನ್, ನಿರ್ದಿಷ್ಟ ಶಿಕ್ಷಕರೊಬ್ಬರ ಹೆಸರು ಕೇಳಿಕೊಂಡು ಅವರನ್ನು ಹುಡುಕುತ್ತಿದ್ದ. ಈ ವಿಷಯ ತಿಳಿದು ಆ ಶಿಕ್ಷಕ ಶಾಲೆಯಿಂದ ಕಾಲ್ಕಿತ್ತಿದ್ದರು’ ಎಂದು ಅರಪಾವೊ ಕೌಂಟಿ ಅಧಿಕಾರಿ ಗ್ರೇಸನ್ ರಾಬಿನ್ಸನ್ ತಿಳಿಸಿದ್ದಾರೆ.

‘ಸೇಡು ತೀರಿಸಿಕೊಳ್ಳುವ ಉದ್ದೇಶದಿಂದಲೇ ಶಾಲೆಗೆ ಬಂದಂತಿದ್ದ ಕಾರ್ಲ್, ಕೈಯಲ್ಲಿ ಬಂದೂಕು ಹಿಡಿದು ನಿರ್ದಿಷ್ಟ ಶಿಕ್ಷಕರೊಬ್ಬರ ಹೆಸರನ್ನು ಕೂಗಾಡುತ್ತ ಓಡಾಡುತ್ತಿದ್ದ. ಇದನ್ನು ಗಮನಿಸಿದ ಶಾಲಾ ವಿದ್ಯಾರ್ಥಿಗಳು ಕೋಣೆಯ ಬಾಗಿಲು ಮುಚ್ಚಿಕೊಂಡಿದ್ದರು. ಪೊಲೀಸರು ಬಂದಿರುವುದು ಖಚಿತವಾದ ನಂತರವೇ ಬಾಗಿಲು ತೆರೆದು ಹೊರಬಂದಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ವಿದ್ಯಾರ್ಥಿ ಎಂದಿನಂತೆ ಶಾಲೆಯ ಮುಖ್ಯ ದ್ವಾರದಿಂದಲೇ ಶಾಲೆಗೆ ಬಂದಿದ್ದ. ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಕರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಕಾರಣಕ್ಕಾಗಿ ಈ ಕೃತ್ಯ ಎಸಗಿರುವ ಶಂಕೆ ಇದೆ’ ಎಂದು ರಾಬಿನ್ಸನ್ ತಿಳಿಸಿದ್ದಾರೆ. ಆದರೆ, ಇನ್ನೊಂದು ಮೂಲದ ಪ್ರಕಾರ, ಶಾಲೆಯ ಗ್ರಂಥಪಾಲಕ ವಿದ್ಯಾರ್ಥಿಯ ಗುರಿಯಾಗಿದ್ದ. ಶಾಲಾ ಆವರಣದಲ್ಲಿ ಎರಡು ಸ್ಫೋಟಕಗಳು ಪತ್ತೆಯಾಗಿದ್ದು, ಆ ಪೈಕಿ ಒಂದನ್ನು ನಿಷ್ಕ್ರಿಯ ಗೊಳಿಸಲಾಗಿದೆ. ಘಟನೆಯಲ್ಲಿ ಯಾರೊಬ್ಬರೂ ಗಾಯಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.

ಘಟನೆ ಜರುಗಿದ 20 ನಿಮಿಷಗಳ ಬಳಿಕ ಅಧಿಕಾರಿಗಳು ಶಾಲೆಗೆ ಹೋಗಿದ್ದರು. ಆದರೆ, ಅಷ್ಟಾರಲ್ಲಾಗಲೇ ಗುಂಡು ಹಾರಿಸಿದ ವಿದ್ಯಾರ್ಥಿ ಹೆಣವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಎಂದು ವಿವರಿಸಿದ್ದಾರೆ.

ಅಮೆರಿಕದ ಶಾಲೆಗಳಲ್ಲಿ ಪದೇಪದೇ ನಡೆಯುತ್ತಿರುವ ಇಂತಹ ಘಟನೆಗಳಿಂದ ಪಾಲಕರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಮಕ್ಕಳು ಬಂದೂಕು ಬಳಸುವ ಕುರಿತ ಚರ್ಚೆಗೆ ಮತ್ತಷ್ಟು ಗ್ರಾಸ ಒದಗಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.