ಮೊಹಾಲಿ (ಪಿಟಿಐ): ಗೌತಮ್ ಗಂಭೀರ್ (ಅಜೇಯ 66, 44ಎಸೆತ, 7ಬೌಂಡರಿ. 1 ಸಿಕ್ಸರ್) ಅವರ ಅರ್ಧಶತಕದ ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಕಿಂಗ್ಸ್ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಎಂಟು ವಿಕೆಟ್ಗಳ ಸುಲಭ ಗೆಲುವು ಪಡೆಯಿತು.

ಪಂಜಾಬ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಬುಧವಾರ ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರ್ಗಳಲ್ಲಿ 7 ವಿಕೆಟ್ಗೆ 124 ರನ್ ಗಳಿಸಿತು. ಆ್ಯಡಮ್ ಗಿಲ್ಕ್ರಿಸ್ಟ್ (ಅಜೇಯ 40, 30 ಎಸೆತ, 3 ಬೌಂ, 1 ಸಿಕ್ಸರ್) ಮತ್ತು ಶಾನ್ ಮಾರ್ಷ್ (33, 30 ಎಸೆತ, 4 ಬೌಂ) ಮಾತ್ರ ಕಿಂಗ್ಸ್ ಇಲೆವೆನ್ ಪರ ಉತ್ತಮ ಪ್ರದರ್ಶನ ನೀಡಿದರು. ಇದಕ್ಕೆ ಪ್ರತಿಯಾಗಿ ನೈಟ್ ರೈಡರ್ಸ್ 16.3 ಓವರ್ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 127 ರನ್ ಗಳಿಸಿತು.

ನೈಟ್ ರೈಡರ್ಸ್ನ ಬ್ರೆಂಡನ್ ಮೆಕ್ಲಮ್ (15) ಅವರು ಗಂಭೀರ್ ಜೊತೆ ಮೊದಲ ವಿಕೆಟ್ಗೆ 53 ರನ್ ಕಲೆ ಹಾಕಿ ಬುನಾದಿಯನ್ನು ಗಟ್ಟಿಗೊಳಿಸಿದರು. ಪಿಯೂಷ್ ಚಾವ್ಲಾ ಎಸೆತದಲ್ಲಿ ಮೆಕ್ಲಮ್ ಔಟಾದ ನಂತರ ಮನ್ವೀಂದರ್ ಬಿಸ್ಲಾ (11) ಬಂದರು. ಆದರೆ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ನಂತರ ಬಂದ ಜಾಕ್ ಕಾಲಿಸ್ (ಅಜೇಯ 30, 23ಎಸೆತ, 2ಬೌಂಡರಿ, 1ಸಿಕ್ಸರ್) ಗಂಭೀರ್ ಜೊತೆಗೂಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಅಲ್ಪ ಮೊತ್ತಕ್ಕೆ ಕುಸಿದ ಪಂಜಾಬ್: ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಅಲ್ಪ ಮೊತ್ತಕ್ಕೆ ಕುಸಿತ ಕಂಡಿತು. ಬ್ರೆಟ್ ಲೀ (26ಕ್ಕೆ 2) ಹಾಗೂ ಸುನಿಲ್ ನರೇನ್ (24ಕ್ಕೆ 2) ಅವರ ಸಮರ್ಥ ಬೌಲಿಂಗ್ ದಾಳಿ ಇದಕ್ಕೆ ಕಾರಣವಾಯಿತು. ಇತರ ಬೌಲರ್ಗಳೂ ಹೆಚ್ಚು ರನ್ ಬಿಟ್ಟುಕೊಡಲಿಲ್ಲ. ಇದರಿಂದ ಆತಿಥೇಯ ತಂಡಕ್ಕೆ ಬೃಹತ್ ಮೊತ್ತ ಪೇರಿಸಲು ಆಗಲಿಲ್ಲ.

ಟಾಸ್ ಗೆದ್ದ ಆ್ಯಡಮ್ ಗಿಲ್ಕ್ರಿಸ್ಟ್ ಬ್ಯಾಟಿಂಗ್ ಆಯ್ದುಕೊಂಡರು. ಪಾಲ್ ವಲ್ತಾಟಿ (8) ಮತ್ತು ಗಿಲ್ಕ್ರಿಸ್ಟ್ ಮೊದಲ ವಿಕೆಟ್ಗೆ 24 ರನ್ ಸೇರಿಸಿದರು. ಬ್ರೆಟ್ ಲೀ ಅವರು ವಲ್ತಾಟಿ ವಿಕೆಟ್ ಪಡೆಯುವ ಮೂಲಕ ಕಿಂಗ್ಸ್ ಇಲೆವೆನ್ಗೆ ಮೊದಲ ಆಘಾತ ನೀಡಿದರು.

ಈ ಹಂತದಲ್ಲಿ ನಾಯಕನಿಗೆ ಜೊತೆಯಾದ ಶಾನ್ ಮಾರ್ಷ್ ತಂಡದ ಮೊತ್ತವನ್ನು ನಿಧಾನವಾಗಿ ಹೆಚ್ಚಿಸತೊಡಗಿದರು. ಆದರೆ ಗಿಲ್ಕ್ರಿಸ್ಟ್ 28 ರನ್ ಗಳಿಸಿದ್ದ ವೇಳೆ ರನ್ ಗಳಿಸುವ ಸಂದರ್ಭ ಸ್ನಾಯು ಸೆಳೆತಕ್ಕೆ ಒಳಗಾಗಿ ಪೆವಿಲಿಯನ್ ಮರಳಿದರು. ಇದು ತಂಡಕ್ಕೆ ಹಿನ್ನಡೆ ಉಂಟುಮಾಡಿತು. ಮೇಲಿಂದ ಮೇಲೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.

ಮನ್ದೀಪ್ ಸಿಂಗ್ (6) ಅವರು ಬಾಲಾಜಿಗೆ ವಿಕೆಟ್ ಒಪ್ಪಿಸಿದರೆ, ಡೇವಿಡ್ ಹಸ್ಸಿ (10) ಅವರು ರನೌಟಾದರು. ತಂಡದ ಆರನೇ ವಿಕೆಟ್ ಬಿದ್ದಾಗ ಗಿಲ್ಕ್ರಿಸ್ಟ್ ಮತ್ತೆ ಕ್ರೀಸ್ಗೆ ಆಗಮಿಸಿದರು. ಅವರು 40 ರನ್ ಗಳಿಸಿ ಅಜೇಯರಾಗಿ ಉಳಿದರು. ನೈಟ್ ರೈಡರ್ಸ್ ತಂಡದ ಕ್ಷೇತ್ರರಕ್ಷಣೆ ಕೂಡಾ ಉತ್ತಮವಾಗಿತ್ತು. ಲಕ್ಷ್ಮೀಪತಿ ಬಾಲಾಜಿ ಮತ್ತು ರಜತ್ ಭಾಟಿಯಾ ತಲಾ ಒಂದು ವಿಕೆಟ್ ಪಡೆದರು.

ಸ್ಕೋರ್ ವಿವರ
ಕಿಂಗ್ಸ್ ಇಲೆವೆನ್ ಪಂಜಾಬ್: 20 ಓವರ್ಗಳಲ್ಲಿ 7 ವಿಕೆಟ್ಗೆ 124
ಆ್ಯಡಮ್ ಗಿಲ್ಕ್ರಿಸ್ಟ್ ಔಟಾಗದೆ 40

ಪಾಲ್ ವಲ್ತಾಟಿ ಸಿ ಬಿಸ್ಲಾ ಬಿ ಬ್ರೆಟ್ ಲೀ 08

ಶಾನ್ ಮಾರ್ಷ್ ಸಿ ಬಿಸ್ಲಾ ಬಿ ಬ್ರೆಟ್ ಲೀ 33

ಮನ್ದೀಪ್ ಸಿಂಗ್ ಸಿ ಭಾಟಿಯಾ ಬಿ ಲಕ್ಷ್ಮೀಪತಿ ಬಾಲಾಜಿ 06

ಡೇವಿಡ್ ಹಸ್ಸಿ ರನೌಟ್ 10

ಪಾರಸ್ ದೋಗ್ರಾ ಸಿ ಕಾಲಿಸ್ ಬಿ ಸುನಿಲ್ ನರೇನ್ 06

ದಿಮಿತ್ರಿ ಮಸ್ಕರೇನಸ್ ಸಿ ತಿವಾರಿ ಬಿ ರಜತ್ ಭಾಟಿಯಾ 09

ಪಿಯೂಷ್ ಚಾವ್ಲಾ ಬಿ ಸುನಿಲ್ ನರೇನ್ 09

ಇತರೆ: (ಲೆಗ್ಬೈ-1, ವೈಡ್-2) 03

ವಿಕೆಟ್ ಪತನ: 1-24 (ವಲ್ತಾಟಿ; 2.6), 1-44 (ಗಿಲ್ಕ್ರಿಸ್ಟ್ ಗಾಯಗೊಂಡು ನಿವೃತ್ತಿ; 5.5), 2-62 (ಮನ್ದೀಪ್; 9.3), 3-86 (ಮಾರ್ಷ್; 13.6), 4-87 (ಹಸ್ಸಿ; 14.2), 5-101 (ಮಸ್ಕರೇನಸ್; 16.5), 6-103 (ದೋಗ್ರಾ; 17.1), 7-124 (ಚಾವ್ಲಾ; 19.6)

ಬೌಲಿಂಗ್: ಬ್ರೆಟ್ ಲೀ 4-0-22-2, ಜಾಕ್ ಕಾಲಿಸ್ 3-0-23-0, ಸುನಿಲ್ ನರೇನ್ 4-0-24-2, ಲಕ್ಷ್ಮೀಪತಿ ಬಾಲಾಜಿ 4-0-20-1, ಯೂಸುಫ್ ಪಠಾಣ್ 1-0-7-0, ರಜತ್ ಭಾಟಿಯಾ 4-0-23-1

ಕೋಲ್ಕತ್ತ ನೈಟ್ ರೈಡರ್ಸ್ 16.3 ಓವರ್ಗಳಲ್ಲಿ 2 ವಿಕೆಟ್ಗೆ 127

ಬ್ರೆಂಡನ್ ಮೆಕ್ಲಮ್ ಸಿ ಮಸ್ಕರೇನಸ್ ಬಿ ಪಿಯೂಷ್ ಚಾವ್ಲಾ 15

ಗೌತಮ್ ಗಂಭೀರ್ ಔಟಾಗದೆ 66

ಮನ್ವೀಂದರ್ ಬಿಸ್ಲಾ ಬಿ ಪಿಯೂಷ್ ಚಾವ್ಲಾ 11

ಜಾಕ್ ಕಾಲಿಸ್ ಔಟಾಗದೆ 30

ಇತರೆ: (ಲೆಗ್ ಬೈ-4, ವೈಡ್-1) 05

ವಿಕೆಟ್ ಪತನ: 1-53 (ಮೆಕ್ಲಮ್; 5.5), 5-74 (ಬಿಸ್ಲಾ; 9.5).

ಬೌಲಿಂಗ್: ಪ್ರವೀಣ್ ಕುಮಾರ್ 3-1-23-0, ದಿಮಿತ್ರಿ ಮಸ್ಕರೇನಸ್ 4-0-23-0, ಹರ್ಮಿತ್ ಸಿಂಗ್ 2-0-26-0,

ಪಿಯೂಷ್ ಚಾವ್ಲಾ 4-0-19-2, ಭಾರ್ಗವ್ ಭಟ್ 3.3-0-32-0.

ಫಲಿತಾಂಶ: ಕೋಲ್ಕತ್ತ ನೈಟ್ ರೈಡರ್ಸ್ಗೆ ಎಂಟು ವಿಕೆಟ್ಗಳ ಜಯ

ಪಂದ್ಯ ಶ್ರೇಷ್ಠ: ಗೌತಮ್ ಗಂಭೀರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.