ಕೋಲಾರ: ಒಂದು ನಾಯಿ ಮಿರಿ ಮಿರಿ ಮಿಂಚುವ ತೋಳದಂಥ ಮೈ ಪ್ರದರ್ಶಿಸುತ್ತಾ ನಿಂತಿದ್ದರೆ, ಮತ್ತೊಂದು ಎತ್ತರದ ನಿಲುವಿನಿಂದ ರಾಜಗಾಂಭೀರ್ಯವನ್ನು ಪ್ರದರ್ಶಿಸುತ್ತಿತ್ತು. ಮತ್ತೊಂದರ ನೋಟವೇ ಭಯ ಮೂಡಿಸುವಂತಿತ್ತು, ಅಂಥ ಕಡೆ ದೂರದಿಂದಲೇ ನಿಂತು ಜನ ನಾಯಿಗಳ ವೀಕ್ಷಣೆ ಮಾಡುತ್ತಿದ್ದರು. ಮಾಲೀಕರು ಮಾತ್ರ ತಮ್ಮ ನೆಚ್ಚಿನ ನಾಯಿಗಳ ಮೈಸವರಿ ಮುದ್ದು ಮಾಡುತ್ತಿದ್ದರು...

ಎಲ್ಲೆಡೆಯೂ ನಾಯಿಗಳ ಓಡಾಟ, ಕೆನೆತ, ನೆಗೆತಗಳೇ ತುಂಬಿದ್ದವು. ವೈವಿಧ್ಯಮಯ ಬಣ್ಣ, ಗುಣ, ನಡತೆ, ಸ್ವಭಾವಗಳುಳ್ಳ ನಾಯಿಗಳ ಸಾಮ್ರಾಜ್ಯವೊಂದು ಅಲ್ಲಿ ದಿಢೀರನೆ ಪ್ರತ್ಯಕ್ಷವಾದಂತಿತ್ತು. ನಾಯಿಗಳು ಜನಾಕರ್ಷಣೆ ಕೇಂದ್ರಬಿಂದುಗಳಾಗಿದ್ದವು.

ಈ ಅಪರೂಪದ ದೃಶ್ಯಾವಳಿಗಳು ನಗರದ ಮೆಥೋಡಿಸ್ಟ್ ಸಂಸ್ಥೆಗೆ ಸೇರಿದ ಮೈದಾನದಲ್ಲಿ ಭಾನುವಾರ ಕಂಡು ಬಂದವು. ಪಶುಪಾಲನೆ ಮತ್ತು ಪಶು ಆರೋಗ್ಯ ಇಲಾಖೆಯು ರೋಹಿಣಿ ಪೆಟ್ ಕೇರ್ ಸಂಸ್ಥೆಯ ಸಹಯೋಗದಲ್ಲಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಏರ್ಪಡಿಸಿದ್ದ ಶ್ವಾನ ಪ್ರದರ್ಶನ ಕಾರ್ಯಕ್ರಮ ಅದು.

ನಗರ, ಜಿಲ್ಲೆಯ ವಿವಿಧ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳಿಂದ 20 ವಿವಿಧ ಜಾತಿಗೆ ಸೇರಿದ 316 ನಾಯಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರೆ ಸಾವಿರಾರು ಮಂದಿ, ಅದರಲ್ಲೂ ಮಕ್ಕಳು ಅಚ್ಚರಿ ಮತ್ತು ಕುತೂಹಲದಿಂದ ವೀಕ್ಷಿಸುತ್ತಿದ್ದರು.

ಒಮ್ಮೆಗೇ ಅಷ್ಟೊಂದು ಜನರನ್ನು ಕಂಡ ಕೆಲವು ನಾಯಿಗಳು ಗಾಬರಿಪಟ್ಟಿದ್ದವು. ಚಿತ್ತ ಬಂದತ್ತ ನುಗ್ಗುತ್ತಿದ್ದ ಅವುಗಳನ್ನು ನಿಯಂತ್ರಿಸಲು ಮಾಲೀಕರು ಹರಸಾಹಸ ಮಾಡುತ್ತಿದ್ದರು.

ಬಹಳಷ್ಟು ಮಂದಿ ನಾಯಿಗಳ ಮೈದಡವಿ, ಪ್ರೀತಿಯಿಂದ ಅವುಗಳನ್ನು ಹತ್ತಿರದಲ್ಲೇ ಹಿಡಿದಿಟ್ಟುಕೊಳ್ಳುವ ಪ್ರಯತ್ನಗಳು ಗಮನ ಸೆಳೆದವು. ಮಾಲೀಕರತ್ತ ಕೆನೆಯುತ್ತ, ಅವರ ಸುತ್ತ ಬಾಲ ಅಲ್ಲಾಡಿಸುತ್ತಾ ಕೆಲವು ನಾಯಿಗಳು ತಮ್ಮ ಪ್ರೀತಿ, ವಿಶ್ವಾಸ ತೋರುತ್ತಿದ್ದವು.

10 ತಳಿಯ ನಾಯಿಗಳು –ಗ್ರೇಟ್ ಡೇನ್, ಜರ್ಮನ್ ಶೆಪರ್ಡ್ ಡಾಬರ್ ಮನ್, ಗೋಲ್ಡ್ ರಿಟ್ರೈವರ್, ರಾಟ್ರೀಲರ್, ಸಿಟ್ಸರ್, ಕಾಕರ್ ಸ್ಟಿನಿಯಲ್, ಲ್ಯಾಬ್ರೆಡಾರ್, ಮ್ಯಾಸ್ಟಿಫ್ ಮತ್ತು ಮುಧೋಳ್ –ಶೋ ಛಾಂಪಿಯನ್ ಪ್ರಶಸ್ತಿ ಗಳಿಸಿದವು. ತಳಿಯ ಗುಣಗಳು, ಓಟ, ಸೂಚನೆಗಳ ಪಾಲನೆಯನ್ನು ಗಮನಿಸಿ ಡಾ.ನರಸಿಂಹಮೂರ್ತಿ ತಂಡದವರು ಬಹುಮಾನ ಘೋಷಿಸಿದರು.

ಮಿನಿಯೇಚರ್ ಸ್ನೂಜರ್, ಅಖಿತ, ಡಾಗ್-ಡಿ-ಬೊರ್, ಜರ್ಮನ್ ಶೆಫರ್ಡ್, ಡಾಬರ್ ಮನ್, ಲ್ಯಾಬ್ರಡಾರ್, ಗೋಲ್ಡನ್ ರಿಟ್ರೀವರ್, ಬಾಕ್ಸರ್, ಗ್ರೇಟ್ ಡೇನ್, ಕಾಕರ್ ಸ್ಪಾನಿಯಲ್,ಪೊಮೇರಿಯನ್, ಪಗ್, ನೆಪೋಲಿಯನ್ ಮ್ಯಾಸ್ಟಿಫ್, ಮಿನಿಯೇಚರ್, ಗ್ರೇಟ್ ಹೂಂಡ್ ಸೇರಿದಂತೆ 20 ಜಾತಿಯ ನಾಯಿಗಳು ಪಾಲ್ಗೊಂಡಿದ್ದವು. ಪ್ರತಿ ತಳಿಯ ಗುಂಪಿನಲ್ಲೂ ಮೂರು ಬಹುಮಾನ ನೀಡಲಾಯಿತು.

ಪ್ರದರ್ಶನ ಉದ್ಘಾಟನೆ ಕಾರ್ಯಕ್ರಮದಲ್ಲಿ ಇಲಾಖೆ ಉಪನಿರ್ದೇಶಕ ಡಾ.ಬಿ.ಎನ್.ಶಿವರಾಂ, ಕಾಲುಬಾಯಿ ಜ್ವರ ನಿಯಂತ್ರಣ ನೋಡಲ್ ಅಧಿಕಾರಿ ಡಾ.ಆಂಜನೇಯ, ಇಲಾಖೆಯ ಕೇಂದ್ರ ಕಚೇರಿ ಉಪನಿರ್ದೇಶಕ ರಘುರಾಮೇಗೌಡ, ಡಿವೈಎಸ್ಪಿ ಕೆ.ಅಶೋಕ್ ಕುಮಾರ್, ನಗರ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್, ಸಹಾಯಕ ನಿರ್ದೇಶಕ ಚೆನ್ನಕೇಶವ, ರೋಹಿಣಿ ಪೆಟ್ ಕೇರ್ನ ಎಂ.ಎಚ್.ಪವಿತ್ರಾ, ಹನುಮಪ್ಪ ಮತ್ತು ಮಂಜುನಾಥ ಉಪಸ್ಥಿತರಿದ್ದರು. ವೈದ್ಯಾಧಿಕಾರಿ ಡಾ.ಅಫ್ಜಲ್ ಪಾಷಾ ಪ್ರದರ್ಶನದ ಉಸ್ತುವಾರಿ ಹೊತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.