ಶುಕ್ರವಾರ, ಮೇ 14, 2021
35 °C

ಕೋಲಾರ ಅಭಿವೃದ್ಧಿ: ಮುಖ್ಯಮಂತ್ರಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಯ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು 19 ಬೇಡಿಕೆಗಳುಳ್ಳ ಮನವಿ ಪತ್ರವನ್ನು ಬಿಜೆಪಿ ಜಿಲ್ಲಾ ಘಟಕದ ಪ್ರಮುಖರು ಈಚೆಗೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಬೆಂಗಳೂರಿನಲ್ಲಿ ಸಲ್ಲಿಸಿದರು.ವಿದ್ಯುತ್ ಸಮಸ್ಯ್ನೆ ನಿವಾರಿಸಬೇಕು. ಯರಗೋಳು ಯೋಜನೆ ಅನುಷ್ಠಾನಗೊಳಿಸಬೇಕು. ಶ್ರೀನಿವಾಸಪುರದ ಜಲಗೊಂಡನಹಳ್ಳಿ ಮತ್ತು ಅಗರ ಸುತ್ತಮುತ್ತಲ 200 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆಗೆ ಸರ್ಕಾರಕ್ಕೆ ಮಂಡಿಸಿರುವ ರೂ.22 ಕೋಟಿ ಪ್ರಸ್ತಾವ ಜಾರಿಗೆ ತರಬೇಕು.ಕೆಜಿಎಫ್ ಅನ್ನು ತಾಲ್ಲೂಕು ಕೇಂದ್ರವಾಗಿ ಘೋಷಿಸಬೇಕು. ರೇಷ್ಮೆ ಬೆಳೆಗಾರರ ಸಮಸ್ಯೆಗೆ ಸ್ಪಂದಿಸಬೇಕು. ಕೆರೆಗಳ ಸಂರಕ್ಷಣೆ-ಅಭಿವದ್ಧಿಗೆ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಬೇಕು. ಮುಳಬಾಗಲು ತಾಲ್ಲೂಕಿನ ಕುರುಡಮಲೆ, ನಗರದಲ್ಲಿರುವ ಅಂತರಗಂಗೆಯನ್ನು ರಾಜ್ಯ ಪ್ರವಾಸಿ ತಾಣಗಳಾಗಿ ಘೋಷಿಸಿ ಅಭಿವೃದ್ಧಿಗೊಳಿಸಬೇಕು.

 

ಕೆಜಿಎಫ್ ಪ್ರದೇಶದ 12 ಸಾವಿರ ಎಕರೆ ಸರ್ಕಾರಿ ಸ್ವಾಮ್ಯಕ್ಕೆ ಸೇರಿದ್ದು ಅದನ್ನು ವಿಶೇಷ ಆರ್ಥಿಕ ವಲಯ ಯೋಜನೆಗೆ ಅಳವಡಿಸಿದರೆ ಉದ್ಯೋಗಾವಕಾಶ ಹೆಚ್ಚುತ್ತವೆ. ಮೈಸೂರಿನಲ್ಲಿ ಉದ್ದೇಶಿಸಲಾಗಿರುವ ಉಷ್ಣ ವಿದ್ಯುತ್ ಘಟಕಗಳನ್ನು ಇಲ್ಲಿಗೆ ಸ್ಥಳಾಂತರಿಸಿದರೆ ಚಿನ್ನದಗಣಿ ಸ್ಥಗಿತವಾಗಿ ಹೆಚ್ಚಾಗಿರುವ ನಿರುದ್ಯೋಗಿಗಳಿಗೆ ಅವಕಾಶ ಕಲ್ಪಿಸಿದಂತಾಗುವುದು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.