ಭಾನುವಾರ, ಜೂನ್ 13, 2021
29 °C

ಕೊಳಗೇರಿ: ಮೂಲಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: “ಇಲ್ಲಿನ ಕೊಳಗೇರಿ ಪ್ರದೇಶ ಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು” ಎಂದು ಆಗ್ರಹಿಸಿ ಕೊಳಗೇರಿ ನಿವಾಸಿಗಳ ಹಿತಾಭಿವೃದ್ಧಿ ಹಾಗೂ ಸಾಂಸ್ಕೃತಿಕ ಸೇವಾ ಸಂಘದ ಸದಸ್ಯರು ಹಾಗೂ ಮಹಿಳಾ ಸ್ತ್ರೀ ಶಕ್ತಿ ಸಂಘದ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಕೊಳಚೆ ಪ್ರದೇಶಗಳಿಗೆ ಒಳಚರಂಡಿ ವ್ಯವಸ್ಥೆ, ಬೀದಿ ದೀಪದ ವ್ಯವಸ್ಥೆ, ಅಂಗನ ವಾಡಿ ಕಟ್ಟಡಗಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆಯ ಸೌಲಭ್ಯಗಳ ಕೊರತೆಯಿಂದ ಇಲ್ಲಿನ ನಿವಾಸಿಗಳಿಗೆ ಪ್ರತಿನಿತ್ಯ ತೊಂದರೆಯಾಗುತ್ತಿದೆ.ಮುಖ್ಯವಾಗಿ ಇಲ್ಲಿನ ಲಕ್ಷ್ಮೀ ಸಿಂಗನ ಕೇರಿಯಲ್ಲಿ ಮಧ್ಯಭಾಗದಲ್ಲಿ ಕೆರೆಯ ಹತ್ತಿರವಿರುವ ಮನೆಗಳಿಗೆ ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲ. ಇದರಿಂದಾಗಿ ಮಳೆಗಾಲದಲ್ಲಿ ಮನೆಯ ಒಳಗಡೆ ನೀರು ಹರಿದು ಬರುತ್ತಿವೆ. ಮತ್ತು ಹೊಸ ಯಲ್ಲಾಪುರದಲ್ಲಿ ಸಾರ್ವಜನಿಕ ಶೌಚಾ ಲಯವಿದ್ದು ಅದಕ್ಕೆ ಬಳಸಲು ನೀರಿನ ಸೌಲಭ್ಯವಿಲ್ಲ.ಮತ್ತು ಸಾರಸ್ವತಪುರ ದಲ್ಲಿ ಅಂಗನವಾಡಿ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಮಕ್ಕಳಿಗೆ ಸರಿಯಾದ ಅಂಗನವಾಡಿ ಕಟ್ಟಡದ ವ್ಯವಸ್ಥೆ ಇಲ್ಲ. ಈ ನಿಟ್ಟಿನಲ್ಲಿ ಕೊಳಚೆ ನಿವಾಸಿಗಳ ಸಮಸ್ಯೆ ಗಳತ್ತ ಸರ್ಕಾರ ಗಮನಹರಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಆಂಜನೇಯ ನಗರ, ನೆಹರೂ ನಗರ, ಸರಸ್ವತಿಪೂರ, ಅತ್ತಿಕೊಳ್ಳ, ಹಾವೇರ ಪೇಟ್, ಹೊಸಯಲ್ಲಾಪೂರ, ನಗರಕರ ಕಾಲೋನಿ, ಲಕ್ಷ್ಮೀ ಸಿಂಗನಕೇರಿ ಮತ್ತು ಜನ್ನತನಗರದ ನಿವಾಸಿಗಳು ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.