ಬೀದರ್: ನಗರದಲ್ಲಿನ ತೆರೆದ ಚರಂಡಿ, ಸೊಳ್ಳೆಗಳ ಪಿಡುಗಿಗೆ ಪರಿಹಾರವಾಗಿ ಅಭಿವೃದ್ಧಿ ಪಡಿಸುತ್ತಿರುವ ಒಳಚರಂಡಿ ವ್ಯವಸ್ಥೆಗೆ ಪೂರಕವಾಗಿ ನಗರ ಹೊರವಲಯದಲ್ಲಿ, ಗೊರನಹಳ್ಳಿ ಸಮೀಪ ಕೊಳಚೆ ನೀರು ಸಂಸ್ಕರಣ ಘಟಕ (ಎಸ್ಟಿಪಿ) ಸ್ಥಾಪಿಸಲು ಉದ್ದೇಶಿಸಿದ್ದರೂ, ಆರಂಭದಲ್ಲೇ ಎದುರಾದ ವಿರೋಧದ ಹಿನ್ನೆಲೆಯಲ್ಲಿ ನೆನೆಗುದಿಗೆ ಬಿದ್ದಿದ್ದು, ವಿಳಂಬವಾಗಿದೆ.

ಕೊಳಚೆ ನೀರು ಸಂಸ್ಕರಣ ಘಟಕ ಸ್ಥಾಪನೆ ಆಗುವುದರಿಂದ ಈ ಭಾಗದಲ್ಲಿ ವಾಯು ಮಾಲಿನ್ಯ ಆಗುತ್ತದೆ, ಅಂತರ್ಜಲ ಮಲೀನವಾಗುತ್ತದೆ; ಆಸುಪಾಸಿನ ಪ್ರದೇಶಗಳಲ್ಲಿ ವಾಸಿಸಲು ಆಗುವುದಿಲ್ಲ ಎಂಬ ಆತಂಕಗಳು ಸದ್ಯ ವ್ಯಕ್ತವಾಗಿವೆ.

ಈ ಆತಂಕಗಳನ್ನು ಬಗೆಹರಿಸುವ ಮತ್ತು ಪ್ರಸ್ತುತ ಗೊರನಹಳ್ಳಿ ಬಳಿ ಸ್ಥಾಪಿಸಲು ಉದ್ದೇಶಿಸಿರುವ ಕೊಳಚೆ ನೀರು ಸಂಸ್ಕರಣ ಘಟಕವನ್ನು (ಎಸ್ಟಿಪಿ) ಪರಿಸರಕ್ಕೆ ಮತ್ತು ಸ್ಥಳೀಯರು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರದಂತೆ ನಿರ್ಮಾಣ ಮಾಡಲು ಒತ್ತು ನೀಡಲಾಗುತ್ತದೆ ಎಂಬ ವಿಶ್ವಾಸ ಮೂಡಿಸುವ ಯತ್ನ ಈಗ ನಡೆದಿದೆ.

ಇದರ ಭಾಗವಾಗಿ ಈಚೆಗೆ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳನ್ನು ಹೈದರಾಬಾದ್ನಲ್ಲಿ ಚಾಲನೆಯಲ್ಲಿರುವ ಎಸ್ಟಿಪಿ ವೀಕ್ಷಣೆಗೆ ಕರೆದೊಯ್ದಿದ್ದ ಕೆಯುಐಡಿಎಫ್ಸಿ ಅಧಿಕಾರಿಗಳು, ಎರಡನೇ ಹಂತದಲ್ಲಿ ಗೊರನಹಳ್ಳಿ ಆಸುಪಾಸಿನ ಈಗ ಯೋಜನೆ ವಿರೋಧಿಸುತ್ತಿರುವ ಮುಖಂಡರು, ನಾಗರಿಕರನ್ನು ಕರೆದೊಯ್ದು ವಾಸ್ತವ ಮನದಟ್ಟು ಮಾಡಲು ನಿರ್ಧರಿಸಿದ್ದಾರೆ.

ಕೆಯುಐಡಿಎಫ್ಸಿಯ, ಎಸ್ಟಿಪಿ ಯೋಜನೆಗೆ ಸಂಬಂಧಿತ ಎಇಇ ಶಶಿಕಾಂತ್ ಮಳ್ಳಿ ಅವರು, ಭೌಗೋಳಿಕವಾಗಿ ತಗ್ಗು ಭಾಗದಲ್ಲಿದೆ ಎಂಬ ಕಾರಣಕ್ಕೆ ಗೊರನಹಳ್ಳಿ ಬಳಿಯ ಭೂಮಿ ಆಯ್ಕೆ ಮಾಡಲಾಗಿದೆ. ಇದು, ನಗರ ಕೇಂದ್ರದಲ್ಲಿರುವ ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದ ಸ್ಥಳಕ್ಕಿಂತಲೂ 34 ಮೀಟರ್ ಕೆಳಗಿದೆ. ಹೀಗಾಗಿ, ಬಿದ್ದ ಮಳೆ ನೀರು, ಒಳಚರಂಡಿ ನೀರು ಸರಾಗವಾಗಿ ಹರಿದು ಬರುವ ಕಾರಣ ಅಲ್ಲಿ ಎಸ್ಟಿಪಿ ಸ್ಥಾಪನೆಗೆ ಭೂಮಿ ಗುರುತಿಸಲಾಗಿದೆ ಎನ್ನುತ್ತಾರೆ.

ಅಲ್ಲಿ ಈಗಾಗಲೇ 54 ಎಕರೆ ಭೂಮಿಯನ್ನು ಯೋಜನೆಗಾಗಿ ಸ್ವಾಧೀನ ಪಡೆದಿದ್ದು, ಮೊದಲ ಹಂತದಲ್ಲಿ ದೈನಿಕ 16 ಎಂಎಲ್ಡಿ ನೀರು ಸಂಸ್ಕರಣ ಮಾಡುವ ಘಟಕ ಸ್ಥಾಪನೆಯಾಗಲಿದೆ. ಕೊಳಚೆ ನೀರು ಸೇರಿ ಈ ಭಾಗದಲ್ಲಿ ಅಂತರ್ಜಲ ಮಲೀನವಾಗಲಿದೆ ಎಂಬ ಆತಂಕ ಹೆಚ್ಚಿನವರಿಗೆ ಇದೆ. ನ್ಯಾಯಾಲಯದಲ್ಲಿಯೂ ಈ ಅಂಶ ಉಲ್ಲೇಖವಾಗಿದ್ದು, ಇದನ್ನು ನಿವಾರಿಸಲು, ಕೊಳಚೆ ನೀರು ಸಂಗ್ರಹವಾಗುವಲ್ಲಿ ಕಾಂಕ್ರೀಟ್ನ ಮೇಲೆ ಗಟ್ಟಿಯಾದ ಪದರಿನ ಪ್ಲಾಸ್ಟಿಕ್ ಹಾಳೆಹೊದಿಸಲಿದ್ದು, ಪ್ರತಿ ಐದು ವರ್ಷಕ್ಕೊಮ್ಮೆ ಇದನ್ನು ಬದಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸುತ್ತಾರೆ.

ಒಮ್ಮೆ ಸಂಸ್ಕರಣಗೊಂಡ ಬಳಿಕ ನೀರನ್ನು ಬಿಡಲಿದ್ದು, ಇದನ್ನು ಕುಡಿಯುವುದನ್ನು ಹೊರತುಪಡಿಸಿ ತೋಟಗಾರಿಕೆ, ಸ್ವಚ್ಛತೆ ಮತ್ತಿತರ ಕಾರ್ಯಗಳಿಗೆ ಬಳಸಬಹುದಾಗಿದೆ. ಒಳಚರಂಡಿ ನೀರು ಸಂಸ್ಕರಣ ಘಟಕ ಅಭಿವೃದ್ಧಿ ಹೊಂದುತ್ತಿರುವ ಯಾವುದೇ ನಗರದ ಅಗತ್ಯವಾಗಿದ್ದು, ತೆರೆದ ಚರಂಡಿ ಸಮಸ್ಯೆಗೆ ಪರಿಹಾರ ಸಿಗುವ ಕಾರಣ ಸಾಂಕ್ರಾಮಿಕ ರೋಗಗಳನ್ನು ಬಹುಮಟ್ಟಿಗೆ ನಿಯಂತ್ರಿಸುವುದು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಡುತ್ತಾರೆ.

ಎಸ್ಟಿಪಿ ಅನುಕೂಲಗಳನ್ನು ವಿವರಿಸುವ ಹೈದರಾಬಾದ್ನ ಅಂಬರಪೇಟೆಯಲ್ಲಿನ ಘಟಕದ ಅಧಿಕಾರಿ ರಾಮರೆಡ್ಡಿ ಅವರು, ಘಟಕದ ಆಸುಪಾಸಿನಲ್ಲಿಯೂ ಜನವಸತಿ ಇದ್ದು, ಯಾವುದೇ ಸಮಸ್ಯೆಯಿಲ್ಲ. ಪ್ರತಿನಿತ್ಯ ನಿರ್ವಹಣೆ ಮಾಡುವ ಕಾರಣ ವಾಸನೆಯೂ ಬರುವುದಿಲ್ಲ. ಸಂಸ್ಕರಿಸಿದ ನೀರನ್ನು ಮತ್ತೆ ನದಿಗೆ ಬಿಡಲಿದ್ದು, ತರಕಾರಿ ಬೆಳೆಯಲು, ಸ್ವಚ್ಛತೆ ಮತ್ತಿತರ ಉದ್ದೇಶಗಳಿಗೆ ಬಳಕೆಯಾಗುತ್ತಿದೆ ಎಂದು ತಿಳಿಸಿದರು.

ಶಶಿಕಾಂತ್ ಮಳ್ಳಿ ಅವರು, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಘಟಕ ಸ್ಥಾಪನೆಯ ಕಾಮಗಾರಿ ಆರಂಭಿಸಲಾಗುತ್ತದೆ. ಮೊದಲಿನ ಅಂದಾಜಿನಂತೆ 2013ರ ಅಂತ್ಯಕ್ಕೆ ಘಟಕ ಪೂರ್ಣಗೊಳ್ಳಬೇಕಿತ್ತು. ಈಗಿನ ವಿರೋಧದ ಹಿನ್ನೆಲೆಯಲ್ಲಿ ಇನ್ನು ಒಂದು ವರ್ಷ ವಿಳಂಬ ಆಗಬಹುದು ಎಂದು ಅಭಿಪ್ರಾಯಪಡುತ್ತಾರೆ.

ಏಷಿಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ನೆರವಿನಲ್ಲಿ ರೂ. 39.80 ಕೋಟಿ ವೆಚ್ಚದಲ್ಲಿ ಘಟಕವನ್ನು ಸ್ಥಾಪಿಸಲಾಗುತ್ತಿದೆ.ಮೊದಲಿಗೆ ದೈನಿಕ 16 ಎಂಎಲ್ಡಿ ನೀರು ಸಂಸ್ಕರಣೆ ಗುರಿ ಇದೆ. ಎರಡನೇ ಹಂತದಲ್ಲಿ 36 ಎಂಎಲ್ಡಿಗೆ ವಿಸ್ತರಿಸುವ ಯೋಜನೆ ಇದೆ ಎಂದರು.

ತಾಂತ್ರಿಕ ಅಧಿಕಾರಿ ಪ್ರಭುಲಿಂಗ ಶೀಲವಂತ ಅವರ ಪ್ರಕಾರ, 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಇದ್ದು, ಅಂದಾಜು ವೆಚ್ಚದ ಶೇ 60 ಎಡಿಬಿ ನೆರವು ಆಗಿದ್ದರೆ, ರಾಜ್ಯ ಸರ್ಕಾರ ಶೇ 30ರಷ್ಟು ಭರಿಸುತ್ತಿದೆ. ಶೇ 10ರಷ್ಟನ್ನು ಸ್ಥಳೀಯ ನಗರಸಭೆ ಭರಿಸಲಿದೆ ಎಂದು ವಿವರಿಸಿದರು.

ಅಧಿಕಾರಿಗಳ ಪ್ರಕಾರ, ಘಟಕದ ನಿರ್ಮಾಣ ಪೂರ್ಣಗೊಂಡ ಬಳಿಕ ನಿರ್ವಹಣೆಗಾಗಿ ನಗರಸಭೆಗೆ ಹಸ್ತಾಂತರ ಮಾಡುವ ಉದ್ದೇಶವಿದ್ದು, ಅಂತಿಮ ನಿರ್ಧಾರವಾಗಿಲ್ಲ. ಪ್ರಸ್ತುತ, ನಗರದಲ್ಲಿ ಕಸ, ತ್ಯಾಜ್ಯ ವಿಲೇವಾರಿಯನ್ನೇ ಸಮರ್ಪಕವಾಗಿ ನಿಭಾಯಿಸದ ನಗರಸಭೆ, ಕೊಳಚೆ ನೀರು ಸಂಸ್ಕರಣ ಘಟಕವನ್ನು ನಿರ್ವಹಣೆ ಮಾಡಬಲ್ಲದೇ ಎಂಬುದು ಈಗಿನ ಪ್ರಶ್ನೆ. ಹೀಗಾಗಿ, ಘಟಕದ ನಿರ್ವಹಣೆಯನ್ನು ನಗರಸಭೆಗೆ ವಹಿಸುವ ಬದಲು, ಷರತ್ತುಗಳಿಗೊಳಪಟ್ಟು ಯಾವುದಾದರೂ ಖಾಸಗಿ ಸಂಸ್ಥೆಗೆ ವಹಿಸುವ ಸಾಧ್ಯತೆಗಳನ್ನು ಪರಿಶೀಲಿಸಬೇಕು ಎಂಬ ಸಲಹೆಯೂ ಅಧಿಕಾರಿಗಳಿಗೆ ಬಂದಿದೆ.

ಬಹುಶಃ ಈ ಸಲಹೆ ಕಾರ್ಯರೂಪಕ್ಕೆ ಬಂದರೆ ಗೊರನಹಳ್ಳಿ ಆಸುಪಾಸಿನ ನಿವಾಸಿಗಳಷ್ಟೇ ಅಲ್ಲ, ನಗರದ ಜನರು ಆತಂಕದಿಂದ ಮುಕ್ತರಾಗಬಹುದು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.