ಮಂಗಳವಾರ, ಜೂನ್ 22, 2021
22 °C

ಕೊಹ್ಲಿ ಗರ್ಜನೆಗೆ ಪಾಕಿಸ್ತಾನ ಚಿತ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೀರ್‌ಪುರ (ಪಿಟಿಐ): `ಶೇರ್ ಎ ಬಾಂಗ್ಲಾ~ ಕ್ರೀಡಾಂಗಣದಲ್ಲಿ ಭಾನುವಾರ ವಿರಾಟ್ ಕೊಹ್ಲಿ ಅಕ್ಷರಶಃ ಗರ್ಜಿಸಿದರು. ಈ ಗರ್ಜನೆಗೆ ಚಿತ್ ಆಗಿದ್ದು ಪಾಕಿಸ್ತಾನ.ಸಚಿನ್ (52) ಹಾಗೂ ಕೊಹ್ಲಿ ಆಡಿದ ರೀತಿ ಪಾಕ್ ಪಾಲಿಗೆ ಮುಳ್ಳಾಗಿ ಪರಿಣಮಿಸಿತು. ಸಚಿನ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗ ಕೊಹ್ಲಿ ಒಂದು ವರ್ಷದ ಮಗು! ಆದರೆ ಸಚಿನ್ ಅವರನ್ನು ಮೀರಿಸುವ ಇನಿಂಗ್ಸ್ ಕಟ್ಟಿದರು.ಪರಿಣಾಮ ಏಷ್ಯಾಕಪ್ ಟೂರ್ನಿಯ ಈ ಪಂದ್ಯದಲ್ಲಿ ಪಾಕ್ ನೀಡಿದ 330 ರನ್‌ಗಳ ಗುರಿಯನ್ನು ದೋನಿ ಬಳಗ 47.5 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ತಲುಪಿತು. `ಬದ್ಧ ಎದುರಾಳಿ~ಯಾದ ಪಾಕ್ ವಿರುದ್ಧದ ಈ `ಹೈವೋಲ್ಟೇಜ್~ ಪಂದ್ಯದಲ್ಲಿ ಬಂದ ಜಯ ಭಾರತದ ಅಭಿಮಾನಗಳ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.    ಮೂಲಕ ಟೂರ್ನಿಯ ಫೈನಲ್ ತಲುಪುವ ಭಾರತದ ಆಸೆ ಜೀವಂತವಾಗಿದೆ.   

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.